ಬೆಲೆ ಏರಿಕೆ ಮುಚ್ಚಿಹಾಕಲು ಬಿಜೆಪಿಯಿಂದ‌ ಕೋಮು ಗಲಭೆ ಸೃಷ್ಟಿ Mohammed Nalapad

Published : Apr 10, 2022, 07:35 PM ISTUpdated : Apr 10, 2022, 07:39 PM IST
ಬೆಲೆ ಏರಿಕೆ ಮುಚ್ಚಿಹಾಕಲು ಬಿಜೆಪಿಯಿಂದ‌ ಕೋಮು ಗಲಭೆ ಸೃಷ್ಟಿ Mohammed Nalapad

ಸಾರಾಂಶ

ಬೆಲೆ ಏರಿಕೆ ಮುಚ್ಚಿ ಹಾಕಲು ಬಿಜೆಪಿ‌ ಕೋಮು ಗಲಭೆ ಸೃಷ್ಟಿಸಲು ಟ್ರೈ ಮಾಡುತ್ತಿದೆ. ಹೋಮ್ ಮಿನಿಸ್ಟರ್ ಒಳ್ಳೆ ಫಸ್ಟ್ ಸ್ಟ್ಯಾಂಡರ್ಡ್ ಹುಡುಗರ ತರಹ, ಬೆಳಗ್ಗೆ ಒಂದು ಸಂಜೆ ಒಂದು ಹೇಳಿಕೆ ಕೊಡ್ತಾರೆ ಎಂದು ಮೊಹಮ್ಮದ್ ನಲಪಾಡ್ ಆರೋಪಿಸಿದ್ದಾರೆ.

ವರದಿ: ಗಿರೀಶ್ ಕುಮಾರ್ , ಏಷ್ಯಾನೆಟ್ ಸುವರ್ಣನ್ಯೂಸ್

ಗದಗ (ಎ.10): ಬೆಲೆ ಏರಿಕೆ ಮುಚ್ಚಿ ಹಾಕಲು ಬಿಜೆಪಿ‌ ಕೋಮು ಗಲಭೆ ಸೃಷ್ಟಿಸಲು ಟ್ರೈ ಮಾಡುತ್ತಿದೆ ಅಂತಾ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಆರೋಪಿಸಿದ್ದಾರೆ. ಗದಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಬಿವಿ ಶ್ರೀನಿವಾಸ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಜೆಜೆ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಚಂದ್ರು ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆಯನ್ನ ಟೀಕಿಸಿದ್ದಾರೆ.

ಹೋಂ ಮಿನಿಸ್ಟರ್ ಪಾಪ ಒಳ್ಳೆ ಫಸ್ಟ್ ಸ್ಟ್ಯಾಂಡರ್ಡ್ ಹುಡುಗರ ತರಹ, ಬೆಳಗ್ಗೆ ಒಂದು ಸಂಜೆ ಒಂದು ಹೇಳಿಕೆ ಕೊಡುತ್ತಿದ್ದಾರೆ.. ತಮ್ಮ ಸ್ಟೇಟ್ಮೆಂಟ್ ಕರೆಕ್ಟ್ ಮಾಡೋದಕ್ಕೆ ಯಾರೋ ಒಬ್ಬನನ್ನ ರೆಡಿ ಮಾಡಿ ಟಿವಿಯಲ್ಲಿ ಬಿಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ರು. ಯಾವುದೇ ಕೊಲೆ, ಹಲ್ಲೆ ಪ್ರಕರಣಗಳಾಗಲಿ.. ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಆದ್ರೆ, ಪ್ರಕರಣಕ್ಕೆ ಕಮ್ಯೂನಲ್ ಕಲರ್ ಕೊಡೋದು ಸರಿಯಲ್ಲ ಅಂತಾ ಹೇಳಿದ್ರು.

Chamundi Hills Ropeway Project ಪರಿಸರವಾದಿಗಳು ಮತ್ತು ರಾಜಮನೆತನದಿಂದಲೂ

ಮುಸ್ಲಿಂ ಟ್ಯಾಕ್ಸಿ ಚಾಲಕರ ಬ್ಯಾನ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತ್ನಾಡಿ, ಯಾವುದೂ ನಡೆಯಲ್ಲ. ಇವತ್ತು ನಾವು ಜೀವನ ಮಾಡ್ತಿರೋದು ಭಗವದ್ಗೀತೆ, ಖುರಾನ್, ಬೈಬಲ್, ಸಂವಿಧಾನದಿಂದ.. ಬಾಬಾ ಸಾಹೇಬರು ಕೊಟ್ಟ ಸಂವಿಧಾನದಲ್ಲಿ ನಾವೆಲ್ಲ ಭಾರತೀಯರು. ಕರ್ನಾಟಕದಲ್ಲಿರುವವರು ಕನ್ನಡಿಗರು ಅನ್ನೋದನ್ನ ಹೇಳಲಾಗುದೆ.

ನಾವೆಲ್ಲರೂ ಒಂದು. ಜೊತೆಗಿದ್ದೀವಿ ಅನ್ನೋ ಮನಸ್ಥಿತಿಯಲ್ಲಿ ನಾವಿದ್ದೇವೆ.. ಕಾಂಗ್ರೆಸ್ 60 ವರ್ಷ ಏನು ಮಾಡಿದೆ ಅಂತಾ ಕೆಲವರು ಕೇಳ್ತಾರೆ.. 60 ವರ್ಷ ಶಾಂತಿಯಿಂದ ಪ್ರೀತಿಯಿಂದ ಎಲ್ಲ ಸಮಾಜವನ್ನ ಜೊತೆಗೆ ಇಟ್ಟುಕೊಂಡು ನಡೆದಿದ್ದು ಕಾಂಗ್ರೆಸ್ ನ ಹಿರಿಮೆ ಅಂತಾ ಹೇಳಿದ್ರು.. ಆದ್ರೆ, ಬಿಜೆಪಿಯವರು ಏಳೇ ವರ್ಷದಲ್ಲಿ ನಮ್ಮನ್ನ ಒಡೆಯುವ ಕೆಲಸವನ್ನ ಮಾಡಿದ್ದಾರೆ.. ಬಿಜೆಪಿಯನ್ನ ಎತ್ತಿ ಒಗೆಯುವುವ ಜವಾಬ್ದಾರಿ ನಮ್ಮಂಥ ಯುವಕರದ್ದು.. ನೂರಕ್ಕೆ ನೂರಷ್ಟು ಬಿಜೆಪಿಯನ್ನ ಎತ್ತಿ ಎಸಿತಿವಿ... 

ಕಾಂಗ್ರೆಸ್ ಜೊತೆಗಿನ ಜಮೀರ್ ಅಹ್ಮದ್ ಮುನಿಸು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ನಲ್ಪಾಡ್, ಜಮೀರ್ ಅವರು ಕಾಂಗ್ರೆಸ್ ನ ದೊಡ್ಡ ನಾಯಕರು.. ಅವರು ಪಕ್ಷದಲ್ಲೇ ಉಳಿದುಕೊಳ್ಳುತ್ತಾರೆ‌ ಯಾವುದೇ ಹೊಂದಲ ಬೇಡ ಅಂದ್ರು. 

ಶೋಭಾ ಕರಂದ್ಲಾಜೆಗೆ ಮಂಪರು ಪರೀಕ್ಷೆ ಮಾಡಿಸಿ Vinay Kumar Sorake

ಬೆಲೆ ಏರಿಕೆ ವಿರುದ್ಧ ಕಿಡಿಕಾರಿದ ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ರೀನಿವಾದ: ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಮಾತ್ನಾಡಿ, ಕರ್ನಾಟಕದಿಂದ 25 ಜನರನ್ನ ಪಾರ್ಲಿಮೆಂಟ್ ಗೆ ಕಳುಹಿಸಿದ್ದೀರಿ.. ಕರ್ನಾಟಕದ ಪರ ಧ್ವನಿ ಎತ್ತಲಿ ಪಾಲಿಸಿ ಮೇಕಿಂಗ್ ಮಾಡಲಿ‌ ಅಂತಾ ಪಾರ್ಲಿಮೆಂಟ್ ಗೆ ಕಳಿಸಲಾಗಿದೆ..‌ ಆದರೆ ಅವರು ಇಲ್ಲಿ ಕೋಮುಗಲಭೆ ಗಲಾಟೆಗಳಿಗೆ ಕುಮ್ಮುಕ್ಕು ಕೊಡುತ್ತಿದ್ದಾರೆ.. ಅದನ್ನ ಬಿಡಬೇಕು.. ಬಿಜೆಪಿ ಅಂದ್ರೆ ಬೆಲೆ ಏರಿಕೆ..ನರೇಂದ್ರ ಮೋದಿ‌ ಅಂದ್ರೆ ಬೆಲೆ ಏರಿಕೆ.. 2014 ರಲ್ಲಿ 'ಮೆಹಂಗಾಹಿ ಡಾಯನ್ ಬನ್ ಗಯಿ ಹೈ ಅಂತ' ಬಿಜೆಪಿ ಹೇಳ್ತಿತ್ತು.. ಅದೇ ಡಾಯನ್ ನನ್ನ ಬಿಜೆಪಿ ಡಾರ್ಲಿಂಗ್ ಮಾಡಿಕೊಂಡು ಬೆಡ್ ರೂಮ್ ನಲ್ಲಿ ಮಲಗಿಸಿದೆ.. ಸಾಮಾನ್ಯ ಜನ್ರು ಹೋಟೆಲ್ ನಲ್ಲಿ ಊಟ ಮಾಡಲು ಆಗುತ್ತಿಲ್ಲ..ಊಟ ನಾವು ತಿಂದ್ರೆ ನಮ್ಮ ಜೊತೆ ಅಮಿತ್ ಶಾ, ನರೇಂದ್ರ ಮೋದಿನೂ ತಿಂತಾರೆ.. ಇವರಿಬ್ಬರದೂ ಬಿಲ್ (ಜಿಎಸ್ ಟಿ) ನಾವೇ ಕಟ್ಟಬೇಕು..

ಹಿಜಾಬ್, ಹಲಾಲ್ ಹೋರಾಟಕ್ಕೆ ಬಿಜೆಪಿ ಸಪೋರ್ಟ್: ಹಿಜಾಬ್, ಹಲಾಲ್ ಗಳಂಥ ಹೋರಾಟ ನಡೆಸುವವರಿಗೆ ನೇರವಾಗಿ ಬಿಜೆಪಿ ಸಪೋರ್ಟ್ ಮಾಡ್ತಿದೆ ಸಂತಾ ಆರೋಪಿಸಿದ ಅವ್ರು, ಪ್ರತಿಭಟನೆಯಲ್ಲಿ ಕೇವಲ ಜೈಕಾರ ಹಾಕುವುದರಿಂದ ಹೊಟ್ಟೆ ತುಂಬುತ್ತಾ? ಜೈಕಾರ ಹಾಕುವುದರಿಂದ ಕೆಲಸ ಸಿಗುತ್ತಾ? ಬೆಲೆ ಏರಿಕೆ ಇಳಿಯುತ್ತಾ? ಎಂದು ಪ್ರಶ್ನಿಸಿದ್ರು ಬೇರೆ ರಾಜ್ಯಗಳಲ್ಲಿ‌ ನಾವು ಹೋದಾಗ 'ಕರ್ ನಾಟಕ್'' ಕೈಸಾ ಹೈ ಅಂತಾರೆ.. ಕರ್ನಾಟಕ ಅಂದ್ರೆ ನಾಟಕ ಮಾಡೋರು ಅನ್ನೋ ಟೈಟಲ್ ಕೊಟ್ಟಿದ್ದಾರೆ.. ಅದು ಬಿಜೆಪಿಯಿಂದಾಗಿದೆ ಅಂತಾ ಟೀಕಿಸಿದರು.

PREV
Read more Articles on
click me!

Recommended Stories

ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!
ಡಿವೈಡರ್‌ಗೆ ಕಾರ್‌ ಡಿಕ್ಕಿ, ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿದ್ದ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸಜೀವ ದಹನ