ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವಿಷ್ಯಗಳು ವೈರಲ್ ಆಗ್ತಿರುತ್ತವೆ. ಈಗ ಚೀನಾದ ಹುಡುಗಿ ವಿಡಿಯೋ ಸುದ್ದಿ ಮಾಡ್ತಿದೆ. ಆಕೆಯನ್ನು ಅದೃಷ್ಟವಂತೆ ಎಂದು ಜನರು ಕರೆಯುತ್ತಿದ್ದಾರೆ. ಆಕೆ ಮದುವೆ ಆದ್ರೆ ಏನೆಲ್ಲ ಲಾಭವಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.
ಪ್ರಪಂಚ ಎಷ್ಟೇ ಮುಂದುವರಿಯಲಿ, ಜನರು ಚಂದ್ರ, ಮಂಗಳನತ್ತ ಸಾಗ್ತಿರಲಿ, ಮೂಢನಂಬಿಕೆ ಮಾತ್ರ ಕಡಿಮೆ ಆಗೋದಿಲ್ಲ. ಈಗ್ಲೂ ಗ್ರಹ, ನಕ್ಷತ್ರ, ಅದೃಷ್ಟ, ಶುಭ, ಅಶುಭವನ್ನು ನೋಡುವ ಜನರು ಸಾಕಷ್ಟು ಮಂದಿ. ಯಾವುದೇ ಶುಭ ಕೆಲಸ ಮಾಡುವ ಮೊದಲು ಜಾತಕ ತೋರಿಸುವ ಜನರು ನಮ್ಮಲ್ಲಿದ್ದಾರೆ. ಆರೋಗ್ಯ ಹದಗೆಟ್ಟಿದ್ದರೆ, ಮದುವೆಗೆ ಸಮಸ್ಯೆ ಆಗ್ತಿದ್ದರೆ ಕೂಡ ಜಾತಕ, ಸಂಖ್ಯಾಶಾಸ್ತ್ರದ ಮೊರೆ ಹೋಗ್ತಾರೆ. ಬರೀ ನಮ್ಮ ದೇಶದಲ್ಲಿ ಮಾತ್ರ ಮೂಢನಂಬಿಕೆ ಇಲ್ಲ. ಪ್ರಪಂಚದ ಅನೇಕ ಭಾಗದ ಜನರು ತಮ್ಮದೇ ಕೆಲ ನಂಬಿಕೆಯನ್ನು ಹೊಂದಿದ್ದಾರೆ. ಕೆಲವು ಕಡೆ ಜನರಿಗಿರುವ ನಂಬಿಕೆ ಹುಬ್ಬೇರಿಸುವಂತೆ ಮಾಡುತ್ತದೆ.
ಮದುವೆ (Marriage)ಯಲ್ಲಿ ಜಾತಕ (Horoscope) ನೋಡುವ ಪದ್ಧತಿ ನಮ್ಮಲ್ಲಿದೆ. ಇನ್ನು ಕೆಲವರು ರಾಶಿ ಹಾಗೂ ಸ್ವಭಾವವನ್ನು ಜ್ಯೋತಿಷ್ಯ (Astrology) ಶಾಸ್ತ್ರದ ಸಹಾಯದಿಂದ ಲೆಕ್ಕ ಹಾಕಿ ಮದುವೆಯಾಗ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಮ್ಮ ದೇಹದ ಪ್ರತಿಯೊಂದು ಅಂಗವೂ ತನ್ನದೇ ಆದ ವ್ಯಕ್ತಿತ್ವವನ್ನು ಹೇಳಿದೆ. ಹಸ್ತ, ಕಣ್ಣು, ಮೂಗು, ದೇಹದ ಮೇಲಿರುವ ಮಚ್ಚೆ ಕೂಡ ನಮ್ಮ ಸ್ವಭಾವವನ್ನು ಹೇಳುತ್ತದೆ. ಈ ವಿಷ್ಯವನ್ನು ಬರೀ ಭಾರತೀಯರು ಮಾತ್ರವಲ್ಲ ನಮ್ಮ ನೆರೆಯ ಚೀನಾ ಜನ ಕೂಡ ನಂಬುತ್ತಾರೆ. ಮುಖದ ಲಕ್ಷಣ ನೋಡಿ, ಅದೃಷ್ಟ ತರುವ ಹುಡುಗಿಯನ್ನು ಕೈ ಹಿಡಿಯಲು ಬಯಸ್ತಾರೆ. ಇದಕ್ಕೆ ಸಂಬಂಧಿಸಿದಂತೆ ಚೀನಾ ಸಾಮಾಜಿಕ ಜಾಲತಾಣದಲ್ಲಿ ಒಂದು ಹುಡುಗಿ ಫೋಟೋ ವೈರಲ್ ಆಗಿದೆ. ಈಗ ಆ ಹುಡುಗಿ ಹಾಗೂ ನಂಬಿಕೆ ಬಗ್ಗೆ ಗಂಭೀರ ಚರ್ಚೆ ಆಗ್ತಿದೆ.
undefined
ಮನೆಯಲ್ಲಿ ಪೂರ್ವಜರ ಫೋಟೋ ಇಡುವುದು ಸರಿಯೇ?
ನಾವು, ನೀವು ಸೇರಿದಂತೆ ಪ್ರತಿಯೊಬ್ಬರೂ ಸುಂದರವಾಗಿ ಕಾಣಲು ಬಯಸ್ತಾರೆ. ಸೌಂದರ್ಯ (Beauty) ಅವರ ಆತ್ಮವಿಶ್ವಾಸವನ್ನು(Confidence) ಹೆಚ್ಚಿಸುತ್ತದೆ ಎನ್ನುವ ನಂಬಿಕೆ (Belief) ಇದೆ. ಆದ್ರೆ ಇದೇ ಸೌಂದರ್ಯವನ್ನು ಚೀನಾ ಜನರು ಮೂಢನಂಬಿಕೆ (Blind Belief) ಜೊತೆ ಥಳಕು ಹಾಕಿದ್ದಾರೆ. ಅಲ್ಲಿನ ಜನರ ಪ್ರಕಾರ, ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿರುವ ಹುಡುಗಿ ಅದೃಷ್ಟವಂತೆ. ಆಕೆಯಂತೆ ಮುಖ ಹೊಂದಿರುವ ಹುಡುಗಿಯನ್ನು ಕೈ ಹಿಡಿದ ಹುಡುಗರ ಭಾಗ್ಯದ ಬಾಗಿಲು ತೆರೆಯುತ್ತದೆ.
ಅದೃಷ್ಟವಂತ ಮುಖ ಹೇಗಿರುತ್ತೆ? : ಚೀನಾದಲ್ಲಿ ಅದೃಷ್ಟ ಮುಖದ ಬಗ್ಗೆ ಜನರು ಬಹಳಷ್ಟು ನಂಬುತ್ತಾರೆ. ಚೀನಾದಲ್ಲಿ ಅದೃಷ್ಟದ ಮುಖವನ್ನು ವಾಂಗ್ ಫೂ ಕ್ಸಿಯಾಂಗ್ ಎಂದು ಕರೆಯುತ್ತಾರೆ. ಇದಕ್ಕೆ ಕೆಲವು ವಿಶೇಷ ಲಕ್ಷಣವಿದೆ. ಯಾವ ಹುಡುಗಿ ದುಂಡಗಿನ ಗಲ್ಲ ಹೊಂದಿರುತ್ತಾಳೋ, ಅಗಲವಾದ ಹಣೆ ಮತ್ತು ದುಂಡಗಿನ ಮುಖವನ್ನು ಹೊಂದಿರುತ್ತಾಳೋ ಆ ಹುಡುಗಿ ಅದೃಷ್ಟವಂತೆ. ಅಷ್ಟೇ ಅಲ್ಲ ಆ ಹುಡುಗಿ ಮೂಗು ದುಂಡಾಗಿರಬೇಕು ಅಲ್ಲದೆ ಮೂಗು ಉದ್ದವಾಗಿರಬೇಕು. ಮುಂಭಾಗದಿಂದ ಮೂಗು ನೇರವಾಗಿರಬೇಕು. ಕೆಳಗಿನ ತುಟಿ ಸ್ವಲ್ಪ ದಪ್ಪವಾಗಿರಬೇಕು, ಕಣ್ಣುಗಳು ಹೊಳೆಯಬೇಕು ಮತ್ತು ಕೂದಲು ಮೃದುವಾಗಿರಬೇಕು. ಈ ಎಲ್ಲ ಲಕ್ಷಣವನ್ನು ಹೊಂದಿರುವ ಹುಡುಗಿ ದಯಾಳುವಾಗಿರುತ್ತಾಳೆ. ಪತಿಗೆ ಸ್ನೇಹಿತರನ್ನು ಹೊಂದಲು ಸಹಾಯ ಮಾಡುತ್ತಾಳೆ. ಈಕೆಯನ್ನು ಮದುವೆಯಾದ ಹುಡುಗರ ಜೀವನ ಸುಖಮಯವಾಗಿರುತ್ತದೆ ಎಂದು ಚೀನಾ ಜನರು ನಂಬಿದ್ದಾರೆ.
ವೈಷ್ಣವರು ಏಕೆ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದಿಲ್ಲ ಗೊತ್ತಾ?
ವೈರಲ್ ವಿಡಿಯೋಕ್ಕೆ ಸಿಕ್ಕಿದೆ ಇಷ್ಟೊಂದು ಲೈಕ್ಸ್ : ಚೀನಾದಲ್ಲಿ ಇಂಥ ಮುಖ ಹೊಂದಿರುವ ಹುಡುಗಿಯೊಬ್ಬಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡ್ತಿದೆ. ವೈರಲ್ ಆಗಿರುವ ಹುಡುಗಿಗೆ 29 ವರ್ಷ. ಆಕೆ ಹೆನಾನ್ ಪ್ರಾಂತ್ಯದ ನಿವಾಸಿ. ಈ ವಿಡಿಯೋಕ್ಕೆ 5 ಲಕ್ಷ 70 ಸಾವಿರಕ್ಕಿಂತ ಹೆಚ್ಚು ಲೈಕ್ ಪಡೆದಿದೆ. 76 ಸಾವಿರಕ್ಕೂ ಹೆಚ್ಚು ಮಂದಿ ಹುಡುಗಿ ಮುಖ ಹಾಗೂ ನಂಬಿಕೆಗೆ ಸಂಬಂಧಿಸಿದಂತೆ ಕಮೆಂಟ್ ಮಾಡಿದ್ದಾರೆ.