ಬೆಂಗಳೂರು ನಗರದ ಇತಿಹಾಸಕ್ಕೆ ಮೆರಗು ನೀಡಿದ ವಿ.ವಿ.ಪುರಂ ಹಬ್ಬ

By Sathish Kumar KH  |  First Published Nov 26, 2022, 4:41 PM IST

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ, ಸಜ್ಜನ್ ರಾವ್ ಸರ್ಕಲ್ ನಲ್ಲಿ ವಿ.ವಿ.ಪುರಂ ಬಡಾವಣೆ ನಿರ್ಮಾಣಗೊಂಡು ನೂರು ವರ್ಷ ತುಂಬಿದೆ.ಇದರ ಪ್ರಯುಕ್ತ ವಿ.ವಿ.ಪುರಂ ಹಬ್ಬವನ್ನಾಗಿ ಎರಡು ದಿನಗಳ ಕಾಲ ಅಚರಣೆ ಮಾಡಲಾಗುತ್ತಿದೆ.


ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು ( ನ:26):  ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ, ಸಜ್ಜನ್ ರಾವ್ ಸರ್ಕಲ್ ನಲ್ಲಿ ವಿ.ವಿ.ಪುರಂ ಬಡಾವಣೆ ನಿರ್ಮಾಣಗೊಂಡು ನೂರು ವರ್ಷ ತುಂಬಿದೆ.ಇದರ ಪ್ರಯುಕ್ತ ವಿ.ವಿ.ಪುರಂ ಹಬ್ಬವನ್ನಾಗಿ ಎರಡು ದಿನಗಳ ಕಾಲ ಅಚರಣೆ ಮಾಡಲಾಗುತ್ತಿದೆ.

Tap to resize

Latest Videos

ಸರ್.ಎಂ.ವಿಶ್ವೇಶ್ವರಯ್ಯರ ಪ್ರತಿಮೆ ಮಾಲಾರ್ಪಣೆ ಜೊತೆಯಲ್ಲಿ ಸಸಿ ನೆಡುವ ಮೂಲಕ ವಿ.ವಿ.ಪುರಂ ಹಬ್ಬಕ್ಕೆ ಶಾಸಕರಾದ ಉದಯ್ ಬಿ.ಗರುಡಾಚಾರ್, ಗರುಡಾ ಫೌಂಡೇಷನ್ ಸಂಸ್ಥಾಪಕಿ ಶ್ರೀಮತಿ ಮೇದಿನಿ ಗರುಡಾಚಾರ್ ರವರು ಎರಡು ದಿನಗಳ ಕಾಲ ಜರುಗುವ ವಿ.ವಿ.ಪುರಂ ಹಬ್ಬಕ್ಕೆ ಚಾಲನೆ ನೀಡಿದರು. ಶಾಸಕ ಉದಯ್ ಬಿ.ಗರುಡಾಚಾರ್ ಮಾತನಾಡಿ ವಿ.ವಿ.ಪುರಂ ಬಡಾವಣೆಯನ್ನ ಭಾರತರತ್ನ ರತ್ನ ಸರ್.ಎಂ.ವಿಶ್ವೇಶ್ವರಯ್ಯ ರವರು ಖುದ್ದು ನಕ್ಷೇ ತಯಾರಿಸಿದರು. ಅವರು ನಿರ್ಮಿಸಿದ ವಿ.ವಿ.ಪುರಂ ಬಡಾವಣೆಗೆ ಈಗ ನೂರರ ಸಂಭ್ರಮ ಇದರ ಪ್ರಯುಕ್ತ ಮೂದಲನೇಯ ಬಾರಿಗೆ ವಿ.ವಿ.ಪುರಂ ಹಬ್ಬವೆಂದು ಎರಡು ದಿನಗಳ ಕಾಲ ಬೆಂಗಳೂರು ನಗರದ ಇತಿಹಾಸಕ್ಕೆ ಮೆರುಗು ನೀಡುವಂತೆ ಅಚರಿಸಲಾಗುತ್ತಿದೆ. ಎರಡು ದಿನಗಳ ಕಾಲ ಸಾಂಸ್ಕೃತಿಕ ಉತ್ಸವ,ಕಲಾಮೇಳ ಮತ್ತು ಆಹಾರ ಮೇಳ, ರಂಗೋಲಿ ಸ್ಪರ್ಧೆ , ಸಾಧನೆ ಮಾಡಿದ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸರ್.ಎಂ.ವಿ.ರವರು ಶಿಸ್ತು, ನಿಯಮ ಪಾಲನೆ, ಶ್ರದ್ದೆಯಿಂದ ರಾಷ್ಟ್ರ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮೈಸೂರು ಮಹಾರಾಜ ಆಡಳಿತದಲ್ಲಿ ದಿವಾನರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯ ಸಮಗ್ರ ಅಭಿವೃದ್ದಿಗೆ ಸರ್.ಎಂ.ವಿ.ಕೊಡುಗೆ ಅಪಾರ, ಅವರ ಸಾಧನೆಯನ್ನ ಗೌರವಿಸಿ ಭಾರತರತ್ನ ನೀಡಿ ಗೌರವಿಸಲಾಯಿತು ಮತ್ತು ಜನ್ಮ ದಿನಾಚರಣೆಯನ್ನು ಇಂಜನಿಯರ್ ದಿನ ಎಂದು ಅಚರಿಸಲಾಗುತ್ತಿದೆ. ಇದು ಮುಂದಿನ ಪೀಳಿಗೆಗೆ ಸರ್.ಎಂ.ವಿಶ್ವೇಶ್ವರಯ್ಯರವರ ಜೀವನ ಸಾಧನೆ ಅರಿತುಕೊಳ್ಳಲಿ ಎಂದು ವಿ.ವಿ.ಪುರಂ.ಹಬ್ಬದ ಉದ್ದೇಶ ಎಂದು ಹೇಳಿದರು.

Appu Food Festival ವಿವಿ ಪುರಂನಲ್ಲಿ ಪತಿ ಫೇವರೆಟ್‌ ದೋಸೆ ಸವಿದ ಅಶ್ವಿನಿ ಮತ್ತು ಮಗಳು!

ವಿವಿ ಪುರಂಗೆ ನೂರರ ಸಂಭ್ರಮ: ಬೆಂಗಳೂರು ನಗರ ನಿರ್ಮಾಣ ಮಾಡಿದ ನಾಡಪ್ರಭು ಕೆಂಪೇಗೌಡ ಕಾಲದಲ್ಲಿ ಬೆಂಗಳೂರು ನಗರದ ಅನೇಕ ಬಡಾವಣೆಗಳು ಉದಯತಾಳಿದ್ವು.ಇದರಲ್ಲಿ ವಿವಿ ಪುರಂ ಬಡಾವಣೆ ಕೂಡ ಜನ್ಮ ತಾಳಿ ನೂರು ವರ್ಷ ಪೂರೈಸಿದೆ.ನಾಡು ಕಂಡ ಶ್ರೇಷ್ಠ ಇಂಜಿನಿಯರ್ ಸರ್.ಎಂ.ವಿ.ವಿಶ್ವೇಶ್ವರಯ್ಯ ನವರು ಬಡಾವಣೆಗೆ‌ ನೀಲ ನಕ್ಷೇ ಹಾಕಿ ನಿರ್ಮಾಣ ಮಾಡಲು ಸಹಾಯ ಮಾಡಿದರು. ಜೊತೆಗೆ ಬಡಾವಣೆಗೆ ವಿವಿ ಪುರಂ ಅಂತ ಹೆಸರು ಬಂದಿದೆ ಎಂದು ಬಡಾವಣೆಯ ಹಿರಿಯ ನಾಗರೀಕರು ಹೇಳುತ್ತಾರೆ.  ವಿ.ವಿ. ಪುರಂ ಬಡಾವಣೆಯಲ್ಲಿ ಸಜ್ಜನ್ ರಾವ್ ಸರ್ಕಲ್ , ಪುಡ್ ಸ್ಟ್ರೀಟ್, ಇತಿಹಾಸ ಪ್ರಸಿದ್ಧ ದೇವಾಲಯಗಳಿವೆ. 100 ವರ್ಷಕ್ಕೂ ಮೊದಲು ಸಜ್ಜನ್ ರಾವ್ ಸರ್ಕಲ್ ನಲ್ಲಿ ಹೊಲ ಗದ್ದೆ ‌ಮಾಡಲಾಗುತ್ತಿತ್ತು. ಅಪಾರ್ಟ್ಮೆಂಟ್ ಸಂಸ್ಕೃತಿ ಬಂದ ಮೇಲೆ ಇದಲ್ಲಾ ಮರೆಯಾಗಿದೆ ಅಂತ ಅ ದಿನಗಳ ಬಗ್ಗೆ ಹಿರಿಯರು ನೆನಪು ಮಾಡಿಕೊಂಡರು.

click me!