Mahashivratri 2022: ಈ ದಿನ ನಡೆಯಲಿದೆ ಪವಾಡ, ಪಂಚಗ್ರಾಹಿ ಯೋಗದಿಂದ ಬದಲಾಗಲಿದೆ ಕೆಲ ರಾಶಿಯವರ ಅದೃಷ್ಟ

By Suvarna News  |  First Published Feb 28, 2022, 12:11 PM IST

ಓಂ ನಮಃ ಶಿವಾಯ ಮಂತ್ರದಲ್ಲಿ ಮಹಾನ್ ಶಕ್ತಿ ಅಡಗಿದೆ. ಶಿವರಾತ್ರಿಯ ಸುಸಂದರ್ಭದಲ್ಲಿ ಭಕ್ತರು ಶಿವನ ಜಪ ಶುರು ಮಾಡಿದ್ದಾರೆ. ಮಹಾಶಿವರಾತ್ರಿಯಂದು ಮಹಾಸಂಯೋಗ ನಡೆಯಲಿದೆ. ಕೆಲ ರಾಶಿಯವರ ಬದುಕು ಬದಲಾಗಲಿದೆ. 
 


ಈಶ್ವರ (Ishwar) ,ಮುಕ್ಕಣ್ಣ, ರುದ್ರ, ಲಯಕಾರ ಹೀಗೆ ನಾನಾ ಹೆಸರುಗಳಿಂದ ಕರೆಯಿಸಿಕೊಳ್ಳುವ ಮಹಾಶಕ್ತಿ ಶಿವನ ಆರಾಧನೆಗೆ ಶಿವರಾತ್ರಿ (Shivaratri) ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದಲ್ಲಿ ಶಿವರಾತ್ರಿಯನ್ನು ಭಯ-ಭಕ್ತಿಯಿಂದ ಆಚರಿಸಲಾಗುತ್ತದೆ. ಇಷ್ಟಾರ್ಥಗಳನ್ನು ಪೂರೈಸಲು ಶಿವನಿಗೆ ರುದ್ರಾಭಿಷೇಕ (Rudrabhishekha)ವನ್ನು ಶಿವರಾತ್ರಿಯಂದು ಮಾಡಲಾಗುತ್ತದೆ. ಮಹಾಶಿವರಾತ್ರಿ ವ್ರತ ಕಥಾ ಪಠಣ ನಡೆಯುತ್ತದೆ.

ಭಗವಂತ ಶಿವನು ಎಂದೂ ತನ್ನ ಭಕ್ತರನ್ನು ನಿರಾಶೆಗೊಳಿಸುವುದಿಲ್ಲ. ಶುದ್ಧ ಮನಸ್ಸಿನಿಂದ ಆರಾಧಿಸುವ ಎಲ್ಲ ಭಕ್ತರಿಗೂ ಶಿವನ ಆಶಿರ್ವಾದ ಸದಾ ಇರುತ್ತದೆ ಎಂದು ನಂಬಲಾಗಿದೆ. ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಶಿವರಾತ್ರಿ ಆಚರಿಸಲಾಗುತ್ತದೆ. ಶಿವಭಕ್ತರ ಪಾಲಿಗೆ ಶಿವರಾತ್ರಿ ಮಂಗಳಕರ ರಾತ್ರಿ. ಶಿವಪಾರ್ವತಿಯ ವಿವಾಹ ದಿನವಾದ ಅಂದು ತನ್ನನ್ನು ಆರಾಧಿಸಿದ ಭಕ್ತರಿಗೆ ಕೈಲಾಸವಾಸಿ ಪರಮೇಶ್ವರ ಅಸ್ತು ಎನ್ನುತ್ತಾನೆ ಎಂದು ನಂಬಲಾಗಿದೆ. ಈ ಬಾರಿ ಶಿವರಾತ್ರಿ ಮತ್ತಷ್ಟು ವಿಶೇಷವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹಾಶಿವರಾತ್ರಿಯ ದಿನದಂದು ಮಕರ ರಾಶಿಯಲ್ಲಿ ಚಂದ್ರ, ಶನಿ, ಶುಕ್ರ, ಬುಧ ಮತ್ತು ಮಂಗಳ ಸೇರಿ ಪಂಚ ಗ್ರಾಹಿ ಯೋಗ ಉಂಟಾಗಲಿದೆ. ಗ್ರಹಗಳ ಈ ಮಹಾನ್ ಸಂಯೋಜನೆಯು 5 ರಾಶಿಯವರಿಗೆ ಶುಭಕರವಾಗಿರಲಿದೆ. ಶಿವರಾತ್ರಿ ಸಮಯದಲ್ಲಿ ಕೆಲ ರಾಶಿಯ ಜನರಿಗೆ ಶಿವನ ಆಶೀರ್ವಾದ ಸಿಗಲಿದೆ. ಆರ್ಥಿಕ ವೃದ್ಧಿ ಜೊತೆಗೆ ಯಶಸ್ಸು ಸಿಗಲಿದೆ. ಇಂದು ಶಿವನ ಕೃಪೆಗೆ ಪಾತ್ರರಾಗಲಿರುವ ರಾಶಿಗಳು ಯಾವುದು ಎಂಬುದನ್ನು ನೋಡೋಣ.

Tap to resize

Latest Videos

undefined

ಶಿವರಾತ್ರಿಯಂದು ಈಶ್ವರನ ಕೃಪೆಗೆ ಪಾತ್ರರಾಗಲಿದ್ದಾರೆ ಈ ರಾಶಿಯವರು : 

ಮೇಷ ರಾಶಿ(Aries) : ಮೇಷ ರಾಶಿಯವರಿಗೆ ಈ ಮಹಾಶಿವರಾತ್ರಿಯಂದು ಶಿವನ ವಿಶೇಷ ಅನುಗ್ರಹ ಸಿಗಲಿದೆ. ಮಂಗಳ ಗ್ರಹವು ಈ ರಾಶಿಯ ಅಧಿಪತಿಯಾಗಿರುವುದರಿಂದ ಶಿವನು ಈ ರಾಶಿಯ ಜನರಿಗೆ ಮಂಗಳವನ್ನುಂಟು ಮಾಡಲಿದ್ದಾನೆ. ಮೇಷ ರಾಶಿಯವರು ಮಹಾಶಿವರಾತ್ರಿಯಂದು ವಿಧಿವಿಧವಾಗಿ ಶಿವನನ್ನು ಪೂಜಿಸಬೇಕು. ಶಿವನಿಗೆ ಗಂಗಾಜಲ ಮತ್ತು ಹಸುವಿನ ಹಾಲನ್ನು ಅರ್ಪಿಸುವುದರಿಂದ  ವೃತ್ತಿಜೀವನದಲ್ಲಿ ಅಭಿವೃದ್ಧಿ ಕಾಣಬಹುದು. ಅಲ್ಲದೆ ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ವ್ಯಾಪಾರಸ್ಥರಿಗೆ ವಿಶೇಷವಾಗಿ ಲಾಭವಾಗಲಿದೆ. ಅದೃಷ್ಟ ಈ ರಾಶಿಯವರ ಕೈ ಹಿಡಿಯಲಿದೆ. ಇದರಿಂದಾಗಿ ಸ್ಥಗಿತಗೊಂಡ ಕೆಲಸಗಳು ಸಹ ಪ್ರಾರಂಭವಾಗಲಿವೆ.

ವೃಷಭ ರಾಶಿ(taurus): ಮಹಾಶಿವರಾತ್ರಿಯಂದು ಸಂಭವಿಸುವ ಗ್ರಹಗಳ ಸಂಯೋಜನೆಯು ವೃಷಭ ರಾಶಿಯವರಿಗೆ ಅದೃಷ್ಟ ತರಲಿದೆ. ಕೆಲಸದಲ್ಲಿ ಸುಲಭವಾಗಿ ಯಶಸ್ಸು ಸಿಗಲಿದೆ. ಸಿಕ್ಕಿಬಿದ್ದ ಹಣ ಲಭ್ಯವಾಗಲಿದೆ. ಪ್ರೇಮ ಜೀವನದಲ್ಲಿ ಸುಖ ಸಿಗಲಿದೆ.  ಮಹಾಶಿವರಾತ್ರಿಯಂದು, ಶಿವನಿಗೆ ಕಬ್ಬಿನ ರಸ ಮತ್ತು ಹಾಲಿನಿಂದ ಅಭಿಷೇಕ ಮಾಡಿದರೆ ಹೆಚ್ಚಿ  ಫಲಿತಾಂಶ ಪಡೆಯಬಹುದು.

ಮಿಥುನ(gemini): ಮಹಾಶಿವರಾತ್ರಿಯ ದಿನ ಮಿಥುನ ರಾಶಿಯವರಿಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆಯಿದೆ. ಈ ದಿನದಂದು ಭೋಲೇನಾಥನ ವಿಶೇಷ ಆಶೀರ್ವಾದ ಲಭಿಸಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಸಿಗಲಿದೆ.

MAHASHIVRATRI 2022: ಮಕ್ಕಳಿಲ್ಲದ ದಂಪತಿ ಮಹಾಶಿವರಾತ್ರಿಯಂದು ಈ ಪರಿಹಾರ ಕೈಗೊಳ್ಳಿ

ತುಲಾ ರಾಶಿ(libra): ಈ ಮಹಾಶಿವರಾತ್ರಿಯು ತುಲಾ ರಾಶಿಯವರಿಗೆ ಸಾಂಸಾರಿಕ ಸುಖವನ್ನು ನೀಡಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.  ಐಷಾರಾಮಿ ವಸ್ತುಗಳನ್ನು ಖರೀದಿಸುವ ಸಾಧ್ಯತೆಯಿದೆ. ಒಳ್ಳೆ ಕೆಲಸದ ಪ್ರಸ್ತಾಪ ನಿಮಗೆ ಸಿಗುವ ಸಾಧ್ಯತೆಯಿದೆ. ಈ ಸಮಯವು ವೃತ್ತಿಜೀವನಕ್ಕೆ ಮಂಗಳಕರವಾಗಿದೆ. ಪ್ರಯಾಣಕ್ಕೆ ತೆರಳುವ ಯೋಗ ಕೂಡಿ ಬರಲಿದೆ.  

ಮಕರ ರಾಶಿ(capricorn) : ಮಕರ ರಾಶಿಯಲ್ಲಿ ಗ್ರಹಗಳ ಸಂಯೋಗ ಆಗುತ್ತಿರುವುದರಿಂದ ಈ ರಾಶಿಯವರಿಗೆ ಅತ್ಯಂತ ಶುಭ ಫಲ ಸಿಗಲಿದೆ. ಅವರು ವೃತ್ತಿ ಮತ್ತು ವ್ಯವಹಾರದಲ್ಲಿ ದೊಡ್ಡ ಪ್ರಗತಿಯಾಗಲಿದೆ. ಬಡ್ತಿ, ಹೊಸ ಉದ್ಯೋಗ, ಇನ್‌ಕ್ರಿಮೆಂಟ್ ಸೇರಿದಂತೆ ಉದ್ಯೋಗದಲ್ಲಿ ಸಾಕಷ್ಟು ಪ್ರಗತಿ ಸಿಗಲಿದೆ.

Kaal Sarp Dosh: ಕಾಳ ಸರ್ಪ ದೋಷದಿಂದ ಶುಭ ಫಲ ಪ್ರಾಪ್ತಿಯೂ ಸಾಧ್ಯ!

ಕುಂಭ ರಾಶಿ(aquarius) : ಶನಿದೇವನು ಈ ರಾಶಿಯ ಅಧಿಪತಿಯೂ ಹೌದು. ಈ ರಾಶಿಯ ಜನರು ಭಗವಂತ ಶಿವ ಮತ್ತು ಶನಿಯ ವಿಶೇಷ ಆಶೀರ್ವಾದವನ್ನು ಪಡೆಯುತ್ತಾರೆ. ಶಿವರಾತ್ರಿಯಂದು ಶಿವನನ್ನು ಪೂಜಿಸಬೇಕು ಮತ್ತು ಉಪವಾಸ ಕೈಗೊಳ್ಳಬೇಕು. ಇದ್ರಿಂದ ವೃತ್ತಿಯಲ್ಲಿ ಯಶಸ್ಸು ಲಭಿಸುತ್ತದೆ. ಸಂಪತ್ತು, ಆದಾಯ ಹೆಚ್ಚಾಗುತ್ತದೆ.
 

click me!