ಮಹಾಭಾರತದ ಯುದ್ಧದಲ್ಲಿ ಕೌರವರೆಲ್ಲ ಪಾಂಡವರಿಂದ ಹತರಾದರು. ಅವರಲ್ಲಿ ಒಬ್ಬ ಕೌರವನನ್ನು ಕೊಂದಿದ್ದಕ್ಕಾಗಿ ಭೀಮನು ದುಃಖಿಸಿದನು. ಯಾರು ಆ ಕೌರವ?
ಮಹಾಭಾರತದ ಯುದ್ಧದಲ್ಲಿ, ಪಾಂಡವರು ಎಲ್ಲಾ ಕೌರವರನ್ನು ಕೊಲ್ಲುವ ಮೂಲಕ ಯುದ್ಧದಲ್ಲಿ ಗೆದ್ದರು. ಈ ಯುದ್ಧದಲ್ಲಿ ಧೃತರಾಷ್ಟ್ರನ ಎಲ್ಲಾ 100 ಮಕ್ಕಳು ಕೊಲ್ಲಲ್ಪಟ್ಟರು. ಆದರೆ, ಇಷ್ಟು ಜನರಲ್ಲಿ ಒಬ್ಬನನ್ನು ಕೊಂದಿದ್ದಕ್ಕಾಗಿ ಭೀಮನು ತುಂಬಾ ದುಃಖಿತನಾದನು. ಅವನ ಹೆಸರೇ ವಿಕರ್ಣ.
ಹೌದು, ಕೌರವರು ಎಂದರೆ ಧೃತರಾಷ್ಟ್ರ ಮತ್ತು ಗಾಂಧಾರಿಯ 100 ಪುತ್ರರಲ್ಲಿ ಬಹುತೇಕರಿಗೆ ತಿಳಿದಿರುವುದು ದುಶ್ಯಾಸನ ಮತ್ತು ದುರ್ಯೋಧನ. ಆದರೆ, ಕೌರವರ ಮೋಸ, ವಂಚನೆಯ ನಡುವೆಯೂ ಸದಾ ನ್ಯಾಯಯುತವಾಗಿ ನಿಂತು, ನ್ಯಾಯದ ಪರ ಮಾತನಾಡುತ್ತಿದ್ದ ವಿಕರ್ಣ ಮಾತ್ರ ಅದೇಕೋ ಜನರಿಗೆ ಅಪರಿಚಿತನಾಗಿಯೇ ಉಳಿದ. ಆದರೆ, ಈ ವಿಕರ್ಣನನ್ನು ಅವನ ವ್ಯಕ್ತಿತ್ವಕ್ಕಾಗಿ ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳಬೇಕಿದೆ.
ಯಾರು ಈ ವಿಕರ್ಣ?
ಕೌರವರು ಎಂದು ಕರೆಯಲ್ಪಡುವ ಧೃತರಾಷ್ಟ್ರ ಮತ್ತು ಗಾಂಧಾರಿಯ 100 ಪುತ್ರರಲ್ಲಿ ವಿಕರ್ಣನೂ ಒಬ್ಬ. ಆತ ವಿವೇಕಯುತ ವ್ಯಕ್ತಿ. ವಿಕರ್ಣನು ತನ್ನ ಸಹೋದರ ದುರ್ಯೋಧನನ ಅನ್ಯಾಯದ ನಿರ್ಧಾರಗಳನ್ನು ಅನೇಕ ಬಾರಿ ಪ್ರಶ್ನಿಸಿದ್ದನು.
ಮೇನಲ್ಲಿ ಹುಟ್ಟಿದವರು ನಾಯಕರು ಮಾತ್ರವಲ್ಲ, ಅದೃಷ್ಟವಂತರು ಕೂಡಾ..
ದ್ರೌಪದಿಯ ವಸ್ತ್ರಾಪಹರಣ ವಿರೋಧಿಸಿದ್ದ!
ವಿಶೇಷವೆಂದರೆ ದ್ರೌಪದಿಯ ವಸ್ತ್ರಾಪಹರಣವನ್ನು ವಿರೋಧಿಸಿದ ಏಕೈಕ ಕೌರವ ವಿಕರ್ಣ ಮಾತ್ರ. ಪಗಡೆ ಆಟದಲ್ಲಿ ಪಾಂಡವರು ಕೌರವರ ಎದುರು ಸೋತರು. ಯುಧಿಷ್ಠಿರನು ಅಂತಿಮವಾಗಿ ದ್ರೌಪದಿಯನ್ನು ಪಣಕ್ಕಿಟ್ಟನು. ಸೋಲಿನ ನಂತರ ದುರ್ಯೋಧನನು ದ್ರೌಪದಿಯನ್ನು ಸಭೆಗೆ ಕರೆದು ವಸ್ತ್ರಾಪಹರಣ ಶುರು ಹಚ್ಚಿದನು. ಸಭೆಯಲ್ಲಿ ಧೃತರಾಷ್ಟ್ರ, ಭೀಷ್ಮ ಪಿತಾಮಹ, ದ್ರೋಣಾಚಾರ್ಯ ಸೇರಿದಂತೆ ಏನೇಕ ವಿದ್ವಾಂಸರು ಉಪಸ್ಥಿತರಿದ್ದರು. ಆದರೆ ಯಾರೂ ದುರ್ಯೋಧನನನ್ನು ವಿರೋಧಿಸಲು ಧೈರ್ಯ ಮಾಡಲಿಲ್ಲ. ಆದರೆ ವಿಕರ್ಣನು ತನ್ನ ಸಹೋದರನನ್ನು ವಿರೋಧಿಸುವ ಧೈರ್ಯ ಮಾಡಿದ. ದ್ರೌಪದಿಯ ಸುದ್ದಿಗೆ ಹೋದರೆ ಭವಿಷ್ಯದಲ್ಲಿ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ವಿಕರ್ಣನು ದುರ್ಯೋಧನನಿಗೆ ಎಚ್ಚರಿಕೆ ನೀಡಿದ. ಅಣ್ಣನ ದುರ್ವರ್ತನೆ ಪ್ರಾರಂಭವಾದಾಗ, ಇಡೀ ವ್ಯವಹಾರವನ್ನು ಒಮ್ಮೆಗೆ ನಿಲ್ಲಿಸಲು ಪ್ರಯತ್ನಿಸದ. ಕುರು ನಾಯಕರ ಮುಂದೆ ದ್ರೌಪದಿ ಈಗಾಗಲೇ ಎತ್ತಿದ್ದ ಪ್ರಶ್ನೆಗಳನ್ನು ಅವನು ಪ್ರತಿಧ್ವನಿಸಿದ. ಆದರೆ ದುರ್ಯೋಧನನು ತನ್ನ ಸಹೋದರನ ಮಾತನ್ನು ನಿರ್ಲಕ್ಷಿಸಿ ಕಿಕ್ಕಿರಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣಕ್ಕೆ, ಅವಮಾನಕ್ಕೆ ಮುಂದಾದ. ಇದು ಮಹಾಭಾರತ ಯುದ್ಧಕ್ಕೆ ಅಡಿಪಾಯ ಹಾಕಿತು.
ಭೀಮನ ಕೈಯಲ್ಲಿ ಹತನಾದ..
ಮಹಾಭಾರತ ಯುದ್ಧವು ಪ್ರಾರಂಭವಾದಾಗ, ವಿಕರ್ಣನು ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾ, ಯುದ್ಧದಲ್ಲಿ ತನ್ನ ಸಹೋದರರನ್ನು ಬೆಂಬಲಿಸಿದನು. ಮತ್ತೊಂದೆಡೆ, ಪಾಂಡವರು ವಿಕರ್ಣನ ನ್ಯಾಯಯುತ ಸ್ವಭಾವವನ್ನು ಸಂಪೂರ್ಣವಾಗಿ ತಿಳಿದಿದ್ದರು. ಅವರಿಗೆ ಅವನೊಂದಿಗೆ ಹೋರಾಡಲು ಇಷ್ಟವಿರಲಿಲ್ಲ.
ವಾರ ಭವಿಷ್ಯ: ಮಿಥುನಕ್ಕೆ ಮಹಾ ಲಾಭದಾಯಕ ವಾರ, ಕನ್ಯಾಗೆ ಕೈ ಕೊಡುವ ಆರೋಗ್ಯ
ಪಾಂಡುವಿನ ಮಗ ಭೀಮಸೇನ ಮತ್ತು ವಿಕರ್ಣ ಯುದ್ಧದಲ್ಲಿ ಪರಸ್ಪರ ಮುಖಾಮುಖಿಯಾದರು. ಭೀಮನು ವಿಕರ್ಣನೊಂದಿಗೆ ಯುದ್ಧ ಮಾಡಲು ಬಯಸುವುದಿಲ್ಲ ಎಂದು ಹೇಳಿದನು. ದ್ರೌಪದಿಯ ಪರ ವಿಕರ್ಣ ನಿಂತಿದ್ದ ಬಗ್ಗೆ ಕೃತಜ್ಞತೆ ಹೇಳಿದನು. ಅದಕ್ಕೆ ವಿಕರ್ಣ 'ಆಗಲೂ ನನ್ನ ಕರ್ತವ್ಯ ಮಾಡಿದೆ. ಈಗಲೂ ಅಣ್ಣನ ಪರ ಯುದ್ಧಕ್ಕೆ ಕರ್ತವ್ಯಕ್ಕಾಗಿ ಬಂದಿದ್ದೇನೆ. ಕೃಷ್ಣ ಯಾರ ಪರವೋ ಅವರೇ ಗೆಲ್ಲುವುದು ಎಂದು ತನಗೆ ಗೊತ್ತು. ಆದರೆ, ಸೋಲುವುದಾದರೂ ಸರಿಯೇ, ಕರ್ತವ್ಯ ನಿಭಾಯಿಸುತ್ತೇನೆ' ಎಂದನು. ಇದರ ನಂತರ ಭೀಮನನ್ನು ತನ್ನೊಂದಿಗೆ ಹೋರಾಡಲು ಒತ್ತಾಯಿಸಿದನು. ಕೊನೆಯಲ್ಲಿ ವಿಕರ್ಣನು ಭೀಮನ ಕೈಯಲ್ಲಿ ಮರಣ ಹೊಂದಿದನು.ಭೀಮನು ವಿಕರ್ಣನ ಹತ್ಯೆಯಿಂದ ತುಂಬಾ ದುಃಖಿತನಾದನು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.