ಶುಕ್ರ ವಕ್ರಿ 2023: ಈ ರಾಶಿಯವರಿಗೆ ಆಸ್ತಿ ಗಳಿಕೆಯ ಯೋಗ, ಕೆಲಸದಲ್ಲಿ ಬಡ್ತಿ..!

By Sushma HegdeFirst Published Jul 13, 2023, 12:30 PM IST
Highlights

ಗ್ರಹಗಳು ಹಿಮ್ಮುಖ ಚಲನೆಗೆ ತೊಡಗುವುದನ್ನು ವಕ್ರಿ ಎನ್ನಲಾಗುತ್ತದೆ. ಕಟಕ ರಾಶಿಯಲ್ಲಿ ಶುಕ್ರನು ಇದೇ 23ರಂದು ವಕ್ರಿಯಾಗಿ ಸಂಚರಿಸಲಿದ್ದಾನೆ. ಶುಕ್ರನ ಈ ಹಿಮ್ಮುಖ ಚಲನೆಯಿಂದ ಯಾವ ರಾಶಿಯವರಿಗೆ ಒಳಿತಾಗಲಿದೆ ಎನ್ನುವ ಗೋಚಾರ ಫಲ ಇಲ್ಲಿದೆ.

ಗ್ರಹಗಳು ಹಿಮ್ಮುಖ ಚಲನೆಗೆ ತೊಡಗುವುದನ್ನು ವಕ್ರಿ ಎನ್ನಲಾಗುತ್ತದೆ. ಕಟಕ ರಾಶಿಯಲ್ಲಿ ಶುಕ್ರನು ಇದೇ 23ರಂದು ವಕ್ರಿಯಾಗಿ ಸಂಚರಿಸಲಿದ್ದಾನೆ. ಶುಕ್ರನ ಈ ಹಿಮ್ಮುಖ ಚಲನೆಯಿಂದ ಯಾವ ರಾಶಿಯವರಿಗೆ ಒಳಿತಾಗಲಿದೆ ಎನ್ನುವ ಗೋಚಾರ ಫಲ ಇಲ್ಲಿದೆ.

ಸೌಂದರ್ಯ, ಕಲೆ ಮತ್ತು ಪ್ರೀತಿಯ ಅಂಶವಾಗಿರುವ ಶುಕ್ರನ ಹಿಮ್ಮುಖ ಚಲನೆಯಿಂದ ಅನೇಕ ರಾಶಿಚಕ್ರ ಚಿಹ್ನೆಗಳ ಜನರಿಗೆ ಆಗಸ್ಟ್‌ ತಿಂಗಳು ವಿಶೇಷವಾಗಿರುತ್ತದೆ. ಜುಲೈನಲ್ಲಿ 23ರಂದು ಶುಕ್ರನು ವಕ್ರಿಯಾಗಿ ಸಂಚರಿಸಲಿದ್ದಾನೆ. ಇದು ಮುಂಬರುವ ತಿಂಗಳಲ್ಲಿ ಕೆಲವು ರಾಶಿಯ ಜನರಿಗೆ ಪ್ರಯೋಜನವನ್ನು ನೀಡುತ್ತದೆ. 

Latest Videos

ಗ್ರಹಗಳು ಮತ್ತು ನಕ್ಷತ್ರ ಪುಂಜಗಳ ಸ್ಥಾನದ ದೃಷ್ಟಿಯಿಂದ ಜುಲೈ ತಿಂಗಳು ವಿಶೇಷವಾಗಿದೆ. ಜುಲೈನಲ್ಲಿ ಶ್ರಾವಣ ಮಾಸವೂ ಪ್ರಾರಂಭವಾಗಿದೆ. ಹೀಗಾಗಿ ಅನೇಕ ರಾಶಿಗಳಿಗೆ ಇದು ಶುಭ ಸಮಯ. ಈ ಕುರಿತು ಇಲ್ಲಿದೆ ಮಾಹಿತಿ.

ವೃಷಭ ರಾಶಿ ( Taurus) 

ಶುಕ್ರನ ಹಿಮ್ಮೆಟ್ಟುವಿಕೆಯಿಂದ ವೃಷಭ ರಾಶಿಯವರಿಗೆ ವರದಾನಕ್ಕೆ ಕೊರತೆಯಿಲ್ಲ. ಶುಕ್ರನ ವಕ್ರ ಸಂಚಾರದ ಅವಧಿಯಿಂದ ವೃಷಭ ರಾಶಿಯ ಜನರು ತಮ್ಮ ಮೌಲ್ಯಗಳು, ಸಂಬಂಧಗಳು ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಪ್ರತಿಬಿಂಬಿಸಲು ಅನುವು ಆಗಲಿದೆ. ಆತ್ಮಾವಲೋಕನ ಮತ್ತು ನಿಮ್ಮ ಆಸೆಗಳನ್ನು ಮತ್ತು ಗುರಿಗಳನ್ನು ಸಾಕಾರಗೊಳಿಸಲು ಇದು ಉತ್ತಮ ಸಮಯ. ವೃಷಭ ರಾಶಿಯ ಜನರಲ್ಲಿ ಆತ್ಮಸ್ಥೈರ್ಯ ಹೆಚ್ಚಾಗುವುದು ಮತ್ತು ವಿತ್ತೀಯ ಲಾಭದ ಬಲವಾದ ಸಾಧ್ಯತೆಗಳಿವೆ.

ಇಂದು ಕಾಮಿಕಾ ಏಕಾದಶಿ: ವಿಷ್ಣುವನ್ನು ಪೂಜಿಸಿದರೆ ಪಾಪಗಳೆಲ್ಲಾ ನಾಶ..!

 

ತುಲಾ ರಾಶಿ (Libra) 

ತುಲಾ ರಾಶಿಯ ಮುಖ್ಯ ಗ್ರಹ ಶುಕ್ರ. ಆದ್ದರಿಂದ ಶುಕ್ರನ ಹಿಮ್ಮೆಟ್ಟುವಿಕೆಯೊಂದಿಗೆ ತುಲಾ ರಾಶಿಯ ಜನರು ತಮ್ಮ ಕಲಾತ್ಮಕ ಪ್ರತಿಭೆಯನ್ನು ಅಳವಡಿಸಿಕೊಳ್ಳಬಹುದು ಮತ್ತು ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನವವನ್ನು ಕಂಡುಕೊಳ್ಳಬಹುದು.

ವೃಶ್ಚಿಕ ರಾಶಿ ( Scorpio )
ಜುಲೈನಲ್ಲಿ ಶುಕ್ರನ ಹಿಮ್ಮುಖ ಚಲನೆಯ ಸಮಯದಲ್ಲಿ ವೃಶ್ಚಿಕ ರಾಶಿಯವರು ಕೆಲವು ದೊಡ್ಡ ಸಾಧನೆಗಳನ್ನು ಪಡೆಯಬಹುದು. ಈ ಅವಧಿಯು ಆತ್ಮಾವಲೋಕನವನ್ನು ಉತ್ತೇಜಿಸುತ್ತದೆ. ಈ ಸಮಯದಲ್ಲಿ, ನಿಮ್ಮ ಆಲೋಚನೆ ಮತ್ತು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಆರೋಗ್ಯಕರ ಮತ್ತು ಹೆಚ್ಚು ತೃಪ್ತಿಕರ ಸಂಬಂಧಗಳಿಗೆ ಬಾಗಿಲು ತೆರೆಯುತ್ತದೆ. 

ಮಕರ ರಾಶಿ (capricorn) 
 
ಶುಕ್ರ ಹಿಮ್ಮೆಟ್ಟುವಿಕೆಯ ಸಮಯದಲ್ಲಿ ಮಕರ ರಾಶಿವರು ತಮ್ಮ ಭಾವನಾತ್ಮಕ ಸಂಬಂಧಗಳಲ್ಲಿ ಹೆಚ್ಚಿದ ವೈಯಕ್ತಿಕ ಬೆಳವಣಿಗೆ ಮತ್ತು ಆಳವನ್ನು ಅನುಭವಿಸುತ್ತಾರೆ. ಈ ಅವಧಿಯು ಮಕರ ರಾಶಿಯ ವ್ಯಕ್ತಿಗಳು ತಮ್ಮ ಆಂತರಿಕ ಆತ್ಮವನ್ನು ಅನ್ವೇಷಿಸಲು ಹಾಗೂ ಸ್ವಯಂ ಪ್ರೀತಿಯನ್ನು ಬೆಳೆಸಲು ಅನುಕೂಲ ಆಗಲಿದೆ. ಅವರು ತಮ್ಮ ಸಂಬಂಧಗಳಲ್ಲಿ ಹೊಸ ಚೈತನ್ಯವನ್ನು ಕಂಡುಕೊಳ್ಳಬಹುದು ಮತ್ತು ಜೀವನದ ಎಲ್ಲಾ ಅಂಶಗಳಲ್ಲಿ ಸೌಂದರ್ಯದ ಬಗ್ಗೆ ಹೆಚ್ಚಿನ ಮೆಚ್ಚುಗೆಯನ್ನು  ಪಡೆಯಬಹುದು.

ಮೀನ ರಾಶಿ ( pisces) 

ಜುಲೈನಲ್ಲಿ ಶುಕ್ರ ಹಿಮ್ಮೆಟ್ಟುವಿಕೆಯು ಮೀನ ರಾಶಿಯವರಿಗೆ ಆಧ್ಯಾತ್ಮಿಕ ಭಾವನೆಗಳನ್ನು ಜಾಗೃತಗೊಳಿಸುತ್ತದೆ. ಈ ಅವಧಿಯು ಅವರ ಆಂತರಿಕ ಆಸೆಗಳನ್ನು ಸಂಪರ್ಕಿಸಲು ಮತ್ತು ಅವರ ಅಂತಃಪ್ರಜ್ಞೆಯನ್ನು ಅನುಸರಿಸಲು ಅವರನ್ನು ಪ್ರೋತ್ಸಾಹಿಸುತ್ತದೆ. ಮೀನ ರಾಸಿಯವರು ತಮ್ಮ ಸಂಬಂಧಗಳಲ್ಲಿ ಹೆಚ್ಚಿನ ಸೃಜನಶೀಲತೆಯನ್ನು ಅನುಭವಿಸಬಹುದು. ಈ ಸಮಯದಲ್ಲಿ ಕೆಲಸ ಮಾಡುವ ಜನರು ಬಡ್ತಿ ಪಡೆಯಬಹುದು.  

Daily Horoscope: ಇಂದು ಒಡಹುಟ್ಟಿದವರ ಜೊತೆ ಜಗಳ ಆಗಲಿದೆ; ಈ ರಾಶಿಯವರು ತಾಳ್ಮೆಯಿಂದ ಇರಿ..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!