Astrology Tips : ಗಣೇಶನ ಮೂರ್ತಿ ಗಿಫ್ಟ್ ಮಾಡೋವಾಗ ಇದು ನೆನಪಿರಲಿ

By Suvarna NewsFirst Published Mar 28, 2023, 4:14 PM IST
Highlights

ಯಾವುದೇ ವಿಶೇಷ ಸಂದರ್ಭದಲ್ಲಿ ಉಡುಗೊರೆ ನೀಡುವ ಪದ್ಧತಿ ನಮ್ಮಲ್ಲಿದೆ. ಹೆಕ್ಕಿ, ಆರಿಸಿ, ಚೆಂದದ ಗಿಫ್ಟ್ ನೀಡೋಕೆ ಎಲ್ಲರೂ ಮುಂದಾಗ್ತಾರೆ. ಆದ್ರೆ ನಾವು ಕೊಡುವ ಗಿಫ್ಟ್ ಅವರಿಗೆ ಮಾತ್ರವಲ್ಲ ನಮಗೂ ಶುಭ ನೀಡ್ಬೇಕು ಅಂದಾದ್ರೆ ಶಾಸ್ತ್ರವನ್ನು ತಿಳಿದಿರಬೇಕು.
 

ವಿಘ್ನ ವಿನಾಶಕ ಗಣೇಶನಿಗೆ ಮೊದಲ ಪೂಜೆ ನಡೆಯುತ್ತದೆ. ಹಾಗೆಯೇ ಹಿಂದುಗಳು ಗಣಪತಿ ಆರಾಧನೆಯನ್ನು ಭಯ, ಭಕ್ತಿಯಿಂದ ಮಾಡ್ತಾರೆ. ಮನೆಯಲ್ಲಿ ಗಣೇಶನ ವಿಗ್ರಹ, ಫೋಟೋ ಇಟ್ಟು ಪೂಜೆ ಮಾಡಲಾಗುತ್ತದೆ. ಬರೀ ಪೂಜೆಗೆ ಮಾತ್ರವಲ್ಲ ಉಡುಗೊರೆ ವಿಷ್ಯ ಬಂದಾಗಲು ಮನಸ್ಸು ಮೊದಲು ಆಲೋಚನೆ ಮಾಡೋದು ಗಣಪತಿ ಮೂರ್ತಿಯ ಬಗ್ಗೆ. ಗಣೇಶನ ವಿಗ್ರಹ ಅಥವಾ ಫೋಟೋವನ್ನು ಅನೇಕರು ಉಡುಗೊರೆಯಾಗಿ ನೀಡ್ತಾರೆ. ಮದುವೆ, ಮುಂಜಿ, ಹುಟ್ಟುಹಬ್ಬ,ಗೃಹ ಪ್ರವೇಶ ಹೀಗೆ ಯಾವುದೇ ಸಮಾರಂಭವಿರಲಿ ಇಲ್ಲ ಸನ್ಮಾನ ಕಾರ್ಯಕ್ರಮವಿರಲಿ ಒಂದು ಗಣೇಶ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ರೆ ಮುಗೀತು. ಗಣಪತಿ ಮೂರ್ತಿಯನ್ನು ಉಡುಗೊರೆ ನೀಡೋದು ತಪ್ಪಲ್ಲ. ಆದ್ರೆ ಗಿಫ್ಟ್ ಆಗಿ ಇದನ್ನು ನೀಡುವ ಮೊದಲು ಕೆಲ ವಿಷ್ಯಗಳನ್ನು ತಿಳಿದುಕೊಳ್ಳೋದು ಮುಖ್ಯ. ನಾವಿಂದು, ಉಡುಗೊರೆಯಾಗಿ ಗಣೇಶನ ಮೂರ್ತಿ ನೀಡುವ ವೇಳೆ ಯಾವೆಲ್ಲ ವಿಷ್ಯ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂಬುದನ್ನು ನಿಮಗೆ ಹೇಳ್ತೇವೆ. 

ಗಣೇಶ (Ganesha) ಮೂರ್ತಿ ಉಡುಗೊರೆ (Gift) ಯಾಗಿ ನೀಡ್ಬೇಕಿದ್ರೆ ಇದು ನೆನಪಿನಲ್ಲಿರಲಿ : 

ಗಣೇಶ ಹಾಗೂ ಲಕ್ಷ್ಮಿ (Lakshmi)  ವಿಗ್ರಹ ಉಡುಗೊರೆ ನೀಡಿದ್ರೆ ಏನಾಗುತ್ತೆ? : ಸಾಮಾನ್ಯವಾಗಿ ನಾವು ಗಣೇಶ ಹಾಗೂ ಲಕ್ಷ್ಮಿ ಒಟ್ಟಿಗಿರುವ ಫೋಟೋ (Photo) ಅಥವಾ ವಿಗ್ರಹವನ್ನು ಗಿಫ್ಟ್ ಆಗಿ ನೀಡ್ತೇವೆ. ಇದನ್ನು ನಿಮಗಾಗಿ ಖರೀದಿ ಮಾಡಿದ್ರೆ ಒಳ್ಳೆಯದು. ಬೇರೆಯವರಿಗೆ ನೀಡೋದು ಅಷ್ಟು ಸೂಕ್ತವಲ್ಲ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಯಾಕೆಂದ್ರೆ ನೀವು ಸಂತೋಷ ಮತ್ತು ಸಮೃದ್ಧಿ, ಸಂಪತ್ತು ಮತ್ತು ಲಕ್ಷ್ಮಿಯನ್ನು ಬೇರೆಯವರಿಗೆ ನೀಡಿದಂತಾಗುತ್ತದೆ. ಇದ್ರಿಂದ ಲಕ್ಷ್ಮಿ ಕೋಪಗೊಳ್ಳುವ ಸಾಧ್ಯತೆಯೂ ಇದೆ.

RAM NAVAMI 2023ಯಂದು ಮಾಡಬೇಕಾದ ಹಾಗೂ ಮಾಡಬಾರದ ಕೆಲಸಗಳು

ಸೂಕ್ತವಾದ ವ್ಯಕ್ತಿಗೆ ನೀಡಿ : ಒಂದ್ವೇಳೆ ಗಣೇಶ ಮೂರ್ತಿಯನ್ನೇ ನೀವು ಉಡುಗೊರೆಯಾಗಿ ನೀಡಲು ಬಯಸಿದ್ದರೆ ನೀವು ಯಾರಿಗೆ ನೀಡ್ತಿದ್ದೀರಿ ಎಂಬುದನ್ನು ಗಮನಿಸಿ. ನೀವು ನೀಡಿದ ಉಡುಗೊರೆಯನ್ನು ಆ ವ್ಯಕ್ತಿ ಸರಿಯಾಗಿ ಇಟ್ಟುಕೊಳ್ಳದೆ ಧೂಳಿನಲ್ಲಿಟ್ಟರೆ ಅದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. 

ಯಾವ ಗಣೇಶ ಮೂರ್ತಿ ಒಳ್ಳೆಯದು : ಗಣೇಶ ಮೂರ್ತಿಯನ್ನು ನೀಡುವಾಗ ನೀವು ಬಣ್ಣಕ್ಕೂ ಆದ್ಯತೆ ನೀಡ್ಬೇಕು. ಬಿಳಿ ಗಣೇಶ ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಮನಸ್ಸಿನಲ್ಲಿ ಮತ್ತು ಮನೆಯಲ್ಲಿ ಸಮಸ್ಯೆ ಎದುರಿಸುತ್ತಿರುವವರಿಗೆ ಈ ಗಣೇಶ ಮೂರ್ತಿಯನ್ನು ನೀಡಿದ್ರೆ ಶುಭವಾಗುತ್ತದೆ.

Vastu Tips : ಮೊಬೈಲ್, ಇಸ್ತ್ರಿ ಪೆಟ್ಟಿಗೆನಾ ಎಲ್ಲೆಲ್ಲೋ ಇಟ್ಟು ಕಷ್ಟ ತಂದ್ಕೊಳ್ಬೇಡಿ

ಪ್ರಗತಿ ಬಯಸುವವರಿಗೆ ಈ ಗಣೇಶನನ್ನು ನೀಡಿ : ನಿಮ್ಮ ಆಪ್ತರ ಜೀವನದಲ್ಲಿ ಪ್ರಗತಿಯಾಗ್ಬೇಕು ಎಂದು ನೀವು ಬಯಸಿದ್ರೆ ಸಿಂಧೂರ ಗಣೇಶನನ್ನು ನೀಡಿ. ಇದು ಆಧ್ಯಾತ್ಮಿಕ ಪ್ರಗತಿಗೂ ಕಾರಣವಾಗುತ್ತದೆ. 

ಗಣೇಶನ ಸೊಂಡಿಲಿಗೂ ಮಹತ್ವ ನೀಡಿ : ನೀವು ಗಣೇಶ ಮೂರ್ತಿಯನ್ನು ಉಡುಗೊರೆ ನೀಡುವ ಮೊದಲು ಗಣೇಶನ ಸೊಂಡಿಲನ್ನು ಗಮನಿಸಿ. ಎಡಭಾಗದಲ್ಲಿ ಸೊಂಡಿಲಿದ್ದರೆ ಮಾತ್ರ ಅದನ್ನು ಮನೆಯಲ್ಲಿ ಇಡಿ. ಗಣಪತಿಯ ಸೊಂಡಿಲು ಬಲಭಾಗದಲ್ಲಿದ್ದರೆ ಅದನ್ನು ದೇವಸ್ಥಾನದಲ್ಲಿ ಇಡುವುದು ಶ್ರೇಯಸ್ಕರ. ಬಲಸೊಂಡಿಲು ಹೊಂದಿರುವ ಗಣಪತಿ ಮನೆಯಲ್ಲಿದ್ರೆ ಅನೇಕ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸೂರ್ಯನ ಶಕ್ತಿಯನ್ನು ಅದು ಹೊಂದಿರುತ್ತದೆ. ಅದ್ರ ಕೋಪಕ್ಕೆ ಗುರಿಯಾದ್ರೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಮನೆಯಲ್ಲಿ ಗಣೇಶನ ಮೂರ್ತಿ ಇಡುವಾಗ ಈ ನಿಯಮ ಪಾಲಿಸಿ :
• ನೀವು ಗಣೇಶನ ವಿಗ್ರಹವನ್ನು ಮಲಗುವ ಕೋಣೆಯಲ್ಲಿ ಇಡಬೇಡಿ. ಹಾಗೆಯೇ ಗಣೇಶನ ಬೆನ್ನು ಕಾಣುವಂತೆ ವಿಗ್ರಹ ಇಡಬೇಡಿ.
• ವಿಗ್ರಹವನ್ನು ಈಶಾನ್ಯ ಮೂಲೆಯಲ್ಲಿ ಇಡುವುದು ಸೂಕ್ತವಾಗಿದೆ. 
• ಹಾಗೆಯೇ ಕೈನಲ್ಲಿ ಮೋದಕ ಹಿಡಿದ ಹಾಗೂ ಇಲಿ ಮೇಲೆ ಕುಳಿತಿರುವ ಗಣೇಶ ಮೂರ್ತಿಯನ್ನು ಮನೆಯಲ್ಲಿ ಇಡಿ. 
• ದೇವರ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಗಣಪತಿ ವಿಗ್ರಹವನ್ನು ಇಡಬೇಡಿ

click me!