ಜ.22ರಂದು ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣಪ್ರತಿಷ್ಠೆ. ಈ ದಿನದ ಸಂಭ್ರಮ ಹಬ್ಬದಂತೆ ಹಿಂದೂಗಳ ಮನಸ್ಸಿನಲ್ಲಿ ಹೆಚ್ಚುತ್ತಿದೆ. ಈ ದಿನವನ್ನು ವಿಶೇಷವಾಗಿಸಲು ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಅಂತೆಯೇ ಗರ್ಭಿಣಿಯರು ಅದೇ ದಿನ ಹೆರಿಗೆ ಮಾಡಿಕೊಂಡರೆ ತಮ್ಮ ಮನೆಗೆ ರಾಮನೇ ಬರಬಹುದು ಎಂದು ಯೋಚಿಸುತ್ತಿದ್ದಾರೆ.
ಜನವರಿ 22 ಭಾರತದ ಇತಿಹಾದ ಪುಟಗಳಲ್ಲಿ ಅಚ್ಚಾಗುವ ದಿನ. ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣಪ್ರತಿಷ್ಠೆ. ಅದರಲ್ಲೂ ಬಾಲ ರಾಮನ ರೂಪವನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ದಿನದ ಸಂಭ್ರಮ ದೇಶಾದ್ಯಂತ ಹಿಂದೂಗಳಲ್ಲಿ ಈಗಾಗಲೇ ಮನೆ ಮಾಡಿದೆ. ಮನೆಮನೆಗೆ ಅಯೋಧ್ಯೆಯಿಂದ ಅಕ್ಷತೆ ಬಂದು ತಲುಪುತ್ತಿದೆ. ಜೊತೆಗೆೇ ಕೆಲವರು ಅಯೋಧ್ಯೆಗೆ ಹೋಗುವ ಸಿದ್ಧತೆಯಲ್ಲಿದ್ದಾರೆ. ಹೋಗಲಾಗದವರು, ರಾಮ ಭಜನೆಯಲ್ಲಿ ತೊಡಗಿ, ಆ ದಿನ ರಾಜ ಜ್ಯೋತಿ ಬೆಳಗಿ ದಿನವನ್ನು ವಿಶೇಷವಾಗಿಸಬೇಕೆಂದುಕೊಂಡಿದ್ದಾರೆ. ಈ ನಡುವೆ ಗರ್ಭಿಣಿ ಮಹಿಳೆಯರು ಈ ದಿನವನ್ನು ತಮ್ಮದೇ ಆದ ರೀತಿಯಲ್ಲಿ ಮಾಡಲು ಯೋಚಿಸುತ್ತಿದ್ದಾರೆ.
ಹೌದು, ಅಯೋಧ್ಯೆಗೆ ರಾಮಲಲ್ಲಾ ಬರುವ ದಿನವೇ ತಮಗೆ ಹೆರಿಗೆಯಾದರೆ ಮನೆಗೂ ಶ್ರೀ ರಾಮನ ಆಗಮನವೇ ಆಗಬಹುದು ಎಂಬ ಆಸೆ ಗರ್ಭಿಣಿಯರಲ್ಲಿ ಚಿಗುರೊಡೆಯುತ್ತಿದೆ. ಕೆಲವರು ಈ ದಿನ ವಿಶೇಷವಾಗಿದೆ ಎಂಬ ಕಾರಣಕ್ಕಾಗಿಯೂ, ದಿನವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲೂ ಅದೇ ದಿನ ಮಗು ಹೆರಲು ನಿರ್ಧರಿಸುತ್ತಿದ್ದಾರೆ.
undefined
ಜ.22ಕ್ಕೆ ಹೆರಿಗೆಗೆ ತವಕ
ಹೆರಿಗೆಯ ದಿನಾಂಕದ ಬಗ್ಗೆ ಗರ್ಭಿಣಿಯರು ಈಗಾಗಲೇ ತಮ್ಮ ವೈದ್ಯರನ್ನು ಸಂಪರ್ಕಿಸುತ್ತಿದ್ದಾರೆ. ಮಗುವಿನ ಜನನಕ್ಕೆ ಇದಕ್ಕಿಂತ ಉತ್ತಮ ಸಮಯ ಎಂದಿಗೂ ಬರುವುದಿಲ್ಲ ಎಂದು ಈ ಮಹಿಳೆಯರು ಹೇಳುತ್ತಾರೆ. ಭಗವಾನ್ ಶ್ರೀರಾಮ ಲಲ್ಲಾನ ಪ್ರಾಣ ಪ್ರತಿಷ್ಠೆಯಂದು ಹೆರಿಗೆಯಾದರೆ, ಅದು ನಮ್ಮ ಕುಟುಂಬಕ್ಕೆ ಸ್ಮರಣೀಯ ಕ್ಷಣವಾಗಿರುತ್ತದೆ ಎಂದವರು ಯೋಚಿಸುತ್ತಿದ್ದಾರೆ.
'ಜ.22ರಂದು ನಿಜವಾಗಿ ಶ್ರೀರಾಮನು ಅಯೋಧ್ಯೆಗೆ ಬರುತ್ತಿದ್ದಾನೆ. ಪ್ರಾಣ ಪ್ರತಿಷ್ಠೆಯ ದಿನದಂದು ನಾವು ಮಗುವಿಗೆ ಜನ್ಮ ನೀಡಬೇಕೆಂದು ಬಯಸುತ್ತೇವೆ. ಆ ದೇವರು ನಮ್ಮ ಮನೆಗೂ ಬರುತ್ತಾನೆ. ಈ ದಿನವನ್ನು ಶಾಶ್ವತವಾಗಿ ಸ್ಮರಣೀಯವಾಗಿಸಲು ನಾವು ಬಯಸುತ್ತೇವೆ' ಎನ್ನುತ್ತಾರೆ ಕಾನ್ಪುರದ ಗರ್ಭಿಣಿ ಸ್ನೇಹಾ. ಹಾಗಾಗಿ, ಜ.22ರಂದು ದೇಶದಲ್ಲಿ ಹಲವು ಹೆರಿಗೆಗಳು ಆಗಬಹುದು ಎನ್ನಲಾಗುತ್ತಿದೆ.
ಈಗಾಗಲೇ ಜನವರಿ ಅಂತ್ಯದಲ್ಲಿ ಅಥವಾ ಮಧ್ಯದಲ್ಲಿ ಹೆರಿಗೆ ಡೇಟ್ ಇರುವ ಮಹಿಳೆಯರು ಆಸ್ಪತ್ರೆಗೆ ಹೋಗಿ ಇಂಥ ದಿನಾಂಕದಂದೇ ತಮಗೆ ಸಿಸೇರಿಯನ್ ಹೆರಿಗೆ ಮಾಡಿಸಬಹುದೇ ಎಂದು ವಿಚಾರಿಸುತ್ತಿದ್ದಾರೆ.
ಆದರೆ, ವೈದ್ಯರು ಈ ಸಂಬಂಧ ಗರ್ಭಿಣಿಯರು ತಮ್ಮ ಮೇಲೆ ಯಾವುದೇ ರೀತಿಯ ಒತ್ತಡ ಹಾಕಿಕೊಳ್ಳದೇ ಇರುವುದು ಅವರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ಸಲಹೆ ನೀಡುತ್ತಿದ್ದಾರೆ.