ನಾಗರ ಪಂಚಮಿ ಹಬ್ಬವನ್ನು 2024 ಆಗಸ್ಟ್ 9 ರಂದು ಆಚರಿಸಲಾಗುತ್ತದೆ.ಈ ದಿನದಂದು ಸುಮಾರು ಆರು ವರ್ಷಗಳ ನಂತರ ಎರಡು ಮಂಗಳಕರ ಯೋಗಗಳಿವೆ.
ವೈದಿಕ ಕ್ಯಾಲೆಂಡರ್ ಪ್ರಕಾರ ನಾಗರ ಪಂಚಮಿ ಹಬ್ಬವನ್ನು ಪ್ರತಿ ವರ್ಷ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುತ್ತದೆ. ಈ ಬಾರಿ ಶ್ರಾವಣ ಮಾಸದಲ್ಲಿ ಈ ಹಬ್ಬವನ್ನು ಆಚರಿಸಲಾಗುವುದು. ಈ ಬಾರಿಯ ನಾಗರ ಪಂಚಮಿ ಹಬ್ಬ ವಿಶೇಷಬವಾಗಿದೆ. ಈ ದಿನ ಎರಡು ರಾಜಯೋಗ ಇದ್ದು ಸಿದ್ದಿಯೋಗ ಮತ್ತು ಅಮೃತ ಸಿದ್ದಿ ಯೋಗದ ಮಹಾ ಸಂಯೋಗ ವಿದೆ. ಈ ಮಂಗಳಕರ ಯೋಗಗಳು ಐದು ರಾಶಿಯವರ ಮೇಲೆ ಪರಿಣಾಮವನ್ನು ಭೀರುತ್ತವೆ.
ಆಗಸ್ಟ್ ತಿಂಗಳಲ್ಲಿ ಮೇಷ ರಾಶಿಯ ಜನರ ಜಾತಕದಲ್ಲಿ ಗ್ರಹಗಳ ಸ್ಥಾನವು ಬಲವಾಗಿರುತ್ತದೆ.ಇದರಿಂದ ಅದೃಷ್ಟವು ಪ್ರತಿಕೆಲಸದಲ್ಲಿ ಅವರನ್ನು ಬೆಂಬಲಿಸುತ್ತದೆ. ವ್ಯಾಪಾರಸ್ಥರು ಕೆಲವು ಪರಿಹಾರವನ್ನು ಪಡೆಯಬಹುದು. ಕೆಲವು ಸಮಯದಿಂದ ಪ್ರಯತ್ನಿಸುತ್ತಿದ್ದ ಕೆಲಸವಾಗುತ್ತದೆ. ಶ್ರಮಕ್ಕೆ ಪ್ರತಿಫಲ ಸಿಗುತ್ತದೆ.
ಕುಂಭ ರಾಶಿಗೆ ವ್ಯಾಪಾರ ಹೆಚ್ಚಳದಿಂದ ಲಾಭವೂ ದುಪ್ಪಟ್ಟಾಗುತ್ತದೆ. ಉದ್ಯೋಗಿಗಳಿಗೆ ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುವ ಪ್ರಸ್ತಾಪವನ್ನು ಪಡೆಯಬಹುದು. ನ್ಯಾಯಾಲಯದಲ್ಲಿ ಭೂಮಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಯ ಸಿಗುತ್ತದೆ. ಉತ್ತಮಗಳಿಕೆಯಿಂದ ಅಂಗಡಿಕಾರರು ಸಾಲದಿಂದ ಮುಕ್ತರಾಗುತ್ತಾರೆ.
ಸಿಂಹ ರಾಶಿಯ ಉದ್ಯೋಗಿಗಳಿಗೆ ದೊಡ್ಡ ಕಂಪನಿಯಲ್ಲಿ ಕೆಲಸ ಸಿಗಬಹುದು. ಇದರಿಂದ ಅವರ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಆರೋಗ್ಯವು ಕ್ರಮೇಣ ಸುಧಾರಿಸುತ್ತದೆ. ಅಂಗಡಿಕಾರರ ಶ್ರಮಕ್ಕೆ ಫಲ ಸಿಗಲಿದೆ.ಗಳಿಕೆಯಲ್ಲಿ ಹೆಚ್ಚಳವಾಗುವ ಎಲ್ಲಾ ಸಾಧ್ಯತೆ ಇವೆ.
ಈ ಸಮಯವು ಕರ್ಕ ರಾಶಿಯವರಿಗೆ ಒಳ್ಳೆಯದು ಈ ಅವಧಿಯಲ್ಲಿ ಮಾಡಿದ ಹೆಚ್ಚಿನ ಕೆಲಸವು ಯಶಸ್ವಿಯಾಗುತ್ತೆ. ಕ್ರೀಡೆ ಮತ್ತು ಮನರಂಜನಾ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಪ್ರಸಿದ್ದ ವ್ಯಕ್ತಿಯನ್ನು ಭೇಟಿ ಮಾಡಬಹುದು. ವಿವಾಹಿತರಿಗೂ ಈ ಸಮಯ ಉತ್ತಮವಾಗಿದೆ.
ಮೀನ ರಾಶಿಯವರಿಗೆ ಕಚೇರಿಯಲ್ಲಿನ ಅಧಿಕಾರಿಗಳ ಸಹಕಾರದಿಂದ ನಿಗದಿತ ಸಮಯದಲ್ಲಿ ಕೆಲಸವನ್ನು ಪೂರ್ಣಗಿಳಿಸಲು ಸಾಧ್ಯವಾಗುತ್ತದೆ.ನೀವು ಕೆಲಸವನ್ನು ಶ್ರದ್ದೆಯಿಂದ ಶ್ರಮದಿಂದ ಮಾಡಿದರೆ ಪ್ರತಿಫಲ ಸಿಗುತ್ತದೆ.