Hanuman Jayanti 2023: 4 ರಾಶಿಗಳ ಮೇಲೆ ಹನುಮ ಕೃಪೆ, ತೆರೆಯಲಿದೆ ಅವಕಾಶಗಳ ಬಾಗಿಲು

By Suvarna News  |  First Published Apr 2, 2023, 10:39 AM IST

ಹನುಮ ಜಯಂತಿಯನ್ನು ಈ ಬಾರಿ ಏಪ್ರಿಲ್ 6ರಂದು ಆಚರಿಸಲಾಗುತ್ತದೆ. ಈ ದಿನ ಯಾವ ರಾಶಿಗಳ ಮೇಲೆ ಆಂಜನೇಯನ ಕೃಪೆ ಉಳಿಯಲಿದೆ, ಯಾರ ಅದೃಷ್ಟ ಬೆಳಗಲಿದೆ ಎಂದು ನೋಡೋಣ. 


ಚೈತ್ರ ಮಾಸದ ಹುಣ್ಣಿಮೆಯಂದು ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ 6 ಏಪ್ರಿಲ್ ಈ ಹಬ್ಬ ಬರಲಿದೆ. ಕಲಿಯುಗದಲ್ಲಿ ಆಂಜನೇಯನನ್ನು ಭಕ್ತಿಗೆ ಬೇಗ ಒಲಿವ ದೇವರು ಎಂದಷ್ಟೇ ಅಲ್ಲ, ಚಿರಂಜೀವಿಯಾಗಿರುವ ಕಾರಣ ಜೀವಂತ ದೇವರು ಎಂದು ಪರಿಗಣಿಸಲಾಗುತ್ತದೆ. ಆಂಜನೇಯನನ್ನು ಸಂಪೂರ್ಣ ಭಕ್ತಿಯಿಂದ ಪೂಜಿಸಿದರೂ ಸಾಕು, ಎಲ್ಲ ತೊಂದರೆಗಳು ದೂರಾಗುತ್ತವೆ.  ಕುಟುಂಬದಲ್ಲಿ ಸಮೃದ್ಧಿ ಬರುತ್ತದೆ.

ಭಜರಂಗಬಲಿಯನ್ನು ಶಕ್ತಿಗಳ ಅಧಿಪತಿ ಎಂದು ಕರೆಯಲಾಗುತ್ತದೆ, ಅಷ್ಟೇ ಅಲ್ಲ, ಧೈರ್ಯಕಾರಕ ಆತ. ಹನುಮ ಜಯಂತಿಯ ದಿನದಂದು ಬಾಲ ಹನುಮಾನ್‌ನನ್ನು ಪೂಜಿಸುವುದು ವೈಭವ, ಶಕ್ತಿ, ಐಶ್ವರ್ಯ, ಸಂಪತ್ತು ಮತ್ತು ಸಂತೋಷವನ್ನು ತರುತ್ತದೆ.

Tap to resize

Latest Videos

ಹನುಮ ಹುಟ್ಟಿದ ಕಥೆ
ಅಂಜನಾ ಅಪ್ಸರೆಯಾಗಿದ್ದಳು, ಅವಳು ಶಾಪದಿಂದ ಭೂಮಿಯಲ್ಲಿ ಜನ್ಮ ಪಡೆದಳು. ಅವಳು ಮಗನಿಗೆ ಜನ್ಮ ನೀಡಿದ ನಂತರವೇ ಈ ಶಾಪದಿಂದ ಮುಕ್ತಿ ಹೊಂದಬಹುದಿತ್ತು. ವಾಲ್ಮೀಕಿ ರಾಮಾಯಣದ ಪ್ರಕಾರ, ಹನುಮಂತನ ತಂದೆ ಕೇಸರಿ, ಸುಮೇರು ಸ್ಥಳದ ರಾಜ. ಕೇಸರಿ ಬೃಹಸ್ಪತಿಯ ಮಗ. ಮಗನ ಆಸೆಯಿಂದ 12 ವರ್ಷಗಳ ಕಾಲ ಅಂಜನಾ ಶಿವನನ್ನು ಪ್ರಾರ್ಥಿಸಿದಳು. ಅದರ ಫಲವಾಗಿ ಹನುಮಂತನನ್ನು ಪಡೆದಳು. ಹನುಮನನ್ನು ಶಿವನ ಅವತಾರ ಎಂದು ನಂಬಲಾಗಿದೆ.

ಈ ವರ್ಷ, ಹನುಮ ಜಯಂತಿಯಂದು, ಕೆಲವು ರಾಶಿಚಕ್ರ ಚಿಹ್ನೆಗಳ ಅದೃಷ್ಟ ಹೊಳೆಯಲಿದೆ. ಹನುಮ ಜಯಂತಿಯಂದು ಭಜರಂಗ ಬಲಿಯಿಂದ ಯಾವ ರಾಶಿಯವರಿಗೆ ಆಶೀರ್ವಾದ ಸಿಗುತ್ತದೆ ಮತ್ತು ಯಾರ ಅದೃಷ್ಟವು ಎಚ್ಚರಗೊಳ್ಳುತ್ತದೆ ಎಂದು ತಿಳಿಯೋಣ.

Sunday remedies: ಈ ಭಾನುವಾರದ ಕ್ರಮಗಳು ಜಾತಕಕ್ಕೆ ಸೂರ್ಯಬಲ ತಂದು ಅದೃಷ್ಟ ಹೆಚ್ಚಿಸುತ್ತವೆ..

ಹನುಮ ಜಯಂತಿ ಅದೃಷ್ಟವಂತ ರಾಶಿಗಳು

ವೃಷಭ (Taurus)
ಹನುಮಂತನ ಕೃಪೆಯಿಂದ ನಿಮ್ಮ ಸಮಯ ಆನಂದದಿಂದ ಕಳೆಯುತ್ತದೆ. ಆತ್ಮಸ್ಥೈರ್ಯ ವೃದ್ಧಿಯಾಗಲಿದ್ದು, ಇದರಿಂದ ಬಹು ಕಾಲದಿಂದ ಅಪೂರ್ಣವಾಗಿದ್ದ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಯಶಸ್ಸು ಸಿಗಲಿದೆ. ಸಂಪತ್ತಿನ ವಿಷಯದಲ್ಲಿ ಹನುಮನ ಕೃಪೆ ಹೆಚ್ಚಲಿದೆ. ಗುರಿಯನ್ನು ಸಾಧಿಸಲು ಕಠಿಣ ಪರಿಶ್ರಮದ ಕೊರತೆಗೆ ಅವಕಾಶ ಕೊಡಬೇಡಿ. ಏಪ್ರಿಲ್ ತಿಂಗಳು ನಿಮಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಅವಕಾಶಗಳನ್ನು ನೀಡುತ್ತದೆ. ಪ್ರಗತಿಯ ಬಲವಾದ ಅವಕಾಶಗಳಿವೆ.

ಮೀನ (Pisces)
ಮೀನ ರಾಶಿಯವರಿಗೆ ಶನಿಯ ಅರ್ಧಾರ್ಧ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಹನುಮ ಜಯಂತಿಯಂದು ಭಕ್ತಿಯಿಂದ ಭಜರಂಗ ಬಲಿ ಪೂಜೆ ಮಾಡಿ, ಇದರಿಂದ ಶನಿ ಮಹಾದಶಾ ಅಶುಭಗಳು ಕಡಿಮೆಯಾಗುತ್ತವೆ. ಆಂಜನೇಯನ ಅನುಗ್ರಹದಿಂದ, ಮೀನ ರಾಶಿಯವರು ತಮ್ಮ ಕಾರ್ಯಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸುತ್ತಾರೆ, ಅವರ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆಗಳಿವೆ.

ಕರ್ಕಾಟಕ (Cancer)
ಹನುಮ ಜಯಂತಿಯು ಕರ್ಕಾಟಕ ರಾಶಿಯವರಿಗೆ ಬಹಳ ಅದೃಷ್ಟವನ್ನು ನೀಡುತ್ತದೆ. ಸಂಪತ್ತಿನ ಮೂಲಗಳು ಹೆಚ್ಚಾಗುತ್ತವೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಯನ್ನು ಕಾಣಬಹುದು, ನಿಮ್ಮ ಗುರಿಯನ್ನು ಸಾಧಿಸಲು ಕೆಲಸದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಕುಟುಂಬದ ಬೆಂಬಲ ಸಿಗಲಿದೆ. ವ್ಯಾಪಾರ ಬೆಳವಣಿಗೆಯ ಅವಕಾಶಗಳು ಸೃಷ್ಟಿಯಾಗುತ್ತಿವೆ. ಏಪ್ರಿಲ್ ತಿಂಗಳು ನಿಮಗೆ ಪ್ರಯೋಜನಕಾರಿಯಾಗಲಿದೆ.

Weekly Love Horoscope: ಈ ರಾಶಿಯ ಪ್ರೇಮ ವಿವಾಹಕ್ಕೆ ಸಿಗಲಿದೆ ಹಿರಿಯರ ಒಪ್ಪಿಗೆ

ಕುಂಭ (Aquarius)
ಹನುಮ ಜಯಂತಿಯಂದು ಕುಂಭ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಸಂಕಟ ಮೋಚನನ ಕೃಪೆಯಿಂದ ಜೀವನದಲ್ಲಿ ನೆಮ್ಮದಿ ಸಿಗುತ್ತದೆ. ಪ್ರಗತಿಗೆ ಅವಕಾಶ ಸಿಗಲಿದೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸಿ. ನೀವು ಕೆಲಸದಲ್ಲಿ ಕಠಿಣ ಪರಿಶ್ರಮದ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ, ಬಡ್ತಿಯ ಬಲವಾದ ಅವಕಾಶಗಳಿವೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!