ಫೆಬ್ರವರಿಯಲ್ಲಿ ಈ 6 ದಿನ ಗೃಹಪ್ರವೇಶಕ್ಕಿದೆ ಮುಹೂರ್ತ; ಹೊಸ ಮನೆ ಪ್ರವೇಶ ವಿಷಯದಲ್ಲಿ ಮಾಡಬೇಡಿ ಈ ತಪ್ಪು

By Suvarna News  |  First Published Jan 28, 2024, 8:30 AM IST

ಈ ಫೆಬ್ರವರಿಯಲ್ಲಿ ಗೃಹಪ್ರವೇಶಕ್ಕಿರುವ ಮುಹೂರ್ತಗಳು ಯಾವೆಲ್ಲ, ಹೊಸ ಮನೆ ತೆಗೆದುಕೊಂಡಿದ್ದರೆ ಮನೆ ಪ್ರವೇಶದ ವಿಷಯದಲ್ಲಿ ನೀವು ಯಾವೆಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಇಲ್ಲಿ ಕೊಡಲಾಗಿದೆ.


ಗೃಹಪ್ರವೇಶವು ವ್ಯಕ್ತಿಯ ಜೀವನದಲ್ಲಿ ಒಂದು ಪ್ರಮುಖ ಸ್ಮರಣೀಯ ಸಂದರ್ಭವಾಗಿದೆ. ಶುಭ ಸಮಯದಲ್ಲಿ ನಿಮ್ಮ ಕನಸಿನ ಮನೆಗೆ ಪ್ರವೇಶ ಮಾಡಿದರೆ, ಮನೆಯಿಂದಾಗಿ ಸಮೃದ್ಧಿಯಾಗುತ್ತದೆ. ಅಲ್ಲಿ ಸಂತೋಷ ಸದಾ ಉಳಿಯುತ್ತದೆ. ಜ್ಯೋತಿಷ್ಯದ ಪ್ರಕಾರ ಶುಭ ದಿನ, ಶುಭ ಮುಹೂರ್ತ, ತಿಥಿ ಮತ್ತು ರಾಶಿಯನ್ನು ಗಮನದಲ್ಲಿಟ್ಟುಕೊಂಡು ಮನೆ ಪ್ರವೇಶಿಸಿದರೆ ಧನಾತ್ಮಕ ಶಕ್ತಿಯು ದೀರ್ಘಕಾಲ ಉಳಿಯುತ್ತದೆ. ಪೂಜೆಯ ಬಳಿಕ ಮನೆಯಲ್ಲಿ ದೇವತೆಗಳು ನೆಲೆಸುತ್ತಾರೆ ಮತ್ತು ದುಷ್ಟಶಕ್ತಿಗಳು ಹೊರ ಹೋಗುತ್ತವೆ. 

ಈ ಫೆಬ್ರವರಿಯಲ್ಲಿ ಗೃಹಪ್ರವೇಶಕ್ಕಿರುವ ಮುಹೂರ್ತಗಳು ಯಾವೆಲ್ಲ, ಹೊಸ ಮನೆ ತೆಗೆದುಕೊಂಡಿದ್ದರೆ ಮನೆ ಪ್ರವೇಶದ ವಿಷಯದಲ್ಲಿ ನೀವು ಯಾವೆಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಇಲ್ಲಿ ಕೊಡಲಾಗಿದೆ.

Tap to resize

Latest Videos

ಗೃಹ ಪ್ರವೇಶ ಫೆಬ್ರವರಿ 2024 ಮುಹೂರ್ತ

12 ಫೆಬ್ರವರಿ 2024, ಸೋಮವಾರ: 
ತೃತೀಯಾ ಉತ್ತರ ಭಾದ್ರಪದ ತಿಥಿ
ಶುಭ ಸಮಯ ಮಧ್ಯಾಹ್ನ 02.54 - 05.44 

14 ಫೆಬ್ರವರಿ 2024, ಬುಧವಾರ
ಪಂಚಮಿ ರೇವತಿ ತಿಥಿ
 ಶುಭ ಸಮಯ ಬೆಳಗ್ಗೆ 07.01ರಿಂದ - 10.43

19 ಫೆಬ್ರವರಿ 2024, ಸೋಮವಾರ
ಏಕಾದಶಿ, ಮೃಗಶಿರ ತಿಥಿ
ಬೆಳಗ್ಗೆ  06.57ರಿಂದ 10.33

26 ಫೆಬ್ರವರಿ 2024, ಸೋಮವಾರ 
ದ್ವಿತೀಯ ತಿಥಿ
ಶುಭ ಸಮಯ ಬೆಳಗ್ಗೆ 06.50 ರಿಂದ ಸಂಜೆ 04.31 

27 ಫೆಬ್ರವರಿ 2024 
ತೃತೀಯಾ, ಉತ್ತರ ಫಲ್ಗುಣಿ
ಶುಭ ಸಮಯ ಬೆಳಗ್ಗೆ 6.17ರಿಂದ 04.16

ರಾಮ್ ಲಲ್ಲಾ ವಿಗ್ರಹದ ಔಟ್‌ಫಿಟ್ ಡಿಸೈನರ್ ಯಾರ್‌ ಗೊತ್ತಾ..?

28 ಫೆಬ್ರವರಿ 2024 ಬುಧವಾರ 
ಶುಭ ಸಮಯ ಬೆಳಗ್ಗೆ 04.18ರಿಂದ 6.47

29 ಫೆಬ್ರವರಿ 2024 ಗುರುವಾರ
ಪಂಚಮಿ ತಿಥಿ
ಶುಭ ಸಮಯ ಬೆಳಗ್ಗೆ  06.47 ರಿಂದ10.22

ಗೃಹ ಪ್ರವೇಶ ವಿಷಯದಲ್ಲಿ ನೀವು ತಿಳಿದಿರಬೇಕಾದ ಸಂಗತಿಗಳು

  • ಮನೆಯ ನಿರ್ಮಾಣ ಕಾರ್ಯ ಸಂಪೂರ್ಣ ಪೂರ್ಣಗೊಂಡ ನಂತರವೇ ಗೃಹ ಪ್ರವೇಶ ಪೂಜೆಯನ್ನು ಮಾಡಿ. ಪೂಜೆಗೂ ಮುನ್ನ ಕಿಟಕಿ, ಬಾಗಿಲು, ಬಣ್ಣ, ಛಾವಣಿ ಸಿದ್ಧವಾಗಿರಬೇಕು.
  • ಶುಭ ತಿಥಿ - ಫಾಲ್ಗುಣ ಮಾಸದಲ್ಲಿ ಗೃಹಪ್ರವೇಶ ಮಾಡುವುದು ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಇದಲ್ಲದೇ ವೈಶಾಖ, ಮಾಘ, ಜ್ಯೇಷ್ಠ ಮಾಸದಲ್ಲಿಯೂ ಗೃಹಪ್ರವೇಶ ಮಾಡಬಹುದು. ಆದರೆ ಭಾದ್ರಪದ, ಆಶಾಢ, ಅಶ್ವಿಜ ಮಾಸದಲ್ಲಿ ಈ ಶುಭ ಕಾರ್ಯವನ್ನು ಮಾಡಬೇಡಿ.
  • ಮನೆಗೆ ಪ್ರವೇಶಿಸುವ ಮೊದಲು ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಕೊಳೆಯೊಂದಿಗೆ ನಕಾರಾತ್ಮಕ ಶಕ್ತಿಯು ನಾಶವಾಗುತ್ತದೆ. ಗಂಗಾಜಲದಿಂದ ಇಡೀ ಮನೆಯನ್ನು ಶುದ್ಧೀಕರಿಸಿ. ಪೂಜೆಗೆ ಮುನ್ನ ಪೀಠೋಪಕರಣಗಳನ್ನು ಸ್ಥಳಾಂತರಿಸಬೇಡಿ. ಪೂಜೆಯ ಸಮಯದಲ್ಲಿ ಕಿಟಕಿ ಮತ್ತು ಬಾಗಿಲುಗಳನ್ನು ತೆರೆದಿಡಿ.
  • ಹೊಸ ಮನೆಗೆ ಪ್ರವೇಶ ಪೂಜೆಯ ಸಮಯದಲ್ಲಿ ಹವನವನ್ನು ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ.
  • ಗೃಹಪ್ರವೇಶದ ಬಳಿಕ ಮನೆಯನ್ನು ಯಾವೊಂದು ರಾತ್ರಿಯೂ ಖಾಲಿ ಬಿಡಬೇಡಿ. 
click me!