ಬಾಟಲಿ ಒಳಗೆ ಅವಿತು ಕುಳಿತ ಗಣೇಶನ ದರ್ಶನ ಭಾಗ್ಯ!

By Ravi Nayak  |  First Published Aug 26, 2022, 4:31 PM IST

ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗಿದೆ. ಕೆಲವೆಡೆ ಗಣೇಶನ ಮೂರ್ತಿ ಕೂರಿಸಲು ತಗಾದೆ ಆರಂಭವಾಗಿದ್ದರೆ, ಲಕ್ಷಾಂತರ ಜನ ಹಬ್ಬವನ್ನು ಹೇಗೆ ಸಂಭ್ರಮಿಸೋದು ಎಂದು ಪ್ಲಾನ್ ಮಾಡುತ್ತಿದ್ದಾರೆ. ಉಡುಪಿಯ ತಂಡವೊಂದು ಈ ಬಾರಿ ವಿಶಿಷ್ಟ ಗಣಪನ ದರ್ಶನ ಅವಕಾಶವನ್ನು ಭಕ್ತರಿಗೆ ನೀಡಿದ್ದಾರೆ.


ಉಡುಪಿ (ಆ.26) : ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗಿದೆ. ಕೆಲವೆಡೆ ಗಣೇಶನ ಮೂರ್ತಿ ಕೂರಿಸಲು ತಗಾದೆ ಆರಂಭವಾಗಿದ್ದರೆ, ಲಕ್ಷಾಂತರ ಜನ ಹಬ್ಬವನ್ನು ಹೇಗೆ ಸಂಭ್ರಮಿಸೋದು ಎಂದು ಪ್ಲಾನ್ ಮಾಡುತ್ತಿದ್ದಾರೆ.  ಹೇಳಿ ಕೇಳಿ ಗಣೇಶ ಕಲಾಪ್ರಿಯ ದೇವತೆ. ಕಲಾವಿದರಿಗೆ ಮೊದಲ ಸ್ಫೂರ್ತಿಯೇ ಗಣೇಶ. ಬಾಲ್ಯದಲ್ಲಿ ಮಗು ಬಿಡಿಸುವ ಮೊದಲ ಚಿತ್ರವೇ ಗಣಪತಿಯದ್ದು... ಹಾಗಾಗಿ ಗಣೇಶ ಚತುರ್ಥಿ ಬಂದರೆ ಕಲಾವಿದರು ನಾನಾ ರೀತಿಯಲ್ಲಿ ತಮ್ಮ  ಇಷ್ಟ ದೇವರನ್ನು ನಾನಾ ರೂಪಗಳಿಂದ ನಿರ್ಮಿಸುತ್ತಾರೆ. ಗಣೇಶನ ಲಕ್ಷಾಂತರ ರೂಪಗಳನ್ನು ಕಾಣಲು ಚೌತಿ ಹಬ್ಬ ಅವಕಾಶ ನೀಡುತ್ತೆ. 

Chitradurga: ಗಣೇಶನ ಮೂರ್ತಿಗಳ ಮಧ್ಯೆ ಕಂಗೊಳಿಸುತ್ತಿರುವ ಅಪ್ಪು ಪ್ರತಿಮೆ

Tap to resize

Latest Videos

ಉಡುಪಿ(Udupi)ಯ ತಂಡವೊಂದು ಈ ಬಾರಿ ವಿಶಿಷ್ಟ ಗಣಪನ ದರ್ಶನ(Ganesh Darshana) ಅವಕಾಶವನ್ನು ಭಕ್ತರಿಗೆ ನೀಡಿದ್ದಾರೆ. ಈ ಬಾರಿ ಉಡುಪಿಯ ಮಾರುತಿ ವೀಥೀಕಾದಲ್ಲಿ 22 ನೇ ಗಣೇಶೋತ್ಸವ(Ganeshotsava ) ಆಚರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಉಡುಪಿಯ ಖ್ಯಾತ ಕಲಾವಿದ ಮಹೇಶ್ ಮರ್ಣೆ(Mahesh Marne)ಯವರ ಅದ್ಭುತ ಕಲಾ ಕೃತಿಯಲ್ಲಿ ಒಂದೆನಿಸಿದ  ಬಾಟಲಿಯ ಒಳಗೆ ಅವಿತು ಕುಳಿತು ದರ್ಶನ‌ ನೀಡುವ ಗಣಪನ ದರ್ಶನ ಮಾಡಬಹುದು.  ಆವೆ ಮಣ್ಣೆನಿಂದ  ಸುಮಾರು10 ವರ್ಷಗಳ ಹಿಂದೆ ರಚಿಸಲ್ಪಟ್ಟ ಈ  ಗಣೇಶ ವಿಗ್ರಹವನ್ನು ಕಲಾ ಆಸಕ್ತರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಮಾರುತಿ ವೀಥೀಕಾದ ಶ್ಯಾಮ್ ಕಾಂಪ್ಲೆಕ್ಸ್ ನ ಮುಂಭಾಗದಲ್ಲಿ  ಅವಕಾಶ ಕಲ್ಪಿಸಲಾಗಿದೆ. ಈ ಗಣಪತಿಯ ಕಲಾ ಕೃತಿಯನ್ನು ಬಾಟಲಿಯೊಳಗೆ ಬಣ್ಣ ಸಹಿತ ರಚನೆ ಮಾಡಿರುವುದು ಅದ್ಬುತವೆನಿಸಿದೆ. ಹತ್ತಾರು ದಿನ ಶ್ರಮ ವಹಿಸಿ ವಿಶೇಷ ರೀತಿಯಲ್ಲಿ ಆವೆ ಮಣ್ಣನ್ನು ಬಾಟಲಿಯೊಳಗೆ ಸಂಗ್ರಹಿಸಿ, ಈ‌ ಕಲಾಕೃತಿ ರಚಿಸಲಾಗಿದೆ.

Chitradurga: ಗಣೇಶನ ಮೂರ್ತಿಗಳ ಮಧ್ಯೆ ಕಂಗೊಳಿಸುತ್ತಿರುವ ಅಪ್ಪು ಪ್ರತಿಮೆ

ಮಹೇಶ್ ಮರ್ಣೆಯವರ ಅದ್ಭುತ ಕಲಾಕೃತಿಗಳಲ್ಲಿ ಇದು ಒಂದಾಗಿದೆ, ಆದುದರಿಂದ ಆಗಸ್ಟ್ 31ರ ಬುಧವಾರ ಚೌತಿಯದಿನದಂದು ಬೆಳಿಗ್ಗೆ ನಿಂದ ಸಂಜೆಯ ತನಕ ಗಣಪತಿಯ ಪೆಂಡಾಲಿನಲ್ಲಿ  ಈ ಕಲಾಕೃತಿ ಇರಿಸಲಾಗುವುದು ಕಲಾಸಕ್ತರಿಗೆ. ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಇದೆ ಎಂದು ಮಾರುತಿ ವೀಥೀಕಾದಲ್ಲಿರುವ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ,

click me!