ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ಕೇಂದ್ರ ಚುನಾವಣಾ ಆಯುಕ್ತ ರಾಜೀವ ಕುಮಾರ

By Kannadaprabha NewsFirst Published Sep 17, 2023, 12:57 PM IST
Highlights

ಭಾರತ ಚುನಾವಣಾ ಆಯುಕ್ತ ರಾಜೀವ ಕುಮಾರ ಇಲ್ಲಿನ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರಕ್ಕೆ ಶನಿವಾರ ಸಂಜೆ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ಅರ್ಚಕ ಅಮೃತೇಶ ಹಿರೇ ಪೂಜಾ ಕೈಂಕರ್ಯ ನೆರವೇರಿಸಿದರು.

ಗೋಕರ್ಣ (ಸೆ.17):  ಭಾರತ ಚುನಾವಣಾ ಆಯುಕ್ತ ರಾಜೀವ ಕುಮಾರ ಇಲ್ಲಿನ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರಕ್ಕೆ ಶನಿವಾರ ಸಂಜೆ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ಅರ್ಚಕ ಅಮೃತೇಶ ಹಿರೇ ಪೂಜಾ ಕೈಂಕರ್ಯ ನೆರವೇರಿಸಿದರು. ಮಂದಿರದ ವತಿಯಿಂದ ಪ್ರಸಾದ ನೀಡಿ ಗೌರವಿಸಲಾಯಿತು. ಇದಕ್ಕೂ ಮೊದಲು ಮಹಾಗಣಪತಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇವೆರಡು ದೇವಾಲಯದ ಭೇಟಿಯ ಬಳಿಕ ತಾಮ್ರಗೌರಿ ಮಂದಿರಕ್ಕೆ ತೆರಳಿ ದೇವಿ ದರ್ಶನ ಪಡೆದರು.

ಈ ವೇಳೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ,ಸಿರ್ಸಿ ಉಪವಿಭಾಗಾಧಿಕಾರಿ ದೇವರಾಜ ಕುಮಟಾ ತಹಶೀಲ್ದಾರ್ ಸತೀಶ್ ಗೌಡ, ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಪಿ.ಐ. ವಸಂತ್ ಆಚಾರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು. 

Latest Videos

ಗಣೇಶನ ಮಹಿಮೆಗೆ ಹೆಸರಾದ ರಾಜ್ಯದ ಪ್ರಮುಖ ಗಣಪತಿ ದೇವಾಲಯಗಳು

ಗಮನ ಸೆಳೆದ ಯಕ್ಷಗಾನ ಪ್ರದರ್ಶನ

ಗೋಕರ್ಣ: ಶ್ರೀಕೃಷ್ಣ ವೇದ ಪ್ರತಿಷ್ಠಾನ ಮತ್ತು ಮಯ್ಯ ಯಕ್ಷ ಬಳಗದ ಹಾಲಾಡಿ ಸಹಯೋಗದಲ್ಲಿ ಶ್ರಾವಣ ಯಕ್ಷ ಸಂಜೆ ಕಾರ್ಯಕ್ರಮ ಇತ್ತೀಚಿಗೆ ಕುಡ್ಲೆ ಬೀಚ್ ರಸ್ತೆಯಲ್ಲಿರುವ ಶಾಂತಿಕೃಷ್ಣ ರೆಸಿಡೆನ್ಸಿಯ ಎಸ್.ಕೆ. ಪ್ಯಾಲೇಸ್‍ನಲ್ಲಿ ನಡೆಯಿತು.

ಊರಿನ ಯಕ್ಷಗಾನ ಕಲಾವಿದರನ್ನು ಸಂಸ್ಮರಣೆಗಾಗಿ ಪ್ರತಿ ತಿಂಗಳು ನಡೆಯವ ಈ ಕಾರ್ಯಕ್ರಮದಲ್ಲಿ ಈ ಬಾರಿ ಇಲ್ಲಿನ ಖ್ಯಾತ ಯಕ್ಷಗಾನ ಕಲಾವಿದ, ಬರಹಗಾರ ಖಳನಾಯಕನ ಪಾತ್ರದಿಂದ ಪ್ರಸಿದ್ದರಾದ ಮಹಾಬಲೇಶ್ವರ ಬರವಣಿಯವರನ್ನು ಸಂಸ್ಮರಣೆ ಮಾಡಲಾಯಿತು. ಅಣ್ಣಿ ಮಹಾಬಲಣ್ಣ ಎಂದೇ ಆತ್ಮೀಯರಾದ ಕಲಾವಿದರ ಜೀವನದ ಬಗ್ಗೆ ಖ್ಯಾತ ಯಕ್ಷಗಾನ ಕಲಾವಿದ ಅನಂತ ಹಾವಗೋಡಿ ವಿವರಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಮಯ್ಯರ್ ನಮ್ಮ ಪುಣ್ಯ ಕ್ಷೇತ್ರದಲ್ಲಿ ಈ ಹಿಂದೆ ವೈಭವದಿಂದ ನಡೆಯುತ್ತಿರುವ ಯಕ್ಷಗಾನ ಮತ್ತು ಅಂದಿನ ಕಲಾವಿದರ ಸ್ಮರಿಸಿ ಯಕ್ಷ ಕಲೆ ಮುಂದುವರಿಸಿಕೊಂಡು ಹೋಗುವ ಉದ್ದೇಶ ನಮ್ಮದಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಕೋರಿದರು.

ಸಭಾ ಕಾರ್ಯಕ್ರಮದ ನಂತರ ಹಾಲಾಡಿ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯ ಜಿ. ರಾಘವೇಂದ್ರ ಮಯ್ಯ ಸಾರಥ್ಯದಲ್ಲಿ ಪ್ರಖ್ಯಾತ ಯಕ್ಷಗಾನ ಕಲಾವಿದರಿಂದ ನಡೆದ ಮಹಿಷಾಸುರ ಮರ್ದಿನಿ ಯಕ್ಷಗಾನ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರನ್ನು ಮನರಂಜಿಸಿತು. 

ಯುವಕರ ಭವಿಷ್ಯಕ್ಕೆ ಮಠ ಬೇಕು: ರಾಘವೇಶ್ವರ ಭಾರತೀ ಸ್ವಾಮೀಜಿ

ಇದೇ ಕಲಾವಿದರು ಪುರಾಣ ಪ್ರಸಿದ್ದ ಮಹಾಗಣಪತಿ, ಮಹಾಬಲೇಶ್ವರ ಮತ್ತು ತಾಮ್ರಗೌರಿ ಮಂದಿರಕ್ಕೆ ತೆರಳಿ ಕಲಾ ಸೇವೆ ನೀಡಿ ವಂದಿಸಿದ್ದು ವಿಶೇಷವಾಗಿತ್ತು. ಈ ಹಿಂದೆ ಇಲ್ಲಿ ಯಕ್ಷಗಾನ ನಡೆಯುವಾಗ ಯಕ್ಷಗಾನ ಕಲಾವಿದರು ದೇವರಿಗೆ ಸೇವೆ ನೀಡಿ ತೆರಳುವುದು ಸಂಪ್ರದಾಯವಾಗಿತ್ತು, ಆದರೆ ಕಾಲ ಬದಲಾದಂತೆ ಎಲ್ಲವು ಬದಲಾಗಿದ್ದು, ಈ ಕಾರ್ಯಕ್ರಮದ ಮೂಲಕ ಮತ್ತೆ ಹಿಂದಿನ ಪರಂಪರೆ ಮುಂದುವರಿಯಲಿ ಎಂದು ಸಂಘಟಕರು ಆಶಯ ವ್ಯಕ್ತಪಡಿಸಿದ್ದಾರೆ.

click me!