⦁ ಕೊಠಡಿಯಲ್ಲಿ ತಾಯಿ-ಹೊರಗೆ ಮಗು ಪರೀಕ್ಷೆಗೆ ಜೈ ಎಂದ ತಾಯಿ.
⦁ ತಾಯಿ ಪರೀಕ್ಷೆ ಎದುರಿಸಿದ್ರೆ, ಮಗುವನ್ನ ಆರೈಕೆ ಮಾಡಿದ ಆಶಾ ಕಾರ್ಯಕರ್ತೆ.
⦁ ಹಿಜಾಬ್‌ಗಾಗಿ ಪರೀಕ್ಷೆ ಬಹಿಷ್ಕರಿಸಿದವ್ರಿಗೆ ಪಾಠ ಈ ಸ್ಟೋರಿ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಮಾ.28): ಹಿಜಾಬ್ ಗದ್ದಲದಲ್ಲಿ ಜಾತಿ ಸಂಕೋಲೆಗೆ ಜೋತು ಬಿದ್ದ ಅದೇಷ್ಟೋ ಹೆಣ್ಣು ಮಕ್ಕಳು ಶಿಕ್ಷಣಕ್ಕಿಂತ ಧರ್ಮವೇ ಹೆಚ್ಚು ಅಂತಾ ಶೈಕ್ಷಣಿಕ ಬದುಕನ್ನೆ ಹಾಳು ಮಾಡಿಕೊಳ್ತಿದ್ದಾರೆ. ರಾಜ್ಯದಲ್ಲಿ ಕೆಲವೆಡೆ ಪರೀಕ್ಷಾ ಕೊಠಡಿಯಲ್ಲಿ ಹಿಜಾಬ್ ಗೆ ಅವಕಾಶ ಇಲ್ಲಾ ಎಂದಾಗ ಪರೀಕ್ಷೆಯನ್ನೆ ಬಿಟ್ಟು ವಾಪಾಸ್ ಮನೆಗೆ ಹೋಗುವ ಮೂಲಕ ನಮಗೆ ಧರ್ಮವೇ ಹೆಚ್ಚೆಂದು ತೋರಿಸಿಕೊಟ್ಟಿದ್ದಾರೆ. ಆದ್ರೆ ವಿಜಯಪುರದಲ್ಲಿ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Exam) ಬರೆದ ತಾಯಿಯೊಬ್ಬಳು ಶಿಕ್ಷಣದ ಮಹತ್ವವನ್ನ ಸಾರಿದ್ದಾಳೆ.. ತನ್ನ ನಾಲ್ಕು ತಿಂಗಳ ಮಗುವಿನ ಜೊತೆಗೆ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದಿದ್ದಾಳೆ..
undefined
ಕರುಳ ಕುಡಿಯ ಜೊತೆಗೆ ಬಂದು ಪರೀಕ್ಷೆ ತಶ್ಲೀಮಾ: ಗುಮ್ಮಟನಗರಿ ವಿಜಯಪುರ ಜಿಲ್ಲೆಯ ತಾಳಿಕೋಟೆ (Talikote) ತಾಲೂಕು ಕೊಡಗಾನೂರ (Kodaganuru Village) ಗ್ರಾಮದ ತಸ್ಲೀಮಾ ಮಕಾನದಾರ ಎಂಬ ಮಹಿಳೆ ತನ್ನ ಪುಟಾಣಿ ಮಗುವಿನ ಜೊತೆಗೆ ಪರೀಕ್ಷಾ ಕೇಂದ್ರ ಬಂದು ಪರೀಕ್ಷೆ ಎದುರಿಸಿದ್ದಾಳೆ. ಮುದ್ದೇಬಿಹಾಳ ಪಟ್ಟಣದ ಅಭ್ಯುದಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾಳೆ. ಬಾಹ್ಯ ಅಭ್ಯರ್ಥಿಗಳಿಗಾಗಿ ನಡೆಯುವ ಪರೀಕ್ಷಾ ಕೇಂದ್ರದಲ್ಲಿ (Exam Center) ಪರೀಕ್ಷೆ ಬರೆದು ಮಾದರಿಯಾಗಿದ್ದಾಳೆ. ಈ ಮುಂಚೆ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿದ್ದ ಎಸ್‌ಎಸ್‌ಎಲ್‌ಸಿ ಖಾಸಗಿ ಪರೀಕ್ಷೆಗಳನ್ನು ಈ ಬಾರಿ ತಾಲೂಕು ಕೇಂದ್ರದಲ್ಲಿ ಬರೆಯಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ತಶ್ಲೀಮಾ 35 ಕಿ.ಮೀ ದೂರದಲ್ಲಿರುವ ಕೊಡಗಾನೂರಿನಿಂದ ಬಂದು ಮುದ್ದೇಬಿಹಾಳ ಪಟ್ಟಣದಲ್ಲಿ (Muddebihal Town) ಪರೀಕ್ಷೆಗೆ ಹಾಜರಾಗಿದ್ದಾಳೆ.
Vijayapura: ತಾಯಿಗಾಗಿ ದೇಗುಲವನ್ನೇ ಕಟ್ಟಿದ ಮಗ..!
4 ತಿಂಗಳ ಮಗುವನ್ನ ಆರೈಕೆ ಮಾಡಿದ ಆಶಾ ಕಾರ್ಯಕರ್ತೆ: ಪುಟಾಣಿ ಮಗುವಿನ ಜೊತೆಗೆ ಪರೀಕ್ಷೆ ಬರೆಯಲು ಬಂದ ತಶ್ಲೀಮಾ ಪರೀಕ್ಷಾ ಕೊಠಡಿಯ ಹೊರಗೆ ಮಗುವನ್ನ ಬಿಟ್ಟು ಪರೀಕ್ಷೆ ಬರೆಯಬೇಕಿತ್ತು. ಆಗ ಪರೀಕ್ಷಾ ಕೇಂದ್ರದ ಹೊರಗೆ ಕರ್ತವ್ಯದ ಮೇಲಿದ್ದ ಆಶಾ ಆರ್ಯಕರ್ತೆ (Asha Worker) ಉಮಾ ಶಾರದಳ್ಳಿ ಭಾರತ ಸ್ಕೌಟ್ಸ್ ಆಂಡ್ ಗೈಡ್ ಶಿಕ್ಷಕಿ ನದಾಫ್ ಮಗುವಿನ ಆರೈಕೆ ಮಾಡಿದ್ದಾರೆ. ಪರೀಕ್ಷೆ ಬರೆಯುವ ವೇಳೆ ಮಗು ಅತ್ತರೆ ಪರೀಕ್ಷೆ ಎದುರಿಸುತ್ತಿರುವ ತಾಯಿ (Mother) ತಶ್ಲೀಮಾಳಿಗೆ ತೊಂದರೆಯಾಗುತ್ತೆ ಎನ್ನುವ ಕಾರಣಕ್ಕೆ ಆಶಾ ಕಾರ್ಯಕರ್ತೆ ಹಾಗೂ ಸ್ಕೌಟ್ ಆಂಡ್ ಗೈಡ್ (Scout And Guide) ಶಿಕ್ಷಕಿ ಬಲು ಕಾಳಜಿಯಿಂದ ಮಗುವಿನ ಆರೈಕೆ ಮಾಡಿದ್ದು ಕಂಡು ಬಂತು.
ಆಧುನಿಕ ಶ್ರವಣಕುಮಾರನ ಕರುಣಾಜನಕ ಕಥೆ, ಅಂದು ಹೊಗಳಿದ್ದ ರಾಜಕಾರಣಿಗಳು ಕ್ಯಾರೆ ಎನ್ನುತ್ತಿಲ್ಲ
ಮಗು ಅತ್ತಾಗಲೇಲ್ಲ ತಾಯಿಗೆ ತಳಮಳ: ಇನ್ನು ತಶ್ಲೀಮಾ ಪರೀಕ್ಷೆ ಬರೆಯುತ್ತಿದ್ದ ವೇಳೆ ಮಗು ಅತ್ತ ಘಟನೆಯು ನಡೆಯಿತು. ಕೊಠಡಿಯಲ್ಲಿ ಪರೀಕ್ಷೆ ಬರೆಯುವ ವೇಳೆ ಮಗು ಅತ್ತಿದೆ, ಆಗ ಮಗುವಿನ ಧ್ವನಿ ಕೇಳಿ ಹೊರಗೆ ಬಂದು ತಶ್ಲೀಮಾ ಎದೆಹಾಲು ನೀಡಿದ್ದಾರೆ. ಮಗು ಅತ್ತಾಗಲೆಲ್ಲ ತಳಮಳಕ್ಕೆ ಒಳಗಾಗುತ್ತಿದ್ದ ತಾಯಿ ಆಗಾಗ್ಗ ಪರೀಕ್ಷಾ ಕೊಠಡಿಯ ಹೊರಗೆ ಬಂದು ಮಗುವಿಗೆ ಹಾಲುಣಿಸಿದ್ದಾರೆ. ಈ ಮೂಲಕ ಶಿಕ್ಷಣದ ಮಹತ್ವ ಎಂತದ್ದು ಎನ್ನುವುದನ್ನ ತಶ್ಲೀಮಾ ಜಗಜ್ಜಾಹೀರು ಮಾಡಿದ್ದಾರೆ. ಹಿಜಾಬ್ ಗಾಗಿ ತರಗತಿ, ಪರೀಕ್ಷೆಗಳನ್ನೆ ಬೇಡ ಅಂವರಿಗೆ ತಶ್ಲೀಮಾ ಮಾದರಿಯಾಗಿ ನಿಂತದ್ದು ವಿಶೇಷವಾಗಿತ್ತು.