ಯುವಿಸಿಇ ಮೊದಲ ನಿರ್ದೇಶಕರನ್ನಾಗಿ ಪಶ್ಚಿಮ ಬಂಗಾಳದ ಖರಗಪುರ ಐಐಟಿಯ ಭೂ ವಿಜ್ಞಾನ ಮತ್ತು ಭೂ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ। ಎಸ್.ತ್ರಿಪಾಠಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಬೆಂಗಳೂರು (ಜೂ.24): ನಗರದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯದ (ಯುವಿಸಿಇ) ಮೊದಲ ನಿರ್ದೇಶಕರನ್ನಾಗಿ ಪಶ್ಚಿಮ ಬಂಗಾಳದ ಖರಗಪುರ ಐಐಟಿಯ ಭೂ ವಿಜ್ಞಾನ ಮತ್ತು ಭೂ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ। ಎಸ್.ತ್ರಿಪಾಠಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಯುವಿಸಿಇ ಆಡಳಿತ ಮಂಡಳಿಯ ರಚಿಸಿದ್ದ ಶೋಧನೆ ಮತ್ತು ಆಯ್ಕೆ ಸಮಿತಿಯು ಯುವಿಸಿಇ ನಿರ್ದೇಶಕ ಹುದ್ದೆಗೆ ಮೂರು ಹೆಸರನ್ನುಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಸರ್ಕಾರ ಇವುಗಳ ಪೈಕಿ ಡಾ। ಎಸ್.ತ್ರಿಪಾಠಿ ಅವರನ್ನು ಮುಂದಿನ ನಾಲ್ಕು ವರ್ಷಗಳ ಅವಧಿಗೆ ಅಥವಾ ಅವರಿಗೆ 70 ವರ್ಷ ವಯೋಮಿತಿಯಾಗುವವರೆಗೆ ಯಾವುದು ಮೊದಲೋ ಅದರನ್ವಯ ಮೊದಲ ನಿರ್ದೇಶಕರನ್ನಾಗಿ ನೇಮಕ ಮಾಡಿ ಗುರುವಾರ ಆದೇಶ ಹೊರಡಿಸಿದೆ.
ಮೂರನೇ ಅತ್ಯಾಚಾರ ಪ್ರಕರಣ: ಮತ್ತೆ ಪ್ರಜ್ವಲ್ ನ್ಯಾಯಾಂಗ ಬಂಧನ, ಜುಲೈ 8ರವರೆಗೆ ಪರಪ್ಪನ ಅಗ್ರಹಾರ
ರಾಜ್ಯದ ಮೊದಲ ಎಂಜಿನಿಯರಿಂಗ್ ಕಾಲೇಜು ಹಾಗೂ ಪಾರಂಪರಿಕ ಸಂಸ್ಥೆ ಎಂದು ಹೆಸರಾಗಿದ್ದ ಯುವಿಸಿಎ ಕಾಲೇಜನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರ್ಕಾರ 2022ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಬೇರ್ಪಡಿಸಿ ಯುವಿಸಿಇ ಸ್ವಾಯತ್ತ ವಿಶ್ವವಿದ್ಯಾಲಯವನ್ನು ಸ್ಥಾಪಿಸಿತ್ತು.
ಪತ್ನಿ, ಮಗ ಜೈಲು ಭೇಟಿ ವೇಳೆ ದರ್ಶನ್ ಕಣ್ಣೀರ ಧಾರೆ: ಮಗನನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ನಟ
ಬಳಿಕ ಡಾ। ಮುತ್ತುರಾಮನ್ ನೇತೃತ್ವದ ಆಡಳಿತ ಮಂಡಳಿಯನ್ನು ರಚಿಸಿದ್ದ ಸರ್ಕಾರ, 2023ರಲ್ಲಿ ಬಾಂಬೆ ಐಐಟಿಯ ಎಲೆಕ್ಟ್ರಿಕಲ್ ವಿಭಾಗದ ಪ್ರಾಧ್ಯಾಪಕ ಪ್ರೊ. ಡಿ.ಮಂಜುನಾಥ್ ಅವರನ್ನು ಮೊದಲ ನಿರ್ದೇಶಕರನ್ನಾಗಿ ನೇಮಕ ಮಾಡಿತ್ತು. ಆದರೆ, ಅವರು ವರ್ಷ ಕಳೆದರೂ ಆ ಹುದ್ದೆಯನ್ನು ಅಲಂಕರಿಸಲು ಅವರು ಕಾಲಾವಕಾಶ ಕೇಳುತ್ತಲೇ ಬರುತ್ತಿದ್ದರು. ಈ ಮಧ್ಯೆ, ಮಂಜುನಾಥ್ ಅವರು ಸೆಂಚೂರಿ ಕ್ಲಬ್‌ನಲ್ಲಿ ಸದಸ್ಯತ್ವ, ಬ್ಯುಸಿನೆಸ್ ಕ್ಲಾಸ್ ವಿಮಾನ ಪ್ರಯಾಣ ಸೇರಿದಂತೆ ವೇತನದ ಬಗ್ಗೆ ಅಸಮಂಜಸವಾದ ಬೇಡಿಕೆಗಳನ್ನು ಇಟ್ಟಿದ್ದಾರೆ ಎಂಬ ವರದಿಗಳಾಗಿ ಯುವಿಸಿಇ ಪ್ರಾಧ್ಯಾಪಕರ ವಲಯದಲ್ಲಿ ಅಸಮಾಧಾನಕ್ಕೂ ಕಾರಣವಾಗಿತ್ತು. ಬಳಿಕ ಸರ್ಕಾರ ಅವರ ನೇಮಕಾತಿಯನ್ನು ಹಿಂಪಡೆದಿತ್ತು. ಈಗ ಹೊಸ ನಿರ್ದೇಶಕರನ್ನು ನೇಮಕ ಮಾಡಿದೆ.