ಕೊನೆಗೂ ಎಚ್ಚೆತ್ತ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯ ( VTU)

By Suvarna NewsFirst Published Apr 26, 2021, 10:09 PM IST
Highlights

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 14 ದಿನಗಳ ಕಾಲ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಬೆಂಗಳೂರು, (ಏ.27): ಕೊರೋನಾ ಆತಂಕದ ಮಧ್ಯೆ ಪರೀಕ್ಷೆ ನಡೆಸಲು ಮುಂದಾಗಿದ್ದ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದ ( VTU) ಬುದ್ಧಿ ಕಲಿತಿದೆ.

ಹೌದು....ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದ ( VTU) ಪರೀಕ್ಷೆಗಳು ಮುಂದೂಡಿಕೆಯಾಗಿದೆ ಎಂದು ವಿವಿ ಆದೇಶ ಹೊರಡಿಸಿದೆ. ಮುಂದಿನ ಆದೇಶದವರೆಗೂ ಪರೀಕ್ಷೆಗಳನ್ನು ಮುಂದೂಡಿ ವಿಟಿಯು ಆದೇಶ ಹೊರಡಿಸಿದೆ.

ಟಫ್ ರೂಲ್ಸ್‌ ಮಧ್ಯೆ ಪರೀಕ್ಷೆ ನಡೆಸಲು ವಿಟಿಯುಗೆ ಗ್ರೀನ್ ಸಿಗ್ನಲ್! 

ಈ ಮೊದಲು ವಿಟಿಯುಗೆ ಪರೀಕ್ಷೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಆದ್ರೆ, ಇದಕ್ಕೆ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಅಲ್ಲದೇ ನಿಮ್ಮ ಏಷ್ಯಾನೆಟ್ ಸುವರ್ಣನ್ಯೂಸ್‌ ಸಹ ವಿಸ್ತೃತ ವರದಿಯನ್ನೂ ಸಹ ಮಾಡಿತ್ತು.

ಇದೀಗ ಎಚ್ಚೆತ್ತುಕೊಂಡಿರುವ ವಿಟಿಯು ಅಂತಿಮವಾಗಿ ತನ್ನೆಲ್ಲಾ ಪರೀಕ್ಷೆಗಳನ್ನು ಮುಂದೂಡಿ ಸುತ್ತೋಲೆ ಹೊರಡಿಸಿದೆ.

click me!