ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲದ ಫಸ್ಟ್ ಸೆಮಿಸ್ಟರ್​ ಪರೀಕ್ಷಾ ವೇಳಾಪಟ್ಟಿ ಪ್ರಕಟ

By Suvarna News  |  First Published Jul 12, 2021, 3:34 PM IST

* ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷಾ ವೇಳಾಪಟ್ಟಿ ಪ್ರಕಟ
* ಬಾಕಿ ಉಳಿದ ಮೊದಲ ಸೆಮಿಸ್ಟರ್ ಪರೀಕ್ಷೆಗೆ ದಿನಾಂಕ ನಿಗದಿ
* ಕೊರೊನಾ ಹಿನ್ನೆಲೆ ಪರೀಕ್ಷೆ ಮುಂದೂಡಲಾಗಿತ್ತು


ಬೆಂಗಳೂರು, (ಜು.12): ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದ್ದು, ಬಾಕಿ ಉಳಿದ ಮೊದಲ ಸೆಮಿಸ್ಟರ್ ಪರೀಕ್ಷೆಗೆ ದಿನಾಂಕ ನಿಗದಿಪಡಿಸಲಾಗಿದೆ. 

 ಜುಲೈ 27 ರಿಂದ ಪ್ರಥಮ ಸೆಮಿಸ್ಟರ್ ಪರೀಕ್ಷೆ ಆರಂಭವಾಗಲಿದ್ದು, ಅಗಸ್ಟ್ 3ರವರೆಗೆ ಪರೀಕ್ಷೆಗಳು ನಡೆಯಲಿವೆ. ಅಗಸ್ಟ್ 4 ರಿಂದ ಅಗಸ್ಟ್13ರವರೆಗೆ ವೈವಾ ಮತ್ತು ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ.

Tap to resize

Latest Videos

undefined

ಕೊನೆಗೂ ಎಚ್ಚೆತ್ತ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯ ( VTU)

ಕಳೆದ ಏಪ್ರಿಲ್ ತಿಂಗಳಿನಲ್ಲಿ ನಿಗದಿಯಾಗಿದ್ದ ಪರೀಕ್ಷೆ ಕೊರೊನಾ ಹಿನ್ನೆಲೆ ಪರೀಕ್ಷೆ ಮುಂದೂಡಲಾಗಿತ್ತು. ಆದರೆ ಇದೀಗ ವಿಟಿಯು ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.

ಜನವರಿ, ಮಾರ್ಚ್​​ನಲ್ಲಿ ನಡೆದಿದ್ದ ಸೆಮಿಸ್ಟರ್ ಪರೀಕ್ಷೆಯ ಈಗಾಗಲೇ ಪ್ರಕಟವಾಗಿರುವ ಫಲಿತಾಂಶವನ್ನು ಮರು ಮೌಲ್ಯಮಾಪನಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಅರ್ಜಿ ಆಹ್ವಾನಿಸಿದೆ. 

ವಿದ್ಯಾರ್ಥಿಗಳು ಫಲಿತಾಂಶದಲ್ಲಿ ತಕರಾರಿದ್ದರೆ ಅರ್ಜಿ ಸಲ್ಲಿಸಬಹುದು ಎಂದು ವಿಟಿಯು ತಿಳಿಸಿದೆ. ಜುಲೈ 14ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಉತ್ತರ ಪತ್ರಿಕೆ ಫೋಟೋ ಕಾಪಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. 

ಮರುಮೌಲ್ಯಮಾಪನ ಅರ್ಜಿ ಆಯಾ ಕಾಲೇಜಿಗೆ ಸಲ್ಲಿಸಬೇಕು. http://prexamblr.Vtu.Ac.inನಲ್ಲಿ ಅರ್ಜಿ ವೀಕ್ಷಿಸಬಹುದು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಸುತ್ತೋಲೆ ತಿಳಿಸಿದೆ.

click me!