* ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆ ರದ್ದು ಮಾಡುವಂತೆ ಒತ್ತಾಯ
* ರಾಜ್ಯದಲ್ಲಿ ಕೊರೋನಾ ಹೆಚ್ಚಳವಾಗಿರುವುದರಿಂದ ಪರೀಕ್ಷೆ ಬೇಡ ಎಂದ ವಾಟಳ್
* ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‌ಗೆ ಒತ್ತಾಯ
ಚಾಮರಾಜನಗರ, (ಮೇ.22): ದೇಶದಲ್ಲಿ ಕೊರೋನಾ ಹೆಚ್ಚಳವಾಗುತ್ತಿರುವುದರಿಂದ ಕೆಲ ರಾಜ್ಯಗಳಲ್ಲಿ 10 ಹಾಗೂ12ನೇ ತರಗತಿ ಪರೀಕ್ಷೆಗಳನ್ನ ರದ್ದು ಮಾಡಿವೆ.
ಇನ್ನು ಕರ್ನಾಟಕದಲ್ಲೂ ಸಹ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪರ-ವಿರೋಧಗಳ ಚರ್ಚೆಗಳು ನಡೆದಿವೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪರೀಕ್ಷೆ ನಡೆಸಲು ಚಿಂತನೆಗಳನ್ನ ನಡೆಸಿದ್ದು, ಈ ಬಗ್ಗೆ ತಜ್ಞರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.
undefined
SSLC,PUC ಪರೀಕ್ಷೆ ಬಗ್ಗೆ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ
ಆದ್ರೆ, ಎಸ್ಎಸ್ಎಲ್ಸಿ ಮತ್ತು ಪಿಯುಸಿ ಮಕ್ಕಳಿಗೆ ಈ ವರ್ಷ ಪರೀಕ್ಷೆ ಬೇಡ.. ಹಾಗೆಯೇ ಅವರನ್ನ ಪಾಸ್ ಮಾಡಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ಚಾಮರಾಜನಗರ ಇಂದು (ಶನಿವಾರ) ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್, ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಕ್ಕಳ ಜೊತೆ ಆಟವಾಡ ಬೇಡಿ. ಎಲ್ಲಾ ರಾಜ್ಯಗಳಲ್ಲಿ ಎಸ್‌ಎಸ್‌ಎಲ್ ವಿದ್ಯಾರ್ಥಿಗಳನ್ನ ಪರೀಕ್ಷೆ ಇಲ್ಲದೇ ಪಾಸ್ ಮಾಡಿದ್ದಾರೆ. ನಿಮಗೆ ಹೇಳ್ತೀನಿ, ಈ ವಿಚಾರದಲ್ಲಿ ಚಾಲೆಂಜ್ ತೆಗೆದುಕೊಳ್ಳಬೇಡಿ ಎಂದರು.
ಯಾವ ಕಾರಣಕ್ಕೂ ನೀವು ಮಕ್ಕಳಿಂದ ಪರೀಕ್ಷೆ ಬರೆಸಲು ಆಗಲ್ಲ. ಒಂದು ತಿಂಗಳು ಪಾಠವೇ ಆಗಿಲ್ಲ. ಆದ್ದರಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಮಕ್ಕಳನ್ನ ಪಾಸ್ ಮಾಡಲೇಬೇಕು ಎಂದು ಆಗ್ರಹಿಸಿದರು.