*ಅಜಾದಿ ಕಾ ಅಮೃತ್ ಮಹತ್ಸೋವದ ಹಿನ್ನೆಲೆಯಲ್ಲಿ ಈ ಸೂರ್ಯ ನಮಸ್ಕಾರ ಆಚರಣೆ
*30 ರಾಜ್ಯಗಳಲ್ಲಿ 750 ಮಿಲಿಯನ್ ಸೂರ್ಯ ನಮಸ್ಕಾರ ಕೈಗೊಳ್ಳಲು ಪ್ಲ್ಯಾನ್
*ಸುಮಾರು 3 ಲಕ್ಷಕ್ಕೂ ಅಧಿಕಾರಿಗಳು ಈ ವಿಶಿಷ್ಟ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ
75ನೇ ಗಣರಾಜ್ಯೋತ್ಸವದ ಅಂಗವಾಗಿ ದೇಶದಲ್ಲಿರುವ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಯುಜಿಸಿ (University Grant Commission) ಸೂಚಿಸಿದೆ. ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥವಾಗಿ ನಡೆಯುತ್ತಿರುವ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಭಾರತದ ರಾಷ್ಟ್ರೀಯ ಯೋಗಾಸನ ಕ್ರೀಡಾ ಒಕ್ಕೂಟವು ಈ ಈವೆಂಟ್ ಅನ್ನು ಆಯೋಜಿಸಿದೆ. 'ಅಮೃತ್ ಮಹೋತ್ಸವ ಸ್ಮರಣಾರ್ಥವಾಗಿ, ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್ (Sports Federation) ಜನವರಿ 1 ರಿಂದ ಫೆಬ್ರವರಿ 7 ರವರೆಗೆ 30 ರಾಜ್ಯಗಳಲ್ಲಿ 750 ಮಿಲಿಯನ್ ಸೂರ್ಯ ನಮಸ್ಕಾರ ಯೋಜನೆಯನ್ನು ನಡೆಸಲು ನಿರ್ಧರಿಸಿದೆ. ರಾಷ್ಟ್ರೀಯ ಯೋಗಾಸನ ಕ್ರೀಡಾ ಒಕ್ಕೂಟದಡಿ ಬರುವ 30 ಸಾವಿರ ಸಂಸ್ಥೆಗಳು ಮತ್ತು 3 ಲಕ್ಷ ವಿದ್ಯಾರ್ಥಿಗಳು ಈ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜನವರಿ 26 ರಂದು ತ್ರಿವರ್ಣ ಧ್ವಜದ ಮುಂದೆ ಸಂಗೀತ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಪ್ರದರ್ಶಿಸಲಾಗುತ್ತದೆ. ಭಾರತೀಯ ಸಂಸ್ಕೃತಿ (India Culture) ಹಾಗೂ ಪರಂಪರೆಯಲ್ಲಿ (Heritage) ಈ ಸೂರ್ಯ ನಮಸ್ಕಾರಕ್ಕೆ ವಿಶಿಷ್ಟ ಸ್ಥಾನವಿದೆ. ಯೋಗ (Yoga) ಆರಂಭವಾಗುವುದೇ ಈ ಸೂರ್ಯ ನಮಸ್ಕಾರದಿಂದ. ಹಾಗಾಗಿ, ಅದರ ಮಹತ್ವವನ್ನು ಸಾರುವುದಕ್ಕಾಗಿ ಈ ರೀತಿಯ ಕಾರ್ಯಕ್ರಮವನ್ನು ಯುಜಿಸಿ ಹಮ್ಮಿಕೊಂಡಿದೆ.
UPSC Success Story: 10 ವರ್ಷ ಕಂಪನಿಯಲ್ಲಿ ಕೆಲಸ ಮಾಡಿ, IAS ಅಧಿಕಾರಿಯಾದ ಪ್ರೇಮ್ ಪ್ರಕಾಶ್ ಮೀನಾ
ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಸಂಯೋಜಿತ ಕಾಲೇಜುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಯುಜಿಸಿ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ವ್ಯಾಪಕ ಪ್ರಚಾರ ನೀಡುವ ಮೂಲಕ ಈ ಈವೆಂಟ್ ಅನ್ನು ಉತ್ತೇಜಿಸಲು ಆಯೋಗವು ಶಿಕ್ಷಣ ಸಂಸ್ಥೆಗಳನ್ನು ಕೇಳಿಕೊಂಡಿದೆ.
'ಅಮೃತ್ ಮಹೋತ್ಸವ್ ನೆನಪಿಗಾಗಿ, ಒಕ್ಕೂಟವು 30 ರಾಜ್ಯಗಳಲ್ಲಿ 30000 ಸಂಸ್ಥೆಗಳನ್ನು ಒಳಗೊಂಡ 750 ಮಿಲಿಯನ್ ಸೂರ್ಯ ನಮಸ್ಕಾರದ ಯೋಜನೆಯನ್ನು ನಡೆಸಲು ನಿರ್ಧರಿಸಿದೆ. ಇದರಲ್ಲಿ 3 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು, ಜನವರಿ 1 ರಿಂದ ಫೆಬ್ರವರಿ 7 ರವರೆಗೆ ಈವೆಂಟ್ ನಡೆಯಲಿದೆ. ಜನವರಿ 26 ರಂದು ತ್ರಿವರ್ಣ ಧ್ವಜದ ಮುಂದೆ ಲಕ್ಷಾಂತರ ವಿದ್ಯಾರ್ಥಿಗಳು ಸಂಗೀತ ಸೂರ್ಯ ನಮಸ್ಕಾರವನ್ನು ಮಾಡಲಿದ್ದಾರೆ. ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಸಂಯೋಜಿತ ಕಾಲೇಜುಗಳು ಈವೆಂಟ್‌ನಲ್ಲಿ ಭಾಗವಹಿಸಲು ವಿನಂತಿಸಲಾಗಿದೆ,' ಎಂದು ಆಯೋಗವು ಅಧಿಸೂಚನೆಯಲ್ಲಿ ತಿಳಿಸಿದೆ.
English Medium: ಇಂಗ್ಲೀಷ್ ಮೀಡಿಯಂನಲ್ಲಿ ಓದುವ ಭಾಗ್ಯವಿಲ್ಲ ಎಂದು ಕೊರಗುವ ಮಕ್ಕಳ ನೆರವಿಗೆ ಸರ್ಕಾರ
ಈ ಕಾರ್ಯಕ್ರಮದ ಮೂಲಕ, ಯುಜಿಸಿ ದೇಶದಾದ್ಯಂತ 30,000 ಸಂಸ್ಥೆಗಳಲ್ಲಿ 75 ಕೋಟಿ ಸೂರ್ಯ ನಮಸ್ಕಾರಗಳನ್ನು ಆಯೋಜಿಸಲು ಬಯಸಿದೆ. ಇದಿಷ್ಟೇ ಅಲ್ಲದೇ ಯುಜಿಸಿ, ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ಗಣರಾಜ್ಯೋತ್ಸವದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (Standard Operating Procedures) ಬಗ್ಗೆಯೂ ಉಲ್ಲೇಖಿಸಿದೆ.
ಭಾರತದ ಸ್ವಾತಂತ್ರ್ಯ ಹೋರಾಟ, ಶೌರ್ಯ ಪ್ರಶಸ್ತಿಗಳು ಮತ್ತು ವಿಜಯಗಳಂತಹ ವಿಷಯಗಳ ಕುರಿತು ನಾಟಕಗಳು, ಚರ್ಚೆಗಳು, ರಸಪ್ರಶ್ನೆ ಮತ್ತು ತರಗತಿ ಯೋಜನೆಗಳಂತಹ ಚಟುವಟಿಕೆಗಳನ್ನು ಆಯೋಜಿಸಲಯ ಸೂಚನೆ ನೀಡಿದೆ. ಕೋವಿಡ್-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈವೆಂಟ್‌ಗಳನ್ನು ಭೌತಿಕ ಅಥವಾ ವರ್ಚುವಲ್ ರೂಪದಲ್ಲಿ ಆಯೋಜಿಸಬಹುದು ಎಂದು ಯುಜಿಸಿ ಹೇಳಿದೆ. ಗಣರಾಜ್ಯೋತ್ಸವವನ್ನು ಆಚರಿಸುವಾಗ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಅವುಗಳ ಅಂಗಸಂಸ್ಥೆ ಕಾಲೇಜುಗಳು ರಕ್ಷಣಾ ಸಚಿವಾಲಯವು ರೂಪಿಸಿರುವ SoP ಗಳನ್ನು ಅನುಸರಿಸಬೇಕು ಎಂದು ಆಯೋಗವು ವಿನಂತಿ ಮಾಡಿದೆ.
Online Course ನೀಡುತ್ತಿರುವ ಎಜುಟೆಕ್ ಸಂಸ್ಥೆಗಳಿಗೆ UGC ಎಚ್ಚರಿಕೆ
ಯುಜಿಸಿಯ ಈ ನೂತನ ಕಾರ್ಯಕ್ರಮವನ್ನು ಜನರಲ್ಲಿ ಸೂರ್ಯ ನಮಸ್ಕಾರದ ಮಹತ್ವವನ್ನು ತಿಳಿಸಲು ಭಾರಿ ನೆರವು ನೀಡಲಿದೆ. ಜತೆಗೆ ಜನರಲ್ಲಿ ಜಾಗೃತಿಗೂ ಇದ ಕಾರಣವಾಗಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದರಿಂದ ಅದರ ವ್ಯಾಪಕತೆ ಇನ್ನೂ ಹೆಚ್ಚಾಗಲಿದೆ. ಪರಂಪರಾಗತವಾಗಿ ಬಂದಿರುವ ಈ ವಿಶಿಷ್ಟ ಯೋಗ ಸಾಧನವನ್ನು ಜಗತ್ತಿನ ಮುಂದೆ ಪ್ರದರ್ಶಿಸಲು ಗಣರಾಜ್ಯೋತ್ಸವಕ್ಕಿಂತ ಮತ್ತೊಂದು ದೊಡ್ಡ ದಿನ ಸಿಗಲಾರದು.