ಜನಪರವಾಗಿರುವಂತಹ ಯೋಜನೆಗಳನ್ನು ಯಾರೆ ಮಾಡಲಿ ನಾವು ಅದನ್ನು ಮುಂದುವರಿಸಿದ್ದೇವು. ಆದರೆ ಈಗ ಕಾಂಗ್ರೆಸ್ಸಿಗರಿಗೆ ಜನಪರವಾಗಿರುವಂತಹ ಯಾವುದೆ ಯೋಜನೆಗಳು ಬೇಡವಾಗಿದೆ. ಇದು 3ನೇ ಶಿಕ್ಷಣ ನೀತಿ. ಶಿಕ್ಷಣ ನೀತಿ ವಿಚಾರದಲ್ಲಿ ಹೀಗೆ ಆಟ ಆಡೋದು ಸರಿಯಲ್ಲ: ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ
ಕಲಬುರಗಿ(ನ.26): ನೂತನ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ರದ್ದು ಮಾಡುತ್ತಿರುವ ವಿಷಯವಾಗಿ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯಗೆ ಪಠ್ಯ, ಪಠ್ಯಕ್ರಮ, ಶಿಕ್ಷಣ ನೀತಿ ಯಾವುದೂ ಗೊತ್ತಿಲ್ಲ, ಬರೀ ರಾಜಕೀಯ ಮಾಡೋದೊಂದೆ ಗೊತ್ತಿದೆ ಎಂದು ಕಿಡಿ ಕಾರಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪರವಾಗಿರುವಂತಹ ಯೋಜನೆಗಳನ್ನು ಯಾರೆ ಮಾಡಲಿ ನಾವು ಅದನ್ನು ಮುಂದುವರಿಸಿದ್ದೇವು. ಆದರೆ ಈಗ ಕಾಂಗ್ರೆಸ್ಸಿಗರಿಗೆ ಜನಪರವಾಗಿರುವಂತಹ ಯಾವುದೆ ಯೋಜನೆಗಳು ಬೇಡವಾಗಿದೆ. ಇದು 3ನೇ ಶಿಕ್ಷಣ ನೀತಿ. ಶಿಕ್ಷಣ ನೀತಿ ವಿಚಾರದಲ್ಲಿ ಹೀಗೆ ಆಟ ಆಡೋದು ಸರಿಯಲ್ಲ ಎಂದರು.
undefined
ಡಿಕೆಶಿ ವಿರುದ್ಧದ ಸಿಬಿಐ ಕೇಸ್ ವಾಪಸ್: ಕಳ್ಳನಿಗೆ ಪಿಳ್ಳೆ ನೆವ ರಾಜ್ಯ ಸರ್ಕಾರದ ವಿರುದ್ಧ ಅಶ್ವತ್ಥ ನಾರಾಯಣ ಕಿಡಿ
ರಾಜ್ಯಾಧ್ಯಕ್ಷರ ನೇಮಕಾತಿ ವಿಷಯವಾಗಿ ಬಿಜೆಪಿಯಲ್ಲಿನ ಕೆಲವು ಮುಖಂಡರು ನೀಡುತ್ತಿರುವ ಹೇಳಿಕೆ ವಿಚಾರದಲ್ಲಿ ನಾನೇನು ಹೇಳಲಾರೆ. ಅದನ್ನೆಲ್ಲ ಹೈಕಮಾಂಡ್ ಗಮನಿಸುತ್ತದೆ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದೇ ನಮ್ಮೆಲ್ಲರ ಉದ್ದೇಶವೆಂದರು.