ನಾಳೆ 10 ಗಂಟೆಗೆ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ

Published : Jul 29, 2022, 08:47 PM IST
ನಾಳೆ 10 ಗಂಟೆಗೆ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ

ಸಾರಾಂಶ

ನಾಳೆ ಬೆಳಗ್ಗೆ 10 ಗಂಟೆಗೆ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ. ಮಲ್ಲೇಶ್ವರಂ ಕೆಇಎ ಬೋರ್ಡ್‌ಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್  ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ.

ಬೆಂಗಳೂರು: ನಾಳೆ ಬೆಳಗ್ಗೆ 10 ಗಂಟೆಗೆ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ. ಮಲ್ಲೇಶ್ವರಂ ಕೆಇಎ ಬೋರ್ಡ್‌ಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್  ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಜೂನ್ 16 ರಿಂದ 18 ವರೆಗೆ CET ಪರೀಕ್ಷೆ ನಡೆದಿತ್ತು. ರಾಜ್ಯದ ಒಟ್ಟು 486 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಒಟ್ಟು 2,16,559 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದರು.

ಜೂನ್ 16 ರಂದು ಜೀವಶಾಸ್ತ್ರ ಹಾಗೂ ಗಣಿತ ಜೂನ್ 17 ರಂದು ಭೌತಶಾಸ್ತ್ರ ಮತ್ತು  ರಸಾಯನಶಾಸ್ತ್ರ ಜೂನ್ 18 ರಂದು ಹೊರನಾಡ ಕನ್ನಡಿಗರಿಗೆ, ಕನ್ನಡ  ಪರೀಕ್ಷೆ  ನಡೆದಿತ್ತು. 

CET ಫಲಿತಾಂಶ ಹೇಗೆ ಪರಿಶೀಲಿಸುವುದು?

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ kea.kar.nic.in ಫಲಿತಾಂಶ ಪ್ರಕಟವಾಗಲಿದೆ. ವೆಬ್‌ಸೈಟ್‌ನ ಮುಖಪುಟದಲ್ಲಿ ‘KCET ಫಲಿತಾಂಶ 2022’ ಮೇಲೆ ಕ್ಲಿಕ್ ಮಾಡಿ ಲಾಗ್ ಇನ್ ಮಾಡಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಮೂದಿಸಿ. ಆಗ ನಿಮ್ಮ KCET ಫಲಿತಾಂಶಗಳು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತವೆ. ನಂತರ ರಿಸಲ್ಟ್​ ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟ್‌ಔಟ್ ತೆಗೆದುಕೊಳ್ಳಬಹುದು.

PREV
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ