ಶಾಲಾ ವಿದ್ಯಾರ್ಥಿಗಳಿಗೆ ಹೊಸ ಪಠ್ಯಕ್ರಮ: ಈ ಬಗ್ಗೆ ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ

By Suvarna NewsFirst Published Sep 11, 2020, 9:07 PM IST
Highlights

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದ ಬೆನ್ನಲ್ಲೇ ಇದೀಗ ಶಾಲಾ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲೂ ಬದಲಾವಣೆ ತರಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮುಂದಾಗುದೆ.

ನವದೆಹಲಿ, (ಸೆ.11): ಶಾಲಾ ವಿದ್ಯಾರ್ಥಿಗಳು 2022ರಿಂದ ಹೊಸ ಪಠ್ಯಕ್ರಮ ಹೊಂದಲಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಪಿ)ಗೆ ಅನುಗುಣವಾಗಿ ಹೊಸ ಪಠ್ಯಕ್ರಮವನ್ನು ಶಾಲೆಗಳಲ್ಲಿ ಅಳವಡಿಸಲಾಗುವುದು. ಇದು ಹಿಂದಿನ ಪಠ್ಯಕ್ರಮಕ್ಕಿಂತಲೂ ಸಂಪೂರ್ಣ ಭಿನ್ನವಾಗಿರಲಿದೆ.

ಶಾಲಾ ಶಿಕ್ಷಣ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲೇ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಆಗಲಿದೆ ಎಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ಮಹತ್ವದ ಸಂಗತಿಗಳನ್ನು ವಿವರಿಸಿದರು. 

NEPಯಿಂದ ಶಿಕ್ಷಣದ ಯಶಸ್ಸು ಅಡಗಿದೆ: ಮಹತ್ವದ ಅಂಶಗಳನ್ನು ಬಿಚ್ಚಿಟ್ಟ ಮೋದಿ

ಮಾರ್ಕ್ ಶೀಟ್ (ಅಂಕಪಟ್ಟಿ) ವಿದ್ಯಾರ್ಥಿಗಳು ವಿದ್ಯಾರ್ಥಿಗಳಿಗೆ ಪ್ರೆಷರ್‍ಶೀಟ್ (ಒತ್ತಡದ ಅಂಕಪಟ್ಟಿ) ಆಗಿದೆ. ಇದು ಪೋಷಕರಿಗೆ ಪ್ರೆಸ್ಟೀಜ್‍ಶೀಟ್ (ಪ್ರತಿಷ್ಠೆಯ ಪಟ್ಟಿ) ಆಗಿದೆ. ಆದರೆ ಹೊಸ ಶಿಕ್ಷಣ ನೀತಿ ಮತ್ತು ಪಠ್ಯ ಕ್ರಮವು ಈ ಒತ್ತಡವನ್ನು ನಿವಾರಿಸುತ್ತದೆ ಎಂದು ಪ್ರಧಾನಿ ವಿಶ್ಲೇಷಿಸಿದರು.

2022ರ ವೇಳೆಗೆ ಹೊಸ ಪಠ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು. ಇದು ಮನರಂಜನೆ ಆಧಾರದ ಮೇಲೆ ವಿಭಿನ್ನ ಪಠ್ಯಕ್ರಮವಾಗಲಿದ್ದು, ಕಲಿಕೆ ಸಂಪೂರ್ಣಅನುಭವ ನೀಡುತ್ತದೆ ಎಂದು ತಿಳಿಸಿದರು. 

ಹೊಸ ಪಠ್ಯಕ್ರಮವು ಭವಿಷ್ಯ ದೃಷ್ಟಿಕೋನದ ಮತ್ತು ವೈಜ್ಞಾನಿಕ ದೂರದೃಷ್ಟಿ ತಳಹದಿ ಹೊಂದಿದೆ. ಗಂಭೀರಚಿಂತನೆ, ಸೃಜನಾತ್ಮಕತೆ ಮತ್ತು ಪರಿಣಾಮಕಾರಿ ಸಂವಹನ ಸೃಷ್ಟಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತದೆ ಎಂದರು.

click me!