ಶಾಲೆ ಆರಂಭಿಸುವ ಸೂಚನೆ ನೀಡಿದ ಸಚಿವ ಸುರೇಶ್ ಕುಮಾರ್

By Suvarna NewsFirst Published Jan 25, 2021, 2:29 PM IST
Highlights

ರಾಜ್ಯದಲ್ಲಿ ಈಗಾಗಲೇ 7ನೇ ತರಗತಿಯಿಂದ ಶಾಲೆಗಳು ತೆರೆದಿದ್ದು ಇನ್ಮುಂದೆ ಎಲ್ಲಾ ತರಗತಿಗಳಿಗೂ ಪೂರ್ಣ ಪ್ರಮಾನದ ತರಗತಿಗಳು ಶೀಘ್ರವೇ ಆರಂಭ ಆಗುವ ಬಗ್ಗೆ ಸಚಿವರು ಸೂಚನೆ ನೀಡಿದ್ದಾರೆ. 

ಚಾಮರಾಜನಗರ (ಜ.25): ಒಂದನೇ ತರಗತಿಯಿಂದಲೇ ಎಂದಿನಂತೆ ಪುರ್ಣ ಪ್ರಮಾಣದ ತರಗತಿಗಳನ್ನು ಆರಂಭಿಸಬೇಕೆಂಬ ಬೇಡಿಕೆ, ಮನವಿಗಳು ಬರುತ್ತಿದ್ದು ಮಕ್ಕಳು ಇದಕ್ಕೆ ಎಸ್ ಎನ್ನುತ್ತಿದ್ದಾರೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, 8,9 ಹಾಗೂ ಪ್ರಥಮ ಪಿಯು ಆಫ್ ಲೈನ್ ತರಗತಿಗಳನ್ನು ಆರಂಭಿಸುವಂತೆ ರಾಜ್ಯದ ವಿವಿಧೆಡೆಯಿಂದ ಮನವಿ ಬರುತ್ತಿದೆ, ನಾಡಿದ್ದು ಆರೋಗ್ಯ ಸಚಿವರ ಜೊತೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಎಸ್ಸೆಸ್ಸೆಲ್ಸಿ, ಪಿಯು ವೇಳಾಪಟ್ಟಿ ಸಿದ್ಧ : ಶೀಘ್ರ ಪ್ರಕಟ ಸಾಧ್ಯತೆ ...

ವಿದ್ಯಾಗಮ, ಯೂಟ್ಯೂಬ್, ಚಂದನದ ಮೂಲಕ ತಕ್ಕಮಟ್ಟಿಗೆ ವಿದ್ಯಾರ್ಥಿಗಳು ಕಲಿತಿದ್ದಾರೆ. ಎಲ್ಲಾ ಕಡೆ ಯಾವ ರೀತಿ ಮಕ್ಕಳು ಕಲಿತಿದ್ದಾರೆ, ಎಷ್ಟು ಕಲಿತಿದ್ದಾರೆ ಎಂದು ಅರಿಯಲು ಎಲ್ಲಾ ಶಾಲೆಗಳಿಗೆ ಸೂತ್ರವನ್ನು ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇದೇ ವೇಳೆ, ರೈತರ ಟ್ರಾಕ್ಟರ್ ಪೆರೇಡ್ ಕುರಿತು ಪ್ರತಿಕ್ರಿಯಿಸಿ, ಶಾಂತಿಯುತವಾಗಿ ಮೆರವಣಿಗೆ ಮಾಡಲು ದೆಹಲಿ, ಬೆಂಗಳೂರಿನಲ್ಲಿ ಅನುಮತಿ‌ ನೀಡಲಾಗಿದೆ. ಅವರ ಬೇಡಿಕೆಗೆ ಸಾಕಷ್ಟು ಸುತ್ತು ಮಾತುಕತೆ ನಡೆಸಲಾಗಿದೆ, ನಾವು ಹೇಳುವುದನ್ನೆಲ್ಲಾ ಸ್ಪಷ್ಟವಾಗಿ ಹೇಳಿದ್ದೇವೆ, ಕಾಯ್ದೆಯ ಲೋಪಗಳೇನು ಎಂದು ತಿಳಿಸಿಯೂ ಇದ್ದೇವೆ. ಆದರೆ, ರೈತ ಮುಖಂಡರು ಕಾಯ್ದೆಗಳನ್ನೇ ವಾಪಾಸ್ ಪಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ರೂಪಿಸಿದ ಸಮಿತಿ ವರದಿ ಕೊಟ್ಟ ಬಳಿಕ ಮುಂದೇನೆಂಬುದು ನೋಡಬೇಕು ಎಂದರು.

Last Updated Jan 25, 2021, 2:29 PM IST