ಎಸ್ಸೆಸ್ಸೆಲ್ಸಿ, ಪಿಯು ವೇಳಾಪಟ್ಟಿ ಸಿದ್ಧ : ಶೀಘ್ರ ಪ್ರಕಟ ಸಾಧ್ಯತೆ

Kannadaprabha News   | Asianet News
Published : Jan 25, 2021, 08:07 AM ISTUpdated : Jan 25, 2021, 08:08 AM IST
ಎಸ್ಸೆಸ್ಸೆಲ್ಸಿ, ಪಿಯು ವೇಳಾಪಟ್ಟಿ  ಸಿದ್ಧ :  ಶೀಘ್ರ ಪ್ರಕಟ ಸಾಧ್ಯತೆ

ಸಾರಾಂಶ

ಕೊರೋನಾ ಮಹಾಮಾರಿಯಿಂದಾಗಿ ಶೈಕ್ಷಣಿಕ ವರ್ಷವೂ ಸೂಕ್ತ ರೀತಿಯಾಗಿ ನಡೆದಿಲ್ಲ. ಆದರೆ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ಪರೀಕ್ಷೆ ನಡೆಸಲು ಈಗಾಗಲೇ ವೇಳಾಪಟ್ಟಿ ಸಿದ್ಧ ಮಾಡಲಾಗಿದ್ದು ಶೀಘ್ರವೇ ಪ್ರಕಟವಾಗಲಿದೆ. 

 ಬೆಂಗಳೂರು (ಜ.25):  ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ ಇದೆ.

 ಇತ್ತೀಚೆಗೆ ನಡೆದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಭೆಯಲ್ಲಿ ಜೂನ್‌ ಮೊದಲ ವಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿ ತಾತ್ಕಾಲಿಕ ವೇಳಾಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ. 

SSLC, PUC ಪರೀಕ್ಷೆ ಯಾವಾಗ? ದಿನಾಂಕ ಘೋಷಿಸಿದ ಸಚಿವ ಸುರೇಶ್ ಕುಮಾರ್

ಅದೇ ರೀತಿ ಪದವಿ ಪೂರ್ವ ಶಿಕ್ಷಣ ಇಲಾಖೆ ಕೂಡ ಮೇ 2ನೇ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಆರಂಭಿಸಲು ನಿರ್ಧರಿಸಿ ತಾತ್ಕಾಲಿಕ ವೇಳಾಪಟ್ಟಿಸಿದ್ಧಪಡಿಸಿದೆ. 

ಎರಡೂ ವೇಳಾಪಟ್ಟಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್‌ ಅವರಿಗೆ ಸಲ್ಲಿಕೆಯಾಗಿವೆ. ಇವುಗಳ ಅಧಿಕೃತ ಪ್ರಕಟಣೆಗೆ ಸಚಿವರ ಒಪ್ಪಿಗೆ ಮಾತ್ರ ಬಾಕಿ ಇದ್ದು, ಒಂದೆರಡು ದಿನಗಳಲ್ಲೇ ಪಟ್ಟಿಪ್ರಕಟವಾಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ