ಬಣ್ಣ ನಿಮ್ಮದು ಕುಂಚ ನಮ್ಮದು 'ಅಕ್ಕ ಅನು ಬಳಗ'ದವರ ಕಾರ್ಯ ಶ್ಲಾಘನೀಯ

By Kannadaprabha News  |  First Published May 20, 2023, 5:41 AM IST

ತಾಲೂಕಿನ ತಾಳಕೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಕೆಚ್ಚೆದೆಯ ಕನ್ನಡತಿ ಅಕ್ಕ ಅನು,ಬಳಗ ಸುಣ್ಣ ಬಣ್ಣ ಬಳಿದು,ಸ್ವಚ್ಛಗೊಳಿಸಿ, ಮಕ್ಕಳ ಕಲಿಕೆಗೆ ಸಹಾಯವಾಗುವಂತಹ ಚಿತ್ರಗಳನ್ನು ಬಿಡಿಸಿ ಶಾಲೆಗೆ ಹೊಸ ಸ್ಪರ್ಶ ನೀಡುತಿದ್ದಾರೆ.


ಯಲಬುರ್ಗಾ (ಮೇ.20) : ತಾಲೂಕಿನ ತಾಳಕೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಕೆಚ್ಚೆದೆಯ ಕನ್ನಡತಿ ಅಕ್ಕ ಅನು,ಬಳಗ ಸುಣ್ಣ ಬಣ್ಣ ಬಳಿದು,ಸ್ವಚ್ಛಗೊಳಿಸಿ, ಮಕ್ಕಳ ಕಲಿಕೆಗೆ ಸಹಾಯವಾಗುವಂತಹ ಚಿತ್ರಗಳನ್ನು ಬಿಡಿಸಿ ಶಾಲೆಗೆ ಹೊಸ ಸ್ಪರ್ಶ ನೀಡುತಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ಬೇರಗಿ ಗ್ರಾಮ(Beragi village)ದ ಅನು ಅವರು ಸಮಾನ ಮನಸ್ಕರ ತಂಡ ಕಟ್ಟಿಕೊಂಡು ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣ ಬಳಿದು ಹೊಸ ಸ್ಪರ್ಶ ನೀಡುವ ಕೆಲಸ ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ.

Tap to resize

Latest Videos

undefined

ಕನ್ನಡ ಉಳಿವಿಗೆ ಪಣ ತೊಟ್ಟಿರೋ ಅನು, ಸ್ವಂತ ಖರ್ಚಿನಲ್ಲಿ ಶಾಲೆ, ದೇವಸ್ಥಾನ ಸ್ವಚ್ಚತಾ ಕಾರ್ಯ

ತಾನು ಮಾಡಿದ ಕೆಲಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಇತರೆ ಜನರಿಗೆ ಮಾದರಿಯಾಗುವ ಕೆಲಸ ಅನು ಬಳಗ ಮಾಡುತ್ತಿದ್ದಾರೆ.

ಅನು ಬಳಗ(Kannadati anu akka balaga)ದ ಕಾರ್ಯ ಮೆಚ್ಚಿ ತಾಳಕೇರಿ ಶಾಲೆಯ ವಿದ್ಯಾರ್ಥಿಗಳು, ಪಾಲಕರ ದೇಣಿಗೆಯಿಂದ ಬಣ್ಣವನ್ನು ಶಿಕ್ಷಕರು ವ್ಯವಸ್ಥೆ ಮಾಡಿದ್ದಾರೆ, 10 ಕೊಠಡಿಗಳಿಗೆ 30 ಕಿಟಕಿಗಳಿಗೆ ಹಾಗೂ 10 ಬಾಗಿಲುಗಳಿಗೆ ಮತ್ತು ದುಬಾರಿ ವೆಚ್ಚದ ಗೊಡೆ ಬರಹದ ಬಣ್ಣ, ಚಿತ್ರಕಲೆಗಳಿಗೆ ಬಣ್ಣ ಹಾಗೂ ಚಿತ್ರ ಕಲಾವಿದರ ಸಂಭಾವನೆಗೆ ಒಟ್ಟು 50 ಸಾವಿರಕ್ಕೂ ಹೆಚ್ಚು ಹಣ ಖರ್ಚಾಗುವ ಸಂಭವವಿದೆ ಬರಿ ಅನು ಅಕ್ಕನವರ ಬಳಗದ ಪೋಟೋ ಫೇಸ್‌ ಬುಕ್‌ ವಾಟ್ಸ್‌ ಆ್ಯಪ್‌ ಗಳಲ್ಲಿ ಸುದ್ದಿ ಹರಡಿದರೆ ಸಾಲದೂ ಸ್ಥಳೀಯ ತಾಳಕೇರಿ ಗ್ರಾಮದ ಗ್ರಾಪಂ ಅಧ್ಯಕ್ಷರು ಸದಸ್ಯರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಯ ಸದಸ್ಯರು ಪ್ರತಿಯೊಬ್ಬ ಗ್ರಾಮಸ್ಥರು ಸಹಾಯ ಸಹಕಾರ ಮಾಡಬೇಕಾಗಿದೆ ನೀವೂ ದೇಣಿಗೆ ಮಾಡಿದರೆ ಅವರು ಗ್ರಾಮದಲ್ಲಿರುವ ಅಗ್ಯತೆ ಇರುವ ಸ್ಥಳಗಳನ್ನು ಸ್ವಚ್ಛಗೊಳಿಸಲಿದ್ದಾರೆ ಅನು ಅಕ್ಕ ಬಳಗದ ತಂಡಕ್ಕೆ ಸಹಾಯ ಸಹಕಾರ ನೀಡ ಪ್ರೋತ್ಸಾಹಿಸಬೇಕಾಗಿದೆ.

 

ಧಾರವಾಡ: ಶಾಲೆ ಆರಂಭಕ್ಕೂ ಮುನ್ನವೇ ಪಠ್ಯಪುಸ್ತಕ ಪೂರೈಕೆ, ಸರ್ಕಾರಿ ಶಾಲೆಗೆ ತಲುಪಿದ ಶೇ.98ರಷ್ಟುಪುಸ್ತಕ!

ಸರ್ಕಾರಿ ಕನ್ನಡ ಶಾಲೆಗಳು ಪ್ರಸ್ತುತ ದಿನಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ.ಜನರಲ್ಲಿ ಅರಿವು ಮೂಡಿಸಬೇಕು. ಈ ಶಾಲೆಗಳಿಗೆ ದಾಖಲಾಗುವವರಲ್ಲಿ ಅತಿ ಹೆಚ್ಚಿನವರು ಬಡ ವಿದ್ಯಾರ್ಥಿಗಳಾಗಿರುವದರಿಂದ ಅವರಿಗೆ ಶಿಕ್ಷಣದ ಹಕ್ಕು ಕೊಡಿಸುವುದರ ಜತೆಗೆ ಸರ್ಕಾರಿ ಶಾಲೆ ಉಳಿಸುವ ಕೆಲಸಕ್ಕೆ ಗ್ರಾಮಸ್ಥರು ಕೈಜೋಡಿಸಬೇಕು.

ಅನು,ಸಮಾಜಸೇವಕಿ,

ಅಕ್ಕ ಅನು ಬಳಗ ಯಾವುದೇ ರೀತಿಯ ಆಪೇಕ್ಷ ಇಲ್ಲದೆ ಸಮಾಜ ಸೇವೆಗೆ ತಮ್ಮನ್ನ ತಾವೂ ತೋಡಗಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಗಳು ಉಳಿಸಲು ಸಂಕಲ್ಪ ಮಾಡುತಿದ್ದಾರೆ. ಈಗಾಗಲೆ ರಾಜ್ಯಾದ್ಯಂತ 22 ಜಿಲ್ಲೆಗಳಲ್ಲಿ ಸಂಚರಿಸಿ 114 ನೇ ಶಾಲೆ ಅಭಿವೃದ್ಧಿ ಪಡಿಸಲು ಮುಂದೆ ಬಂದಿದ್ದಾರೆ ಅವರ ಕಾರ್ಯಕ್ಕೆ ಗ್ರಾಮಸ್ಥರು ಕೈ ಜೋಡಿಸಬೇಕಾಗಿದೆ.

ಬಾಬುಸಾಬ ಲೈನ್ದಾರ್‌ ಮುಖ್ಯೋಪಾಧ್ಯಾಯರು

click me!