JNU VC Santishree Dhulipudi Pandit: ಜೆಎನ್‌ಯು ಮೊಟ್ಟ ಮೊದಲ ಮಹಿಳಾ ಉಪ ಕುಲಪತಿಯಾಗಿ ಶಾಂತಿಶ್ರೀ ಧೂಳಿಪುಡಿ ನೇಮಕ

By Suvarna News  |  First Published Feb 7, 2022, 12:51 PM IST

 ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರನ್ನು  JNU  ಉಪಕುಲಪತಿಯಾಗಿ ನೇಮಕ ಮಾಡಲಾಗಿದೆ. ವಿವಿಯ ಮೊಟ್ಟ ಮೊದಲ ಮಹಿಳಾ ಉಪ ಕುಲಪತಿಯಾಗಲಿದ್ದು ಮುಂದಿನ ಐದು ವರ್ಷ ಇವರ ಸೇವಾವಧಿ ಇರಲಿದೆ. 


ನವದೆಹಲಿ(ಫೆ.7): ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (Jawaharlal Nehru University) ನೂತನ  ಉಪಕುಲಪತಿಯಾಗಿ (Vice Chancellor) ಶಾಂತಿಶ್ರೀ ಧೂಳಿಪುಡಿ ಪಂಡಿತ್ (Santishree Dhulipudi Pandit) ಅವರನ್ನು ನೇಮಕ ಮಾಡಿ ಆದೇಶ ಹೊರಡಿಲಾಗಿದೆ. ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾನಿಲಯದ (Savitribai Phule University) ಉಪಕುಲಪತಿಯಾಗಿರುವ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರನ್ನು  JNU  ಉಪಕುಲಪತಿಯಾಗಿ ನೇಮಕ ಮಾಡಲು ವಿಶ್ವವಿದ್ಯಾನಿಲಯಕ್ಕೆ ಸಂದರ್ಶಕರಾಗಿರುವ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ (President Ram Nath Kovind) ಅವರು  ಅನುಮೋದನೆ ನೀಡಿದ್ದಾರೆ ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 

ಈ ಮೂಲಕ ಶಾಂತಿಶ್ರೀ ಪಂಡಿತ್ ಅವರು ಜೆಎನ್ ಯು ವಿವಿ ಮೊಟ್ಟ ಮೊದಲ ಮಹಿಳಾ ಉಪ ಕುಲಪತಿಯಾಗಿದ್ದಾರೆ ಜೊತೆಗೆ ಜೆಎನ್‌ಯುವಿನ 13 ನೇ ಉಪಕುಲಪತಿಯಾಗಿ ಮುಂದಿನ ಐದು ವರ್ಷ ಇವರ ಸೇವಾವಧಿ ಇರಲಿದೆ. 

Tap to resize

Latest Videos

undefined

ಕಳೆದ ವರ್ಷ ತಮ್ಮ ಐದು ವರ್ಷಗಳ ಅವಧಿ ಮುಗಿದ ನಂತರ ಜೆಎನ್‌ಯುನಲ್ಲಿ ಹಂಗಾಮಿ ಉಪಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ ಜಗದೇಶ್ ಕುಮಾರ್ ಅವರನ್ನು ಕಳೆದ ವಾರ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 

JNUನ ಮೊದಲ ಮಹಿಳಾ ಉಪ ಕುಲಪತಿ ಸಾವಿತ್ರಿಬಾಯಿ ಫುಲೆ ಕುರಿತಾಗಿ ಒಂದಷ್ಟು ಮಾಹಿತಿ

 

JNU congratulates Prof. Santishree Dhulipudi Pandit for being appointed as the new Vice Chancellor of JNU for a period of five years. pic.twitter.com/PMzdDyZ6mV

— Jawaharlal Nehru University (JNU) (@JNU_official_50)

59 ವರ್ಷ ವಯಸ್ಸಿನ ಶ್ರೀಮತಿ ಪಂಡಿತ್ ಅವರು ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಇತಿಹಾಸ ಮತ್ತು ಸಾಮಾಜಿಕ ಮನೋವಿಜ್ಞಾನದಲ್ಲಿ ಪದವಿ ಪಡೆದರು. ಇವರು ಜೆಎನ್‌ಯುನ ಹಳೆಯ ವಿದ್ಯಾರ್ಥಿಯಾಗಿದ್ದಾರೆ,   ಜೆಎನ್‌ಯುನಲ್ಲಿ 1986-1990ರ ಅವಧಿಯಲ್ಲಿ ಎಂಫಿಲ್ ಮತ್ತು ಪಿಎಚ್‌ಡಿಯನ್ನು ಅಂತರರಾಷ್ಟ್ರೀಯ ಸಂಬಂಧಗಳು (International Relations) ವಿಷಯದಲ್ಲಿ  ಪಡೆದಿದ್ದಾರೆ. 

ESIC Recruitment 2022: ಒಟ್ಟು 3847 ಹುದ್ದೆಗೆ ಆನ್‌ಲೈನ್‌ ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನ

ಶ್ರೀಮತಿ ಪಂಡಿತ್ 1988 ರಲ್ಲಿ ಗೋವಾ ವಿಶ್ವವಿದ್ಯಾನಿಲಯದಿಂದ ತಮ್ಮ ಬೋಧನಾ ವೃತ್ತಿಯನ್ನು ಪ್ರಾರಂಭಿಸಿದರು ಮತ್ತು 1993 ರಲ್ಲಿ ಪುಣೆ ವಿಶ್ವವಿದ್ಯಾಲಯಕ್ಕೆ ತೆರಳಿದರು. ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಆಡಳಿತಾತ್ಮಕ ಸ್ಥಾನವನ್ನು ಹೊಂದಿರುವ ಅವರು ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (UGC), ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ (ICSSR) ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಸಂದರ್ಶಕರ ನಾಮನಿರ್ದೇಶನದ ಸದಸ್ಯರಾಗಿದ್ದಾರೆ.

ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು ತಮ್ಮ ವೃತ್ತಿಜೀವನದಲ್ಲಿ ಅವರು 29 ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಇವರು ರಷ್ಯಾದ ಸೇಂಟ್ ಪೀಟರ್ಸ್ಬರ್ಗ್  ನಲ್ಲಿ ಜುಲೈ 15, 1962ರಲ್ಲಿ ಜನಿಸಿದರು, ಅಲ್ಲಿ ಅವರ ತಾಯಿ ಮುಳಮೂಡಿ ಆದಿಲಕ್ಷ್ಮಿ ಲೆನಿನ್ಗ್ರಾಡ್ ಓರಿಯೆಂಟಲ್ ಫ್ಯಾಕಲ್ಟಿ ವಿಭಾಗದಲ್ಲಿ ತಮಿಳು ಮತ್ತು ತೆಲುಗು ಪ್ರಾಧ್ಯಾಪಕರಾಗಿದ್ದರು.

ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 1985 ರಿಂದ ಸಂಶೋಧನಾ ಕ್ಷೇತ್ರದಲ್ಲಿದ್ದಾರೆ. ಅವರು ಹಲವಾರು ಪ್ರತಿಷ್ಠಿತ ಸಂಸ್ಥೆಗಳ ಸದಸ್ಯರಾಗಿದ್ದಾರೆ, ಉದಾಹರಣೆಗೆ ಅಮೇರಿಕನ್ ಸ್ಟಡೀಸ್ ರಿಸರ್ಚ್ ಇನ್ಸ್ಟಿಟ್ಯೂಟ್, ಹೈದರಾಬಾದ್, ಇಂಡಿಯನ್ ಅಸೋಸಿಯೇಷನ್ ​​ಆಫ್ ಅಮೇರಿಕನ್ ಸ್ಟಡೀಸ್, ಆಲ್ ಇಂಡಿಯಾ ಪೊಲಿಟಿಕಲ್ ಸೈನ್ಸ್ ಅಸೋಸಿಯೇಷನ್, ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಭಾರತೀಯ ಜಾತ್ಯತೀತ ಸಮಾಜ, ಇತ್ಯಾದಿ.

click me!