ಶಾಲಾ ಮಕ್ಕಳಿಗೆ ಗುಡ್‌ ನ್ಯೂಸ್ ನೀಡಿದ ಶಿಕ್ಷಣ ಇಲಾಖೆ....!

By Suvarna News  |  First Published Nov 6, 2020, 4:04 PM IST

ಕೊರೋನಾ ವೈರಸ್‌ನಿಂದಾಗಿ ರಾಜ್ಯದಲ್ಲಿ ಶಾಲೆ ಪ್ರಾರಂಭಿಸುವ ಬಗ್ಗೆ ಇನ್ನೂ ಅಂತಿ ನಿರ್ಧಾರ ಕೈಗೊಂಡಿಲ್ಲ. ಇದರ ಮಧ್ಯೆ ಮಕ್ಕಳಿಗೆ ಸಾವರ್ಜನಿಕ ಶಿಕ್ಷಣ ಇಲಾಖೆ ಸಿಹಿ ಸುದ್ದಿ ನೀಡಿದೆ.


ಬೆಂಗಳೂರು, (ನ.06): ಕೊರೋನಾ ವೈರಸ್ ತಡೆಗೆ ಲಾಕ್ ಡೌನ್ ಘೋಷಣೆ ಮಾಡಿರುವುದು ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ನೀಡಲಾಗುತ್ತಿದ್ದ ಮಧ್ಯಾಹ್ನದ ಬಿಸಿಯೂಟದ ಮೇಲೂ ಪರಿಣಾಮ ಬೀರಿದೆ.

ಹೌದು...ಕೊರೋನಾ ಭೀತಿಯಿಂದ ಶಾಲೆಗಳನ್ನ ಮುಚ್ಚಲಾಗಿದೆ. ಇದರಿಂದ ಮಕ್ಕಳ ಬಿಸಿಯೂಟದ ಆಹಾರ ಧ್ಯಾನ್ಯ ಕೆಟ್ಟು ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಬದಲು ಆಹಾರ ಧಾನ್ಯ ವಿತರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಬಿ.ಅನ್ಬುಕುಮಾರ್ ಆದೇಶ ಹೊರಡಿಸಿದ್ದಾರೆ.

Latest Videos

undefined

ಶಿಕ್ಷಣ ಇಲಾಖೆಯ ಸಭೆ ಅಂತ್ಯ: ಶಾಲೆ ಪ್ರಾರಂಭದ ಬಗ್ಗೆ ಮಹತ್ವದ ನಿರ್ಧಾರ ಪ್ರಕಟ

ಕೋವಿಡ್ 19 ಕಾರಣದಿಂದ ಶಾಲೆ ಆರಂಭವಾಗದ ಹಿನ್ನಲೆ‌ ಸಾರ್ವತ್ರಿಕ ರಜೆ ದಿನ ಹೊರತುಪಡಿಸಿ  ಶಾಲೆಗಳಲ್ಲಿ 1ರಿಂದ 10 ನೇ ತರಗತಿ ಮಕ್ಕಳಿಕೆ ಊಟದ ಬದಲು ಆಹಾರ ಧಾನ್ಯ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ಸಾರ್ವತ್ರಿಕ ರಜೆ ದಿನ ಹೊರತುಪಡಿಸಿ  108 ದಿನಗಳಿಗೆ ಅಂದ್ರೆ, ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿಗೆ ಅಹಾರ ಧಾನ್ಯ ವಿತರಣೆ ಮಾಡುವಂತೆ ಹೇಳಿದ್ದಾರೆ.

ನೀಡುವ ಧಾನ್ಯಗಳು ಉತ್ತರ ಗುಣಮಟ್ಟದ ಇದೆ ಎಂಬುದನ್ನ ಖಚಿತಪಡಿಸಿಕೊಳ್ಳಬೇಕು. ಶಾಲೆಗೆ ಒಂದೇ ಬಾರಿ ಮಕ್ಕಳು, ಪೋಷಕರನ್ನ ಕರೆಸದೇ ಸೀಮಿತ ಸಂಖ್ಯೆಯಲ್ಲಿ ಕರೆಸಿ ವಿತರಣೆ ಮಾಡಬೇಕು. ಕೋವಿಡ್19 ಮಾರ್ಗಸೂಚಿ ಅನುಸರಿಗೆ ಆಹಾರ ಧಾನ್ಯ ವಿತರಿಸುವಂತೆ ಸೂಚಿಸಿದ್ದಾರೆ.

ಈಗಾಗಲೇ ಬಿಸಿಯೂಟ ಯೋಜನೆಗಾಗಿ ಸರ್ಕಾರ ಹಣ ಬಿಡುಗಡೆ ಮಾಡಿದ್ದು, ಮೊದಲನೇ ಹಂತದಲ್ಲಿ ಅಕ್ಕಿ, ಗೋಧಿ, ತೊಗರಿಬೇಳೆ ವಿತರಿಸಬೇಕು.  ಧಾನ್ಯ ವಿತರಣೆ ವೇಳೆ ಮಕ್ಕಳು, ಪೋಷಕರ ಸಹಿ ಕಡ್ಡಾಯ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. 

* ಪ್ರತಿ ವಿದ್ಯಾರ್ಥಿ ಗೆ ಪ್ರತಿದಿನಕ್ಕೆ 100 ಗ್ರಾಂ ಅಕ್ಕಿ, 100 ಗ್ರಾಂ ಗೋದಿ ( 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ)

* ಪ್ರತಿ ವಿದ್ಯಾರ್ಥಿಗೆ ಪ್ರತಿದಿನಕ್ಕೆ 150 ಗ್ರಾಂ ಅಕ್ಕಿ, 150 ಗ್ರಾಂ ಗೋದಿ ( 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ)

* ಪ್ರತಿ ವಿದ್ಯಾರ್ಥಿ ಗೆ ಪ್ರತಿದಿನಕ್ಕೆ 150 ಗ್ರಾಂ ಅಕ್ಕಿ, 150 ಗ್ರಾಂ ಗೋದಿ ( 9 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ)

click me!