ಶುಲ್ಕ ಕಟ್ಟದಿದ್ದರೆ ಆನ್‌ಲೈನ್ ಕ್ಲಾಸ್ ಬಂದ್: ಖಾಸಗಿ ಶಾಲೆಗಳ ಎಚ್ಚರಿಕೆ| ರಾಜ್ಯ ಸರ್ಕಾರದ ಆದೇಶಕ್ಕೆ ಸಡ್ಡು ಹೊಡೆದ ಖಾಸಗಿ ಶಿಕ್ಷಣ ಸಂಸ್ಥೆಗಳು| ನೀರು, ವಿದ್ಯುತ್ ಬಿಲ್‌ನಲ್ಲೂ ರಿಯಾಯ್ತಿ ನೀಡಲು ಸರ್ಕಾರಕ್ಕೆ ಆಗ್ರಹ
ಬೆಂಗಳೂರು(ನ.25): ಶಾಲಾ ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣವನ್ನು ನಿಲ್ಲಿಸುವುದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಅಧಿಕೃತವಾಗಿ ಎಚ್ಚರಿಸಿವೆ. ತನ್ಮೂಲಕ, ‘ಶುಲ್ಕ ಪಾವತಿಸಿಲ್ಲ ಎಂಬ ಕಾರಣ ನೀಡಿ ಆನ್‌ಲೈನ್ ಶಿಕ್ಷಣ ನಿಲ್ಲಿಸಬಾರದು’ ಎಂಬ ಸರ್ಕಾರದ ನಿರ್ದೇಶನಕ್ಕೆ ಸಡ್ಡು ಹೊಡೆದಿವೆ.
‘ಸಂಕಷ್ಟದಲ್ಲಿರುವ ಖಾಸಗಿ ಶಾಲೆಗಳಿಗೆ ವಿದ್ಯುತ್, ನೀರಿನ ಬಿಲ್‌ನಲ್ಲಿ ರಿಯಾಯತಿ ಹಾಗೂ ಆರ್‌ಟಿಇ (ಶಿಕ್ಷಣ ಹಕ್ಕು) ಶುಲ್ಕ ಪಾವತಿ ಮಾಡುವ ಮೂಲಕ ಕೂಡಲೇ ಸರ್ಕಾರವು ನೆರವಿಗೆ ಬರಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಎಚ್ಚರಿಸಿವೆ.
ಆನ್‌ಲೈನ್ ಕ್ಲಾಸ್ ನಡೆಯುತ್ತಿದ್ದರಿಂದ ಒಬ್ಬಳೆ ಇದ್ದಳು : ಈ ವೇಳೆ ಅಪ್ರಾಪ್ತೆ ಮೇಲೆ ನಡೆಯಿತು ಅತ್ಯಾಚಾರ
‘ವಿದ್ಯಾರ್ಥಿಗಳು ಶುಲ್ಕ ಪಾವತಿಸದೆ ಇದ್ದರೆ ಶಿಕ್ಷಕರಿಗೆ ವೇತನ ನೀಡುವುದು ಹಾಗೂ ಆನ್‌ಲೈನ್ ಶಿಕ್ಷಣ ಮುಂದುವರಿಕೆಗೆ ಅಗತ್ಯ ತಾಂತ್ರಿಕ ಸೌಲಭ್ಯಗಳ ವೆಚ್ಚ ಭರಿಸಲು ಆಗುವುದಿಲ್ಲ. ಶುಲ್ಕ ವಸೂಲು ಮಾಡದಿದ್ದರೆ ಖಾಸಗಿ ಶಾಲೆಗಳ ಬಾಗಿಲು ಬಂದ್ ಮಾಡಬೇಕಾಗುತ್ತದೆ. ಹೀಗಾಗಿ ಶುಲ್ಕ ವಸೂಲಿ ಅನಿವಾರ್ಯ’ ಎಂದು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಮಂಗಳವಾರ ತಿಳಿಸಿದ್ದಾರೆ.
‘ಸರ್ಕಾರ ಪ್ರತಿಷ್ಠಿತ ಖಾಸಗಿ ಶಾಲೆಗಳು ಹಾಗೂ ಬಜೆಟ್ (ಸಾಮಾನ್ಯ) ಖಾಸಗಿ ಶಾಲೆಗಳನ್ನು ಒಂದೇ ತಕ್ಕಡಿಯಲ್ಲಿ ತೂಗಬಾರದು. ಸರ್ಕಾರದ ಆದೇಶ ಪಾಲಿಸಲು ಮುಂದಾದರೆ ಬಜೆಟ್ ಶಾಲೆಗಳು ಬಾಗಿಲು ಬಂದ್ ಮಾಡಬೇಕಾಗುತ್ತದೆ. ಬಹಳ ಮಂದಿ ಪೋಷಕರು ಇನ್ನು ಮೊದಲ ಕಂತಿನ ಶುಲ್ಕವನ್ನೂ ಪಾವತಿಸಿಲ್ಲ’ ಎಂದು ದೂರಿದ್ದಾರೆ.
‘ಒಂದು ವೇಳೆ ಪಾಲಕರಿಂದ ಶುಲ್ಕ ಪಡೆಯುಬಾರದು ಎಂದು ಸರ್ಕಾರ ಹೇಳುವುದಾದರೆ, ಆರ್‌ಟಿಇ ಶುಲ್ಕ ಮರುಪಾವತಿ ಮಾಡಲಿ. ಶೇ. 75 ಶುಲ್ಕವನ್ನು ಸರ್ಕಾರ ಪಾವತಿಸಲಿ. ಆಗ ನಾವು ಉಚಿತ ಶಿಕ್ಷಣ ನೀಡುತ್ತೇವೆ’ ಎಂದು ಅವರು ಹೇಳಿದ್ದಾರೆ.
ಓಲ್ಡ್ ಫೋನ್ ಅಂತ ಎಸಿಬೇಡಿ: ಹಳೆಯ ಮೊಬೈಲ್ಗಳಿಗೆ ಭಾರಿ ಡಿಮ್ಯಾಂಡ್..!
ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹಲವು ಬಾರಿ ಈ ಬಗ್ಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದರು. ಶುಲ್ಕ ಪಾವತಿಸದ ಕಾರಣಕ್ಕೆ ಆನ್‌ಲೈನ್ ಶಿಕ್ಷಣ ನಿಲ್ಲಿಸಿದರೆ ಮತ್ತು ಮುಂದಿನ ವರ್ಷಕ್ಕೆ ಪಾಸ್ ಓವರ್ ಮಾಡುವುದಿಲ್ಲ ಎಂದೇನಾದರೂ ಪೋಷಕರಿಗೆ ಬೆದರಿಸಿದರೆ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿದ್ದರು. ಸಚಿವರು ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರು ಕೂಡ ಎರಡನೇ ಕಂತಿನ ಶುಲ್ಕ ಪಡೆಯಲು ಶಾಲೆಗಳಿಗೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ, ಸಚಿವರು ಹಾಗೂ ಅಧಿಕಾರಿಗಳ ಈ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಈಗ ನೇರವಾಗಿ ಹೇಳಿವೆ.