1ರಿಂದ 5ನೇ ತರಗತಿ ಪ್ರಾರಂಭ ಯಾವಾಗ? ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ ನಾಗೇಶ್

Published : Sep 29, 2021, 03:45 PM ISTUpdated : Sep 29, 2021, 03:50 PM IST
1ರಿಂದ 5ನೇ ತರಗತಿ ಪ್ರಾರಂಭ ಯಾವಾಗ? ಸ್ಪಷ್ಟನೆ ಕೊಟ್ಟ  ಶಿಕ್ಷಣ ಸಚಿವ ನಾಗೇಶ್

ಸಾರಾಂಶ

* 1ರಿಂದ 5ನೇ ತರಗತಿ ಶಾಲೆ ಪ್ರಾರಂಭದ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ * ದಸರಾ ಬಳಿಕ 1 ರಿಂದ 5ನೇ ತರಗತಿ ಆರಂಭಕ್ಕೆ ಚಿಂತನೆ ನಡೆಸಲಾಗಿದೆ ಎಂದ ನಾಗೇಶ್ * ಬೆಂಗಳೂರಿನಲ್ಲಿ ಇಂದು (ಸೆ.29) ಮಾಧ್ಯಮಗಳ ಮೂಲಕ ಮಾಹಿತಿ

ಬೆಂಗಳೂರು, (ಸೆ.29):  1ರಿಂದ 5ನೇ ತರಗತಿ ಶಾಲೆ(School) ಯಾವಾಗ ಶುರುವಾಗುತ್ತವೆ ಎನ್ನುವ ಚರ್ಚೆಗಳು ನಡೆಯುತ್ತಿದ್ದು, ಇದಕ್ಕೆ  ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (BC Nagesh) ಸ್ಪಷ್ಟನೆ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಇಂದು (ಸೆ.29) ಮಾಧ್ಯಮಗಳ ಜತೆ ಮಾತನಾಡಿದ ನಾಗೇಶ್, ದಸರಾ (Dasara) ಬಳಿಕ 1 ರಿಂದ 5ನೇ ತರಗತಿ ಆರಂಭಕ್ಕೆ ಚಿಂತನೆ ನಡೆಸಲಾಗಿದೆ. ಈ ವಾರದಲ್ಲಿ ಸಿಎಂ ಹಾಗೂ ಕೊವಿಡ್ (Covid19) ತಾಂತ್ರಿಕಾ ಸಲಹಾ ಸಮಿತಿ ಚರ್ಚೆ ನಡೆಸಲಾಗುವುದು ಎಂದರು.

19 ತಿಂಗಳ ಬಳಿಕ 1-5ನೇ ತರಗತಿಗೆ ಶಾಲೆ ಆರಂಭದ ಸುಳಿವು: ಯಾವಾಗ? ಇಲ್ಲಿದೆ ಮಾಹಿತಿ

 ಸಭೆಯಲ್ಲಿ ಒಂದರಿಂದ ಐದರವರೆಗೆ ಶಾಲೆಗಳ ಆರಂಭಕ್ಕೆ ಮನವಿ ಮಾಡುತ್ತೇವೆ. ಆದರೆ ಸದ್ಯ ವೈರಲ್ ಇನ್ಫೆಕ್ಷನ್ ಡೆಂಘೀ ಜ್ವರದ ಕಾಟ ಇದೆ. ಹೀಗಾಗಿ 3,4,5 ನೇ ತರಗತಿ ಆರಂಭಿಸಲಾದರೂ ಅನುಮತಿ ನೀಡುವಂತೆ ಮನವಿ ಮಾಡಲಿದ್ದೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರಸ್ತುತ ಕೊರೋನಾ ಎರಡನೇ ಅಲೆ ಕಡಿಮಯಾಗಿದ್ದು, 6ರಿಂದ ಎಲ್ಲಾ ತರಗತಿಗಳು ಪ್ರಾರಂಭವಾಗಿವೆ. ಆದ್ರೆ, 1ರಿಂದ 5ನೇ ತರಗತಿ ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಇದರ ಮಧ್ಯೆ ಮಕ್ಕಳಿಗೆ ವೈರಲ್ ಫೀವರ್ ಹೆಚ್ಚಾಗಿದೆ. ಈ ಎಲ್ಲಾ ಕಾರಣಾಂತರಗಳಿಂದ 1ರಿಂದ 5ನೇ ಕ್ಲಾಸ್ ಆರಂಭಿಸಲು ಹಿನ್ನಡೆಯಾಗುತ್ತಿದೆ.

PREV
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ