Pariksha Pe Charcha 2022: ವಿದ್ಯಾರ್ಥಿಗಳ ನೋಂದಣಿ ಎರಡನೇ ಬಾರಿಗೆ ವಿಸ್ತರಣೆ

By Suvarna News  |  First Published Jan 29, 2022, 7:53 PM IST

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ್ಕೆ ಆನ್‌ಲೈನ್‌ ನೋಂದಣಿ ಮತ್ತೆ ವಿಸ್ತರಣೆ
ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ನೋಂದಣಿ ಮಾಡಿಕೊಳ್ಳಲು ಅವಕಾಶ
ಫೆ.3 ನೋಂದಣಿ ಮಾಡಿಕೊಳ್ಳಲು ಕೊನೆಯ ದಿನ


ಬೆಂಗಳೂರು(ಜ.29): ಪ್ರಧಾನ ಮಂತ್ರಿ ನರೇಂದ್ರ ಮೋದಿ (prime minister narendra modi ) ಅವರು ನಡೆಸಿಕೊಡುವ ವಾರ್ಷಿಕ ಕಾರ್ಯಕ್ರಮದ ಪ್ರಸಕ್ತ ವರ್ಷದ ಪರೀಕ್ಷಾ ಪೇ ಚರ್ಚಾ 2022ಗೆ (Pariksha Pe Charcha 2022) ಆನ್‌ಲೈನ್‌ ನೋಂದಣಿ ಪ್ರಕ್ರಿಯೆಯನ್ನು ಫೆಬ್ರವರಿ 3ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಎರಡನೇ ಬಾರಿಗೆ ವಿಸ್ತರಣೆ ಮಾಡಿದಂತಾಗಿದೆ. ಈ ಹಿಂದೆ ಜನವರಿ 27ರವರೆಗೆ ವಿಸ್ತರಣೆ ಮಾಡಲಾಗಿತ್ತು . ಆಸಕ್ತ ವಿದ್ಯಾರ್ಥಿಗಳು ಅಧಿಕೃತ ವೆಬ್‌ ತಾಣ https://www.mygov.in/  ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಇದಕ್ಕೂ ಮುನ್ನ ಜನವರಿ 20 ನೋಂದಣಿಗೆ ಕೊನೆಯ ದಿನವಾಗಿತ್ತು. ಕಳೆದ ಡಿಸೆಂಬರ್ 28ರಿಂದ ನೋಂದಣೆ ಪ್ರಕ್ರಿಯೆ ಆರಂಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆಸಲಾಗುವ ಪರೀಕ್ಷಾ ಪೇ ಚರ್ಚಾದಲ್ಲಿ ವಿದ್ಯಾರ್ಥಿಗಳು (Students) ಪರೀಕ್ಷೆಯ ಬಗೆಗೆ ಇರುವ ಒತ್ತಡ ಮತ್ತು ಆತಂಕವನ್ನು ದೂರ ಮಾಡಿಕೊಳ್ಳುವ ಕುರಿತು ಮಾತನಾಡಬಹುದು.

ಪಿಎಂ ಮೋದಿಯೊಂದಿಗಿನ ಐದನೇ ಆವೃತ್ತಿಯ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮ ಇದಾಗಿದ್ದು, ಫೆಬ್ರವರಿ ತಿಂಗಳಿನಲ್ಲಿ ನಡೆಯಯಲಿದೆ ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ (PMO) ತಿಳಿಸಿದೆ. ಬೋರ್ಡ್ ಪರೀಕ್ಷೆಗೆ (Board Exam) ತಯಾರಿ ನಡೆಸುತ್ತಿರುವ ಒಂಭತ್ತನೇ ತರಗತಿ ವಿದ್ಯಾರ್ಥಿಗಳಿಂದ ಹಿಡಿದು ದ್ವಿತೀಯ ಪಿಯುಸಿ ವರೆಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.

Tap to resize

Latest Videos

undefined

ಪರೀಕ್ಷೆಗೆ ಸಂಬಂಧಿಸಿ ಯಾವುದೇ ಗೊಂದಲ, ಆತಂಕ , ಪ್ರಶ್ನೆಗಳಿದ್ದರೆ ಮೋದಿ ಜೊತೆ ಚರ್ಚಿಸುವ ಸುವರ್ಣಾವಕಾಶವನ್ನು ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಕಳೆದ ವರ್ಷ ಕೊರೊನಾ ಕಾರಣ ಏಪ್ರಿಲ್‌ 07, 2021 ರಂದು ತಡವಾಗಿ ನಡೆದಿತ್ತು.  ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರಧಾನ ಮಂತ್ರಿಯವರ ಈ ಸಂವಾದ 2018 ರಲ್ಲಿ ಆರಂಭವಾಗಿತ್ತು.

Sonny Mehta India Scholarship: ಭಾರತೀಯ ಬರಹಗಾರರಿಗೆ ವಿದ್ಯಾರ್ಥಿವೇತನ

'ಪರೀಕ್ಷಾ ಪೇ ಚರ್ಚಾ'ಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಕೆಲವು ಆನ್‌ಲೈನ್ ಸ್ಪರ್ಧೆಗಳಲ್ಲಿ ಭಾಗವಹಿಸಬೇಕಾಗುತ್ತದೆ. ಪಿಪಿಸಿ 2022 ಸ್ಪರ್ಧೆಗೆ ಅಪ್ಲಿಕೇಶನ್‌ ಅನ್ನು ಯಾವುದಾದರೂ ಒಂದು ಥೀಮ್‌ನಲ್ಲಿ ಸಬ್‌ಮಿಟ್‌ ಮಾಡುವ ಮೂಲಕ ಪಾಲ್ಗೊಳ್ಳಬಹುದು. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಪಿಪಿಸಿ ವೆಬ್‌ಸೈಟ್‌ನಲ್ಲಿ ತಮ್ಮ ಪ್ರಶ್ನೆಗಳನ್ನು ನೀಡಬಹುದು. ಇದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಪ್ರಧಾನಿ ಮೋದಿಯವರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳುವ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ.  ಅವಕಾಶ ಪಡೆದ ವಿದ್ಯಾರ್ಥಿಗಳು ಮೋದಿ ಅವರ ಹಸ್ತಾಕ್ಷರದ ಛಾಯಾಚಿತ್ರದ ಡಿಜಿಟಲ್ ಸ್ಮರಣಿಕೆಯನ್ನು ಪಡೆಯುತ್ತಾರೆ. ಜತೆಗೆ  ಭಾಗವಹಿಸಿದ್ದಕ್ಕೆ ವಿಶೇಷ ವಿನ್ಯಾಸದ ಪ್ರಮಾಣ ಪತ್ರ ಕೂಡ ಸಿಗಲಿದೆ.

ಭಾಗವಹಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳು ಈ ಕೂಡಲೇ ತಮ್ಮ ಹೆಸರು ನೋಂದಾಯಿಸಿಕೊಳ್ಳಿ ಅದಕ್ಕಾಗಿ ಅಧಿಕೃತ ವೆಬ್‌ಸೈಟ್‌ https://www.mygov.in/ ಗೆ ಭೇಟಿ ನೀಡಿ. ಜನವರಿ 27,2022 ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಾವಣೆ ಮಾಡಲು ಕೊನೆಯ ದಿನವಾಗಿರುತ್ತದೆ.

Tripura Education News Bulletin: ಕೋವಿಡ್ ಮಧ್ಯೆ ಶಿಕ್ಷಣಕ್ಕೆ ಹೊಸ ದಾರಿ ಹುಡುಕಿದ ತ್ರಿಪುರಾ ಸರ್ಕಾರ

ಈ ವರ್ಷದ ಪರೀಕ್ಷಾ ಪೇ ಚರ್ಚಾದ (Pariksha Pe Charcha 2022) ಕುರಿತು ಡಿಸೆಂಬರ್ 26 ನಡೆಸಿಕೊಟ್ಟ  ‘ಮನ್​ ಕೀ ಬಾತ್​’ನ (Maan ki baat) 84ನೇ ಸಂಚಿಕೆಯಲ್ಲಿ ಪ್ರಧಾನಿ  ನರೇಂದ್ರ ಮೋದಿ ಮಾತನಾಡಿದ್ದರು. ಈ ಬಾರಿ ಶಿಕ್ಷಕರು ಮತ್ತು ಪೋಷಕರಿಗೆ ಆನ್​ಲೈನ್ ಸ್ಪರ್ಧೆ ಕೂಡ ನಡೆಸಲಾಗುತ್ತದೆ ಎನ್ನುವುದನ್ನು ಘೋಷಿಸಿದ್ದರು.  ನಾನು ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಿದ್ದೇನೆ. ಈ ವರ್ಷವೂ ಪರೀಕ್ಷೆಗೆ ಮುನ್ನ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲು ಮುಂದಾಗಿದ್ದು, ಪರೀಕ್ಷಾ ಪೇ ಚರ್ಚಾ ನಡೆಯಲಿದೆ ಎಂದು ಮನದ ಮಾತು ಕಾರ್ಯಕ್ರಮದಲ್ಲಿ ಹೇಳಿದ್ದರು. 

ಪರೀಕ್ಷಾ ಪೆ ಚರ್ಚಾ 2022 ರಿಜಿಸ್ಟರ್ ಮಾಡಿಕೊಳ್ಳುವುದು ಹೇಗೆ:
- mygov.in ವೆಬ್ ಸೈಟ್ ಗೆ ತೆರಳಬೇಕು
- ಹೋಮ್ ಪೇಜ್ ನಲ್ಲಿ ಇರುವ What's New ವಿಭಾಗಕ್ಕೆ ತೆರಳಿ
-  ಪರೀಕ್ಷಾ ಪೆ ಚರ್ಚಾ 2022 ಎಂದಿರುವ ಚಿತ್ರದ ಮೇಲೆ ಕ್ಲಿಕ್ ಮಾಡಿ, register now ಎನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಪರೀಕ್ಷಾ ಪಡೆ ಚರ್ಚಾಗಾಗಿ ನೋಂದಾಯಿಸಲು ವಿವರಗಳನ್ನು ಭರ್ತಿ ಮಾಡಿ ಮತ್ತು ಅದನ್ನು ಸಲ್ಲಿಸಿ

ಹೆಚ್ಚಿನ ವಿವರಗಳಿಗೆ https://innovateindia.mygov.in/ppc-2022/ ಲಿಂಕ್ ಕ್ಲಿಕ್ ಮಾಡಿ.

click me!