ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೋನಾ: ಆತಂಕದಲ್ಲಿ ಪೋಷಕರು

By Kannadaprabha News  |  First Published Mar 29, 2021, 8:51 AM IST

ಎಲ್ಲಾ ಮಕ್ಕಳಿಗೆ ಕೋವಿಡ್‌ ಪರೀಕ್ಷೆ| ಶಾಲೆಯಲ್ಲಿ ಸ್ಯಾನಿಟೈಸ್‌| ಎಲ್ಲಾ ಮಕ್ಕಳಿಗೆ ಅವರ ಮನೆಯಲ್ಲಿ ಐಸೊಲೇಷನ್‌ನಲ್ಲಿ ಇಡಲಾಗುತ್ತಿದ್ದು, ಎಲ್ಲಾ ಮಕ್ಕಳ ಮನೆ ಸ್ಯಾನಿಟೈಸ್‌ ಮಾಡಿ ಸುರಕ್ಷತೆ ಕಾಪಾಡಲಾಗುತ್ತಿದೆ: ಯಲಹಂಕ ತಾಲೂಕು ಶಿಕ್ಷಣಾಧಿಕಾರಿ ಕಮಲಾಕರ| 


ಯಲಹಂಕ(ಮಾ.29): ಬೆಂಗಳೂರು ಉತ್ತರ ವಲಯ-4ರ ವ್ಯಾಪ್ತಿಯ ಸರ್ಕಾರಿ ಶಾಲೆಯ 11 ಮಕ್ಕಳು ಸೇರಿದಂತೆ ತಾಲೂಕಿನ 20 ಮಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿದೆ.

ಯಲಹಂಕ ತಾಲೂಕಿನ ಚಿಕ್ಕಬಾಣಾವಾರ ಶಾಲೆಯ ಇಬ್ಬರು ವಿದ್ಯಾರ್ಥಿಗಳು, ಅಬ್ಬಿಗೆರೆ ಹೈಸ್ಕೂಲ್‌-3, ಕಾಕೋಳು- 3, ನರಸೀಪುರ ಹೈಸ್ಕೂಲ್‌- 4 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದಾಗ ಕೊರೋನಾ ದೃಢಪಟ್ಟಿದೆ. ಈ ಎಲ್ಲಾ ಶಾಲೆಯ ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಲಾಗಿದ್ದು, ಶಾಲೆಯ ಎಲ್ಲಾ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

Latest Videos

ಕೊರೋನಾ : ಕೂಡಲೇ ನಡೆಯಲಿದ್ಯಾ ಈ ತರಗತಿಗಳ ಪರೀಕ್ಷೆ

ಅರೋಗ್ಯಾಧಿಕಾರಿಗಳ ಸಲಹೆ ಮೇರೆಗೆ ಎಲ್ಲಾ ಮಕ್ಕಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಶಾಲೆಯಲ್ಲಿ ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಎಲ್ಲಾ ಮಕ್ಕಳಿಗೆ ಅವರ ಮನೆಯಲ್ಲಿ ಐಸೊಲೇಷನ್‌ನಲ್ಲಿ ಇಡಲಾಗುತ್ತಿದ್ದು, ಎಲ್ಲಾ ಮಕ್ಕಳ ಮನೆಯನ್ನು ಸ್ಯಾನಿಟೈಸ್‌ ಮಾಡಿ ಸುರಕ್ಷತೆ ಕಾಪಾಡಲಾಗುತ್ತಿದೆ ಎಂದು ಯಲಹಂಕ ತಾಲೂಕು ಶಿಕ್ಷಣಾಧಿಕಾರಿ ಕಮಲಾಕರ ಹೇಳಿದರು. ಭಾನುವಾರ 20 ಜನರಿಗೆ ಕೊರೋನಾ ದೃಢಪಟ್ಟಿದೆ ಎಂದು ತಾಲೂಕು ವೈದ್ಯಾಧಿಕಾರಿ ರಮೇಶ್‌ ತಿಳಿಸಿದ್ದಾರೆ.
 

click me!