ಹಣಕಾಸು ಕ್ಷೇತ್ರದಲ್ಲಿ ಕೋರ್ಸ್‌ಗೆ ಬೇಸ್‌ ವಿವಿ-ಎನ್‌ಎಸ್‌ಇ ಒಪ್ಪಂದ

Published : Jul 30, 2023, 06:02 PM IST
ಹಣಕಾಸು ಕ್ಷೇತ್ರದಲ್ಲಿ ಕೋರ್ಸ್‌ಗೆ ಬೇಸ್‌ ವಿವಿ-ಎನ್‌ಎಸ್‌ಇ ಒಪ್ಪಂದ

ಸಾರಾಂಶ

ಹಣಕಾಸು ಎಂಜಿನಿಯರಿಂಗ್‌ ಸೇರಿದಂತೆ ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇನ್ನಿತರೆ ಹೊಸ ಸರ್ಟಿಫಿಕೇಟ್‌ ಕೋರ್ಸ್‌ಗಳ ಬಗ್ಗೆ ಬೇಸ್‌ ಮತ್ತು ಎನ್‌ಎಸ್‌ಇ ನಡುವೆ ಒಪ್ಪಂದ ಏರ್ಪಟ್ಟಿದೆ.

ಬೆಂಗಳೂರು (ಜು.30): ‘ಹಣಕಾಸು ಎಂಜಿನಿಯರಿಂಗ್‌’ ಸೇರಿದಂತೆ ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇನ್ನಿತರೆ ಹೊಸ ಸರ್ಟಿಫಿಕೇಟ್‌ ಮತ್ತು ಡಿಪ್ಲೊಮಾ ಕೋರ್ಸುಗಳನ್ನು ಆರಂಭಿಸುವ ಸಂಬಂಧ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ( BASE University -ಬೇಸ್‌) ವಿಶ್ವವಿದ್ಯಾಲಯ ಮತ್ತು ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಚ್‌ ಅಕಾಡೆಮಿ (ಎನ್‌ಎಸ್‌ಇ) ನಡುವೆ ಒಪ್ಪಂದ ಏರ್ಪಟ್ಟಿದೆ.

IIM CAT 2023: ಕ್ಯಾಟ್ ಅಧಿಸೂಚನೆ ಇಂದು ಬಿಡುಗಡೆ ಸಾಧ್ಯತೆ, ಅಪ್ಲಿಕೇಶನ್ ಪ್ರಕ್ರಿಯೆ

ನಗರದ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಶುಕ್ರವಾರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್‌.ಆರ್‌.ಭಾನುಮೂರ್ತಿ ಮತ್ತು ಎನ್‌ಎಸ್‌ಇ ಅಕಾಡೆಮಿಯ ಸಿಇಒ ಅಭಿಲಾಶ್‌ ಮಿಶ್ರಾ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್‌ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದರು. ಎರಡು ಸಂಸ್ಥೆಗಳು ಜಂಟಿಯಾಗಿ ಹಣಕಾಸು ಮತ್ತು ಸಂಬಂಧಿಸಿದ ವಿಭಾಗಗಳಲ್ಲಿ ವಿವಿಧ ಸರ್ಟಿಫಿಕೇಟ್‌ ಮತ್ತು ಡಿಪ್ಲೊಮಾ ಕೋರ್ಸುಗಳನ್ನು ಆರಂಭಿಸಲಿವೆ. ಇದರಲ್ಲಿ ಮೊದಲನೆಯದು ಹಣಕಾಸು ಎಂಜಿನಿಯರಿಂಗ್‌ ಆಗಿದೆ.

ಕೆಎಎಸ್ ಅಧಿಕಾರಿಯಾಗಿ ಯುಪಿಎಸ್‌ಸಿ ಬರೆದು ಐಎಎಸ್‌ ಅಧಿಕಾರಿಯಾದ ಅಂದಿನ ಜನಪ್ರಿ

ಹಣಕಾಸು ಎಂಜಿನಿಯರಿಂಗ್‌ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದ್ದು, ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಲು ಗಣಿತ ಮತ್ತು ಸಂಖ್ಯಾಶಾಸ್ತ್ರೀಯ ವಿಧಾನಗಳನ್ನು ಈ ಕೋರ್ಸಿನಲ್ಲಿ ಕಲಿಸಲಾಗುತ್ತದೆ. ಈ ಕೋರ್ಸನ್ನು ಸ್ಟಾಕ್‌ ಬ್ರೋಕರ್‌ಗಳು, ಫಂಡ್‌ ಮ್ಯಾನೇಜರ್‌ಗಳು, ಕಾರ್ಪೋರೆಟ್‌ ಕಾರ್ಯನಿರ್ವಾಹಕರು, ಹೂಡಿಕೆದಾರರು ಮತ್ತು ಹಣಕಾಸು ಕ್ಷೇತ್ರದಲ್ಲಿ ಕೆಲಸ ಮಾಡಲು ಅಗತ್ಯ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಉನ್ನತ ಶಿಕ್ಷಣ ಪರಿಷತ್‌ನ ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ