ಯುಪಿಎಸ್‌ಸಿ : ವಂಚಿತರಿಗಿಲ್ಲ ಮತ್ತೊಂದು ಅವಕಾಶ

Kannadaprabha News   | Asianet News
Published : Jan 23, 2021, 11:24 AM IST
ಯುಪಿಎಸ್‌ಸಿ : ವಂಚಿತರಿಗಿಲ್ಲ ಮತ್ತೊಂದು ಅವಕಾಶ

ಸಾರಾಂಶ

ಕೇಂದ್ರ ಸರ್ಕಾರ  ಸುಪ್ರೀಂಕೋರ್ಟಿಗೆ UPSC ಪರೀಕ್ಷೆಯ ಬಗ್ಗೆ ತನ್ನ ಮಹತ್ವದ ನಿರ್ಧಾರ ಒಂದನ್ನು ಪ್ರಕಟಿಸಿದೆ. ವಂಚಿತರಿಗಿಲ್ಲ ಮತ್ತೊಂದು ಅವಕಾಶ ಎಂದು ತಿಳಿಸಿದೆ. 

ನವದೆಹಲಿ (ಜ.23): ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷ ನಡೆದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ‘ಕೊನೆಯ ಪ್ರಯತ್ನ’ದ (ಲಾಸ್ಟ್‌ ಅಟೆಂಪ್ಟ್‌)ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ  ಸುಪ್ರೀಂಕೋರ್ಟಿಗೆ ತಿಳಿಸಿದೆ.

ರಾಜ್ಯದಲ್ಲಿ ಪದವಿ, ಪೀಜಿ, ಎಂಜಿನಿಯರಿಂಗ್‌ ಪರೀಕ್ಷೆಗೆ ಸಮಯ ನಿಗದಿ ..

ಈ ಕುರಿತು ಸುಪ್ರೀಂಕೋರ್ಟ್‌ಗೆ ತಿಳಿಸಿದ ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಟರಿ ಜನರಲ್‌ ಎಸ್‌.ವಿ.ರಾಜು ಅವರು, ‘ಪರೀಕ್ಷೆಯಿಂದ ವಂಚಿತರಾದವರಿಗೆ ಕೊನೆಯ ಪ್ರಯತ್ನದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲು ಸಾಧ್ಯವಿಲ್ಲ. ಈ ಕುರಿತು ಅಫಿಡವಿಟ್‌ ಸಲ್ಲಿಸಲು ಸಮಯ ನೀಡಬೇಕು’ ಎಂದು ಕೋರಿದರು.

5 ಲಕ್ಷ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯುರಿಟಿ ಕೌಶಲ್ಯ ತರಬೇತಿ ...

ಇದಕ್ಕೆ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್‌, ಮತ್ತೊಂದು ಅವಕಾಶ ನೀಡುವಂತೆ ಯುಪಿಎಸ್‌ಸಿ ಆಕಾಂಕ್ಷಿ ರಚನಾ ಸಿಂಗ್‌ ಎಂಬವರು ಸಲ್ಲಿರುವ ವಿಚಾರಣೆಯನ್ನು ಜ.25ಕ್ಕೆ ಮುಂದೂಡಲಾಗಿದೆ. ಈ ಸಮಯದಲ್ಲಿ ಅಫಿಡವಿಟ್‌ ಸಲ್ಲಿಸಿ ಎಂದು ಕೇಂದ್ರಕ್ಕೆ ಸೂಚಿಸಿತು.

ಕಳೆದ ವರ್ಷ ಅಕ್ಟೋಬರ್‌ 4ರಂದು ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ನಡೆದಿತ್ತು.

PREV
click me!

Recommended Stories

ಹಾಸನದ 7ನೇ ತರಗತಿ ಬಾಲಕ ಏಷ್ಯನ್ ಬುಕ್‌ ಆಫ್ ರೆಕಾರ್ಡ್, ಕಣ್ಣು ಮುಚ್ಚಿಕೊಂಡೇ 1 ನಿಮಿಷದಲ್ಲಿ 8 ಕ್ಯೂಬ್ ಕಮಾಲ್!
ಯುಜಿಸಿಇಟಿ 2026: ಕೆಇಎಯಿಂದ ಅರ್ಜಿ ಸಲ್ಲಿಕೆಗೆ 1 ತಿಂಗಳು ಅವಕಾಶ, ಆದರೆ ಹಲವು ಮಹತ್ವದ ಬದಲಾವಣೆ