ಜ್ಞಾನವ್ಯಾಪಿ ಮಂದಿರದ ಪರ ಬ್ಯಾಟ್ ಮಾಡಿದ ಬೆಂಗಳೂರು ಶಿಕ್ಷಣ ಸಂಸ್ಥೆ

By Suvarna News  |  First Published May 24, 2022, 7:17 PM IST

ಬೆಂಗಳೂರಿನ ಜನಪ್ರಿಯ ಖಾಸಗಿ ಶಾಲೆಯೊಂದು ಜ್ಞಾನವಾಪಿ ಮಸೀದಿಯ ಹೆಸರನ್ನು “ಜ್ಞಾನವಾಪಿ ದೇವಸ್ಥಾನ”  ಎಂದು ಬದಲಾಯಿಸುವಂತೆ ಹಳೆ ವಿದ್ಯಾರ್ಥಿಗಳಿಗೆ ಮೇಲ್ ಮಾಡಿ ಸುದ್ದಿಯಲ್ಲಿದೆ.


ಬೆಂಗಳೂರು (ಮೇ.24): ಬೆಂಗಳೂರಿನ ಜನಪ್ರಿಯ ಖಾಸಗಿ ಶಾಲೆಯೊಂದು ತನ್ನ ಎಲ್ಲಾ ಹಳೆಯ ವಿದ್ಯಾರ್ಥಿಗಳಿಗೆ ಗೂಗಲ್ ಮ್ಯಾಪ್‌ಗೆ ಹೋಗಿ ಜ್ಞಾನವಾಪಿ ಮಸೀದಿಯ (gyanvapi masjid) ಹೆಸರನ್ನು “ಜ್ಞಾನವಾಪಿ ದೇವಸ್ಥಾನ” (Gyanvapi temple) ಎಂದು ಬದಲಾಯಿಸುವಂತೆ ಇಮೇಲ್ ಕಳುಹಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ಯಕ್ಕೆ ಚರ್ಚಿತ ವಿಷಯವಾಗಿದೆ.

ನ್ಯೂ ಹಾರಿಜನ್ ಪಬ್ಲಿಕ್ ಸ್ಕೂಲ್ (New Horizon Public School - NHPS) ತನ್ನ ಹಳೆಯ ವಿದ್ಯಾರ್ಥಿಗಳಿಗೆ ಮೇ 20, ಶುಕ್ರವಾರ ಸಂಜೆ ಈ ಸಾಮೂಹಿಕ ಇಮೇಲ್ ಅನ್ನು  ಕಳುಹಿಸಿದ್ದು, ಸದ್ಯಕ್ಕೆ ವೈರಲ್ ಆಗಿದೆ. 

Tap to resize

Latest Videos

ಬೀದಿ ಫೋಕರಿಯೊಬ್ಬ ಮಕ್ಕಳ ಶಿಕ್ಷಣ ನಿರ್ಧರಿಸುವುದು ರಾಜ್ಯದ ದೌರ್ಭಾಗ್ಯವೆಂದ ಕಾಂಗ್ರೆಸ್

ಮಸೀದಿಯ ಹೆಸರನ್ನು “ಜ್ಞಾನವಾಪಿ ದೇವಸ್ಥಾನ” ಎಂದು ಮಾಡಲು ನಿಮ್ಮನ್ನು ವಿನಂತಿಸಲಾಗಿದೆ ಮತ್ತು ಇದನ್ನು ಗೂಗಲ್ ಅಪ್‌ಡೇಟ್ ಮಾಡುವವರೆಗೆ ನಮ್ಮ ಹಿಂದೂ ಸಹೋದರ ಸಹೋದರಿಯರಿಗೆ ಇದನ್ನು ಮಾಡಲು ಹೇಳಿ ಎಂದು ಮೇಲ್  ನಲ್ಲಿ ಉಲ್ಲೇಖಿಸಲಾಗಿದೆ.

'ಜ್ಞಾನವಾಪಿ ಮಸೀದಿಯ ಬದಲಿಗೆ ಜ್ಞಾನವಾಪಿ ದೇವಸ್ಥಾನ' ಎಂಬ ಶೀರ್ಷಿಕೆಯ ಮೇಲ್, ಜ್ಞಾನವಾಪಿ ಮಸೀದಿಯ ಹೆಸರನ್ನು ಬದಲಾಯಿಸಲು ಹಳೆಯ ವಿದ್ಯಾರ್ಥಿಗಳು ಯಾವ ರೀತಿ ಹಂತಗಳನ್ನು ಅನುಸರಿಸಬೇಕು ಎಂದು  ಸ್ಪಷ್ಟವಾಗಿ ಬರೆಯಲಾಗಿದೆ.

Olympic Values Education Programme ಭಾರತದಾದ್ಯಂತ ಪ್ರಾರಂಭ

 

pic.twitter.com/1IML7332Q6

— New Horizon Public School (@NhpsOfficial)

ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯ ವಿವಾದ ಮತ್ತು ನ್ಯಾಯಾಲಯದ ಪ್ರಕರಣ ನಡೆಯುತ್ತಿರುವ ಸಮಯದಲ್ಲಿ ಈ ಮೇಲ್  ಹಳೆವಿದ್ಯಾರ್ಥಿಗಳಿಗೆ ಕಳುಹಿಸಲಾಗಿದೆ.

ನ್ಯೂ ಹಾರಿಜನ್ ಪಬ್ಲಿಕ್ ಸ್ಕೂಲ್ ಆಡಳಿತ ಮಂಡಳಿಯು  ಈ ಹಿಂದೆ ರಾಮಮಂದಿರ ಟ್ರಸ್ಟ್‌ಗೆ ದೇಣಿಗೆ ನೀಡಿತ್ತು, ರಾಮಮಂದಿರದ ಶಂಕುಸ್ಥಾಪನೆಯ ಸಂದರ್ಭದಲ್ಲಿ ಶಾಲೆಯಲ್ಲಿ ಭೂಮಿ ಪೂಜೆಯ ಸಮಾರಂಭವನ್ನು ಕೂಡ ನಡೆಸಿತ್ತು. ಇದರ ಜೊತೆಗೆ ಮಾರ್ಚ್ ನಲ್ಲಿ ಸಂಸ್ಥೆಯ ಸಿಬ್ಬಂದಿಗಳನ್ನು ಕಾಶ್ಮೀರ ಫೈಲ್‌ಗಳ ಚಿತ್ರದ ವೀಕ್ಷಣೆಗೆ ಕಡ್ಡಾಯವಾಗಿ ಹಾಜರಾಗುವಂತೆ ಆದೇಶಿಸಿತ್ತು.  ಕಾಶ್ಮೀರ ಫೈಲ್ಸ್ ಚಲನಚಿತ್ರಕ್ಕಾಗಿ ಟಿಕೆಟ್‌ಗಳನ್ನು ಆಯೋಜಿಸುತ್ತಿದೆ ಎಂದು ನೋಟಿಸ್ ಪ್ರಕಟಿಸಿತ್ತು.

ಇದಕ್ಕೆ ಹಳೆ ವಿದ್ಯಾರ್ಥಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.  ಸಿಬ್ಬಂದಿಗಳಿಗೆ ಸ್ಕ್ರೀನಿಂಗ್ ಅನ್ನು ಏಕೆ ಕಡ್ಡಾಯಗೊಳಿಸಲಾಗಿದೆ ಎಂದು ಪ್ರಶ್ನಿಸಿ ಹಲವಾರು ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಕಾಮೆಂಟ್‌ ಮಾಡಿದ್ದರು.

ನೆಚ್ಚಿನ ಕಾರಿನಲ್ಲಿ ಬಂದು ಪತ್ನಿ ಸಮೇತ ನಾಮಪತ್ರ ಸಲ್ಲಿಸಿದ Basavaraj Horatti

ಇನ್ನು ಜ್ಞಾನವಾಪಿ ಮಸೀದಿ ಹೆಸರು ಬದಲಾವಣೆ ಬಗ್ಗೆ ಕಳುಹಿಸಿದ ಮೇಲ್ ಗೆ ಹಲವು ಹಳೆಯ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ತನ್ನ  ವಿವಾದವನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದ  NHPS ನಮ್ಮ ಎಲ್ಲಾ ಇಮೇಲ್ ಸಂವಹನಗಳಿಗೆ ಅಗತ್ಯವಿರುವ ಸರಿಯಾದ ಸ್ಕ್ರೀನಿಂಗ್ ಕಾರ್ಯವಿಧಾನಗಳಿಲ್ಲದೆ ಇಮೇಲ್ ಕಳುಹಿಸಲಾಗಿದೆ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದೆ.

 

Dr. Mohan Manghnani, Chairman ,New Horizon educational Institution calling on PM in Bengaluru with a delegation 

— PIB India (@PIB_India)

ಇನ್ನು ಡಾ.ಮೋಹನ್ ಮಂಗ್ನಾನಿ ಅವರ ಮಾಲೀಕತ್ವದಲ್ಲಿ ನ್ಯೂ ಹಾರಿಜನ್ ಪಬ್ಲಿಕ್ ಸ್ಕೂಲ್ ನಡೆಯುತ್ತಿದ್ದು, ಈ ಹಿಂದೆ 2015 ರಲ್ಲಿ  ಸ್ವಚ್ಛ ಭಾರತ ಅಭಿಯಾನಕ್ಕೆ ಮೋಹನ್ ಮಂಗ್ನಾನಿ  5 ಕೋಟಿ ದೇಣಿಗೆ ನೀಡಿದ್ದರು. ಇದನ್ನು ಪಿಐಬಿ ಇಂಡಿಯಾ  ತನ್ನ ಅಧಿಕೃತ ಖಾತೆಯಲ್ಲಿ ಶೇರ್ ಮಾಡಿತ್ತು.  

click me!