ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ ಟಾಪ್ 5 ನೇ ಸ್ಥಾನ ಪಡೆದಿರುವ ಬೆಂಗಳೂರಿನ ಧ್ರುವ ಅಡ್ವಾಣಿ ತಮ್ಮ ಆಸೆ ಆಕಾಂಕ್ಷೆಗಳನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು (ಜೂ.14): ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) 2023 ಘೋಷಣೆಯಾಗಿದ್ದು, ಕರ್ನಾಟಕದ ಧ್ರುವ ಅಡ್ವಾಣಿ ದೇಶಕ್ಕೆ 5 ನೇ ರ‍್ಯಾಂಕ್ ಪಡೆದುಕೊಂಡಿದ್ದು, ರಾಜ್ಯಕ್ಕೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಇವರು ಬೆಂಗಳೂರಿನ ಜಿಆರ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ. ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಧ್ರುವ ಅಡ್ವಾಣಿ ಅವರು ಅಗ್ರಸ್ಥಾನ ಪಡೆದಿರುವುದನ್ನು ಕಂಡು ಆಶ್ಚರ್ಯವಾಯಿತು ಎಂದಿದ್ದಾರೆ. ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ಗೆ ಸೇರಲು ಬಯಸಿದ್ದಾರೆ.
715 ಅಂಕಗಳನ್ನು ಪಡೆದಿರುವ ಧ್ರುವ ಅಡ್ವಾಣಿ ಗಮನಾರ್ಹವಾದ 99.9 ಶೇಕಡಾವಾರು ಅಂಕಗಳೊಂದಿಗೆ ಅಖಿಲ ಭಾರತ 5 ನೇ ಸ್ಥಾನವನ್ನು ಪಡೆದುಕೊಂಡಿದ್ದು ಮಾತ್ರವಲ್ಲ ಈ ವರ್ಷ ಟಾಪ್ 10 NEET ರ್ಯಾಂಕ್ ಹೊಂದಿರುವವರ ಪಟ್ಟಿಯಲ್ಲಿ ಕರ್ನಾಟಕದ ಏಕೈಕ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
undefined
ಮಂಗಳವಾರ ರಾತ್ರಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸಂತಸ ಆಚರಿಸಿಕೊಂಡಿದ್ದು, ವಿಜ್ಞಾನದ ಬಗ್ಗೆ ವಿಶೇಷವಾಗಿ ಜೀವಶಾಸ್ತ್ರದ ಬಗ್ಗೆ ಹೆಚ್ಚಿನ ಆಸಕ್ತಿ ಇದೆ. ಈ ಆಸಕ್ತಿಯು ನನಗೆ 5 ನೇ ತರಗತಿಯಿಂದಲೇ ಇದೆ ಎಂದಿದ್ದಾರೆ.
NEET UG Result 2023 Announced: ನೀಟ್ ಯುಜಿ ಫಲಿತಾಂಶ ಪ್ರಕಟ, ಟಾಪರ್ಸ್
ದೆಹಲಿಯ AIIMS ಗೆ ದಾಖಲಾತಿಗಾಗಿ ಸಿದ್ಧತೆ ನಡೆಸುವ ಜೊತೆಗೆ, ಅಡ್ವಾಣಿ ಮುಂಬರುವ ಜುಲೈ 3 ರಿಂದ ನಡೆಯಲಿರುವ ಅಂತರರಾಷ್ಟ್ರೀಯ ಜೀವಶಾಸ್ತ್ರ ಒಲಿಂಪಿಯಾಡ್ 2023 ಗಾಗಿ ತಯಾರಿ ನಡೆಸುತ್ತಿದ್ದಾರೆ. ಈ ಪ್ರತಿಷ್ಠಿತ ಈವೆಂಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಜೂನ್ 17ರಿಂದ ಒಲಿಂಪಿಯಾಡ್‌ಗೆ ಸಿದ್ಧತೆ ಆರಂಭವಾಗಲಿದೆ.
ಅಡ್ವಾಣಿಗೆ ಯಾವಾಗಲೂ ಜನರಿಗೆ ಸಹಾಯ ಮಾಡಲು ಬಯಸಿದ್ದರಿಂದ ವೈದ್ಯಕೀಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಾನು ಯಾವಾಗಲೂ ಜನರಿಗೆ ಸಹಾಯ ಮಾಡಲು ಬಯಸುತ್ತೇನೆ, ಅದಕ್ಕಾಗಿಯೇ ನಾನು ವೈದ್ಯಕೀಯ ವೃತ್ತಿ ಆರಿಸಿಕೊಳ್ಳುತ್ತೇನೆ. ನನ್ನ ಪೋಷಕರು ಮತ್ತು ಕುಟುಂಬ ಸದಸ್ಯರು ಕೂಡ ಈ ರೀತಿಯ ಸೇವಾ ವೃತ್ತಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಜೀವಶಾಸ್ತ್ರವು ನನ್ನ ನೆಚ್ಚಿನ ವಿಷಯವಾಗಿದೆ. ಈ ಅಂಶಗಳು ನನ್ನನ್ನು ವೈದ್ಯಕೀಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿತು ಎಂದು ಬೆಂಗಳೂರಿನ ಜಿಆರ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿ ಅಡ್ವಾಣಿ ಹೇಳಿದ್ದಾರೆ. ಇವರು 12ನೇ ತರಗತಿ CBSE ಪರೀಕ್ಷೆಯಲ್ಲಿ ಶೇಕಡಾ 99.4 ರಷ್ಟು ಅಂಕ ಗಳಿಸಿದ್ದಾರೆ.
ಅಡ್ವಾಣಿಯವರ ಅಜ್ಜ ಜನರಲ್ ಸ್ಪೆಷಲಿಸ್ಟ್ ಮತ್ತು ಹೃದಯ ವೈದ್ಯರಾಗಿದ್ದಾರೆ. ಇವರ ಚಿಕ್ಕಮ್ಮ ನರ ವೈದ್ಯರಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಇವರಿಬ್ಬರೂ ನನಗೆ ಮಾದರಿಯಾಗಿದ್ದು, ನನಗೆ ನರವಿಜ್ಞಾನದಲ್ಲಿ ಆಸಕ್ತಿ ಇದೆ ಮತ್ತು ಅದು ನನ್ನ ಚಿಕ್ಕಮ್ಮನಿಂದ ಬಂದಿದೆ ಎಂದು ಹೇಳಿದ್ದಾರೆ.
ಬಾಗಲಕೋಟೆ ಬಡ ವಿದ್ಯಾರ್ಥಿ ಸಿಎ ಅಧ್ಯಯನಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಸಹಾಯ ಹಸ್ತ
ನೀಟ್ ಪರೀಕ್ಷೆಯ ತಯಾರಿಗಾಗಿ, ಅಡ್ವಾಣಿ ಖಾಸಗಿ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ನಾನು ಅಧ್ಯಯನದಲ್ಲಿ ನಿಗದಿತ ವೇಳಾಪಟ್ಟಿಯನ್ನು ಅನುಸರಿಸಲಿಲ್ಲ. ನಾನು ಯಾವಾಗಲೂ ಹೊಂದಿಕೊಳ್ಳುವವನು. ನನ್ನ ಪುಸ್ತಕಗಳನ್ನು ಮುಟ್ಟದ ದಿನಗಳೂ ಇದ್ದವು. ನನಗೆ ಇಷ್ಟವಾದಾಗ ಅಥವಾ ಅಗತ್ಯವಿದ್ದಾಗ ಮಾತ್ರ ನಾನು ಓದುತ್ತಿದ್ದೆ. ಸ್ಥಿರ ವೇಳಾಪಟ್ಟಿಗಳು ನನಗೆ ಎಂದಿಗೂ ಕೆಲಸ ಮಾಡಲಿಲ್ಲ. ಮುಂಬರುವ ಪರೀಕ್ಷೆಯಿದ್ದರೆ, ನಾನು ಈ ರೀತಿಯೇ ಓದುತ್ತೇನೆ. ಇದೆಲ್ಲವೂ ನನ್ನ ಅಗತ್ಯಗಳನ್ನು ಆಧರಿಸಿತ್ತು. ನನಗೆ ಅರ್ಥವಾಗದ ವಿಷಯವಿದ್ದರೆ ಅದರ ಬಗ್ಗೆ ನಾನು ಅಧ್ಯಯನ ಮಾಡುತ್ತೇನೆ. ನಾನು ಸಾಮಾನ್ಯವಾಗಿ ದಿನಕ್ಕೆ ಎರಡರಿಂದ ಮೂರು ಗಂಟೆಗಳ ಕಾಲ ಓದಿಗೆ ಮೀಸಲಿಡುತ್ತಿದ್ದೆ ಎಂದಿದ್ದಾರೆ.