ರಾಷ್ಟ್ರೀಯ ಶಿಕ್ಷಣ ನೀತಿಗೆ 3ನೇ ವರ್ಷದ ಸಂಭ್ರಮ: ಇಲ್ಲಿದ್ದಾರೆ ನೋಡಿ ಬಹುಶಿಸ್ತೀಯ ವಿದ್ಯಾರ್ಥಿಗಳು

By Sathish Kumar KH  |  First Published Jul 28, 2023, 6:53 PM IST

ಕೇಂದ್ರ ಸರ್ಕಾರ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಧಾರವಾಡ ಜಿಲ್ಲೆಯ 35 ಶಾಲೆಗಳ 28,500 ಮಕ್ಕಳು ಬಹುಶಿಸ್ತೀಯ ಮತ್ತು ಕೌಶಲ್ಯಾಧಾರಿತ ಶಿಕ್ಷಣ  ಕಲಿಯುತ್ತಿದ್ದಾರೆ.


ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಜು.28): ಕೇಂದ್ರ ಸರ್ಕಾರ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಧಾರವಾಡ ಕೇಂದ್ರೀಯ ವಿದ್ಯಾಲಯ, ಜವಾಹರ ನವೋದಯ ವಿದ್ಯಾಲಯ ಮತ್ತು ಸಿಬಿಎಸ್‍ಸಿ ಸೇರಿ 35 ಶಾಲೆಗಳ ಸುಮಾರು 28,576 ಮಕ್ಕಳು ಎನ್‍ಇಪಿ ಅಡಿ ಬಹುಶಿಸ್ತೀಯ ಮತ್ತು ಕೌಶಲ್ಯಾಧಾರಿತ ಶಿಕ್ಷಣವನ್ನು ಕಲಿಯುತ್ತಿದ್ದಾರೆ  ಪ್ರಾಚಾರ್ಯ ಜುನ್ನಾ ರಾಮ್ ಹೇಳಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಕೇಂದ್ರೀಯ ವಿದ್ಯಾಲಯ ಮತ್ತು ನವೋದಯ ಶಾಲೆಯ ವತಿಯಿಂದ ಆಯೋಜಿಸಿದ್ದ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕೇಂದ್ರ ಸರ್ಕಾರವು ದೇಶದಾದ್ಯಂತ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರೀಯ ವಿದ್ಯಾಲಯ ಜವಾಹರ ನವೋದಯ ವಿದ್ಯಾಲಯ ಮತ್ತು ಸಿಬಿಎಸ್‍ಸಿ ಶಾಲೆಗಳಲ್ಲಿ ಜಾರಿಗೊಳಿಸಿ ಜುಲೈ 29 ಕ್ಕೆ ಮೂರು ವರ್ಷಗಳು ತುಂಬುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕೇಂದ್ರೀಯ ವಿದ್ಯಾಲಯ, ಜವಾಹರ ನವೋದಯ ವಿದ್ಯಾಲಯ ಮತ್ತು ಸಿಬಿಎಸ್‍ಸಿ ಸೇರಿ 35 ಶಾಲೆಗಳ ಸುಮಾರು 28,576 ಮಕ್ಕಳು ಎನ್‍ಇಪಿ ಅಡಿ ಬಹುಶಿಸ್ತೀಯ ಮತ್ತು ಕೌಶಲ್ಯಾಧಾರಿತ ಶಿಕ್ಷಣವನ್ನು ಕಲಿಯುತ್ತಿದ್ದಾರೆ ಎಂದು ಧಾರವಾಡ ಕೇಂದ್ರೀಯ ವಿದ್ಯಾಲಯದ ಬಹು ಪ್ರಾಚಾರ್ಯ ಜುನ್ನಾ ರಾಮ್ ಹೇಳಿದರು. 

Tap to resize

Latest Videos

undefined

ಕಬ್ಬು ಬೆಳೆಗೆ ತುಕ್ಕು ರೋಗ ಬಾಧೆ: ರೈತರಿಗೆ ಬೆಳೆ ಸಂರಕ್ಷಣಾ ಸಲಹೆ ನೀಡಿದ ಕೃಷಿ ಇಲಾಖೆ

ರಾಷ್ಟ್ರಿಯ ಶಿಕ್ಷಣ ನೀತಿಯಲ್ಲಿ ಮೌಖಿಕ ಕಲಿಕೆಗಿಂತ ವಿಮರ್ಶಾತ್ಮಾಕ ಚಿಂತನೆಯನ್ನು ಉತ್ತೇಜಿಸಿ ಅಧ್ಯಯನದ ಬದಲಿಗೆ ವಿದ್ಯಾರ್ಥಿಗಳು ಕಲಿಕೆಯತ್ತ ಗಮನಹರಿಸಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಅನುವಾಗುವಂತೆ ವಿಷಯ ಪ್ರಸ್ತುತಿಯನ್ನು ಮಾಡಲಾಗುತ್ತಿದೆ. ಜಾಗತಿಕದೊಂದಿಗೆ ಸ್ಥಳೀಯ ಕಲೆ, ಕೌಶಲ್ಯ ಮತ್ತು ಉದ್ಯೋಗಗಳಿಗೆ ಪೂರಕವಾದ ವಾತಾವರಣವನ್ನು ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಬೆಳೆಸಲು ಎನ್‍ಇಪಿ ಆಧ್ಯತೆ ನೀಡಿದೆ ಎಂದು ಅವರು ಹೇಳಿದರು.

ಸಾಕ್ಷರತೆ, ಸಂಖ್ಯಾಜ್ಞಾನ ಮತ್ತು ಸಂವಹನ ಕಲೆಗೆ ಆದ್ಯತೆ: ಕೇಂದ್ರೀಯ ವಿದ್ಯಾಲಯಗಳಲ್ಲಿ ಬಾಲವಾಟಿಕಾ 1 ರಿಂದ 3 ರ ವರೆಗೆ ಕಲಿಯುವ ಮಕ್ಕಳಲ್ಲಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಬೆಳೆಸಲು, ಸಂವಹನ ಕಲೆಯನ್ನು ಬೆಳೆಸಲು ಕ್ರಮವಹಿಸಲಾಗಿದೆ. ಪೋಷಕರು ತಮ್ಮ ಜ್ಞಾನವನ್ನು ಮಕ್ಕಳಿಗೆ ಶಾಲಾ ಅವಧಿಯಲ್ಲಿ ಕಲಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.

ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ 2 ಬಾರಿ ಪೂರಕ ಪರೀಕ್ಷೆಗೆ ಅವಕಾಶ: ಇಲ್ಲಿದೆ ಪರೀಕ್ಷಾ ವೇಳಾಪಟ್ಟಿ

ಪತ್ರಿಕಾಗೋಷ್ಠಿಯಲ್ಲಿ  ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯೆ ಹೇಮಲತಾ ಯು., ಉಪ ಪ್ರಾಚಾರ್ಯ ಸ್ಯಾಮುಯಲ್ ನವನೀತರಾಜ್, ಹುಬ್ಬಳ್ಳಿ ರಾಜನಗರದ ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ರವಿರಾಜೇಶ, ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಜಿ.ಎನ್. ಮಠಪತಿ, ಎಸ್.ಎಂ. ಹುಡೇದಮನಿ, ಜೆ.ಎಸ್.ಎಸ್. ಸಿಬಿಎಸ್‍ಸಿ ಶಾಲೆಯ ಪ್ರಾಚಾರ್ಯೆ ಸಾಧನಾ ಸೇರಿದಂತೆ ಇತರರು ಇದ್ದರು.

click me!