ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಬಾಗಲಕೋಟೆಯ ಸ್ವಪ್ನಾ ಅನಿಗೋಳ, ಶಿರಸಿ ನಾರಾಯಣ ಭಾಗವತ

By Sathish Kumar KH  |  First Published Aug 27, 2023, 6:32 PM IST

ರಾಷ್ಟ್ರೀಯ ಉತ್ತಮ ಪ್ರಶಸ್ತಿ-2023ಕ್ಕೆ ಕರ್ನಾಟಕದಿಂದ ಬಾಗಲಕೋಟೆಯ ಶಿಕ್ಷಕಿ ಸ್ವಪ್ನಾ ಅನಿಗೋಳ ಹಾಗೂ ಶಿರಸಿಯ ಶಿಕ್ಷಕ ನಾರಾಯಣ ಪರಮೇಶ್ವರ ಭಾಗ್ವತ್‌ ಆಯ್ಕೆಯಾಗಿದ್ದಾರೆ. 


ಬಾಗಲಕೋಟೆ (ಆ.27): ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಪ್ರತಿವರ್ಷ ಕೊಡಮಾಡುವ ರಾಷ್ಟ್ರೀ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಕೆಎಲ್ಇ ಜೂನಿಯರ್ ಕಾಲೇಜಿನ ಶಿಕ್ಷಕಿ ಸ್ವಪ್ನಾ ಅನಿಗೋಳ ಹಾಗೂ ಶಿರಸಿಯ ಮಾರಿಕಾಂಬ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ನಾರಾಯಣ ಪರಮೇಶ್ವರ ಭಾಗವತ ಆಯ್ಕೆಯಾಗಿದ್ದಾರೆ. 

2023-24 ನೇ ಸಾಲಿನ ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿಯು ಬಾಗಲಕೋಟೆ ಜಿಲ್ಲೆಯ ಶಿಕ್ಷಕಿಗೆ ದೊರೆತಿದ್ದು, ಜಿಲ್ಲೆಯ ಜನರು ಹೆಮ್ಮೆ ಪಡುವಂತಾಗಿದೆ. ಸ್ವಪ್ನಾ ಅನಿಗೋಳ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದವರಾಗಿದ್ದಾರೆ. ಇವರು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಕೆಎಲ್ಇ ಜೂನಿಯರ್ ಕಾಲೇಜಿನ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಎಂಎಸ್ಸಿ, ಬಿಎಡ್ ಮಾಡಿದ್ದು, ವಿಜ್ಞಾನ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ವಿಭಿನ್ನ ಪಾಠ ಮಾಡುವ ಶೈಲಿ ಹಾಗೂ ಶಾಲಾ ಹಾಜರಾತಿ ಕರೆಯುವ ಶೈಲಿಯು ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಲು ಕಾರಣವಾಗಿದೆ.

Tap to resize

Latest Videos

undefined

ಲೋಕಸಭೆ ಟಿಕೆಟ್‌ಗಾಗಿ ಕಾಂಗ್ರೆಸ್‌ ಉಪಾಧ್ಯಕ್ಷೆ ವೀಣಾ ಪಟ್ಟು: ಮಾಜಿ ಸಚಿವರಿಂದಲೂ ಭರ್ಜರಿ ಫೈಟ್‌

ಮಕ್ಕಳಿಗೆ ರಾಸಾಯನಿಕ ಹೆಸರು ಬಳಕೆ: ಇನ್ನು ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ಎಂದರೆ ಅದರಲ್ಲಿಯೂ ರಾಸಾಯನಿಕ ವಸ್ತುಗಳ ವೈಜ್ಞಾನಿಕ ಸಂಕೇತ ಮತ್ತು ಹೆಸರುಗಳು ವಿದ್ಯಾರ್ಥಿಗಳಿಗೆ ಕಲಿಯಲು ಕಬ್ಬಿಣದ ಕಡಲೆಯಂತಾಗಿರುತ್ತದೆ. ವಿಜ್ಞಾನ ವಿಷಯವನ್ನು ಸರಳೀಕರಿಸಿ ಕಲಿಸುವ ಉದ್ದೇಶದಿಂದ ಮಕ್ಕಳಿಗೆ ವಿಭಿನ್ನವಾಗಿ ಹಾಜರಾತಿ ಪಡೆಯಲು ಮುಂದಾಗಿದ್ದರು. ತರಗತಿಯ ಎಲ್ಲ ಮಕ್ಕಳಿಗೆ ತಮ್ಮ ಹೆಸರಿನ ಜೊತೆಗೆ, ರಾಸಾಯನಿಕಗಳ ಹೆಸರು ಬಳಸಿ ರಚನಾತ್ಮಕವಾಗಿ ಹೆಸರನ್ನಿಟ್ಟಿದ್ದರು. ಈ ಮೂಲಕ ಗುಣಮಟ್ಟದ ಶಿಕ್ಷಣ ಪ್ರಸಾರ ಮಾಡುತ್ತಿದ್ದರು. ಮಕ್ಕಳಿಗೆ ಬೋಧನೆ ಮಾಡುತ್ತಿದ್ದ ವಿಶೇಷ ಶೈಲಿಯೂ ಕೂಡ ಶಾಲೆಗೆ ಹೆಚ್ಚಿನ ಆಕರ್ಷಣೆ ಆಗಿತ್ತು. 

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಾಪುರದ ಜೂನಿಯರ್‌ ಕಾಲೇಜಿನ ಶಿಕ್ಷಕಿ ಸ್ವಪ್ನಾ ಅನಿಗೋಳ ಅವರು ಶಾಲೆಯ ವಿದ್ಯಾರ್ಥಿಗಳಿಗೆ ಸ್ಕೌಟ್ ಆ್ಯಂಡ್ ಗೈಡ್ಸ್ ತರಬೇತುದಾರರಾಗಿಯೂ, ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಕೊಂಡಿದ್ದರು. ಮಹಾಲಿಂಗಪುರ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಚತಾ ರಾಯಭಾರಿಯಾಗಿರುವ ಶಿಕ್ಷಕಿ ಸ್ವಪ್ನ ಭಾಗಿಯಾಗಿದ್ದರು. ಇನ್ನು ಪ್ರಶಸ್ತಿಯನ್ನು ಸೆ.5ರಂದು ಶಿಕ್ಷಕರ ದಿನಾಚರಣೆಯಂದು ಪ್ರದಾನ ಮಾಡಲಾಗುತ್ತದೆ.

50 ಸಾವಿರ ರೂ. ನಗದು ಬಹುಮಾನ, ಬೆಳ್ಳಿ ಪದಕ:
ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದಿಂದ ಕಠಿಣ ಪಾರದರ್ಶಕವಾಗಿ ಆನ್‌ಲೈನ್‌ನಲ್ಲಿ ಮೂರು ಹಂತದ ಆಯ್ಕೆ ಪ್ರಕ್ರಿಯೆಯ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ. ಹೀಗೆ, ಆಯ್ಕೆಯಾದ ಅತ್ಯುತ್ತಮ ಶಿಕ್ಷಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 5ನೇ ಸೆಪ್ಟೆಂಬರ್ 2023 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಪ್ರದಾನ ಮಾಡಲಿದ್ದಾರೆ. ಪ್ರತಿ ಪ್ರಶಸ್ತಿಯು ಅರ್ಹತಾ ಪ್ರಮಾಣಪತ್ರ, 50,000 ರೂ. ನಗದು ಹಾಗೂ ಬೆಳ್ಳಿ ಪದಕವನ್ನು ಹೊಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗಲು ಶಿಕ್ಷಕರನ್ನು ಬಿಡುಗಡೆ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಲಾಗಿದೆ.

ಗಣೇಶ ಮೂರ್ತಿ ತಯಾರಿಸುವವರಿಗೆ ನೂರೆಂಟು ವಿಘ್ನಗಳು: ಪಿಒಪಿ ಗಣೇಶನಿಗೆ ಭಾರಿ ಬೇಡಿಕೆ

ಶಿರಸಿಯ ನಾರಾಯಣ ಭಾಗ್ವತ್‌ ಅವರೂ ಆಯ್ಕೆ:  ಇನ್ನು ಕರ್ನಾಟಕದಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ನಾರಾಯಣ ಪರಮೇಶ್ವರ ಭಾಗವತ ಅವರು ರಾಷ್ಟ್ರೀಯ ಅತ್ಯುತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಕೂಡ ಶಿಕ್ಷಕರ ದಿನಾಚರಣೆಯಂದು ರಾಷ್ಟ್ರಪತಿ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. 

 

click me!