* ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 15000 ಕೋಟಿ ಮೀಸಲಿಡಿ
* ಬಜೆಟ್‌ನಲ್ಲಿ ಅನುದಾನಕ್ಕೆ ಎಂ.ಆರ್.ದೊರೆಸ್ವಾಮಿ ಮನವಿ
*ಪತ್ರಿಕಾ ಹೇಳಿಕೆ ಮೂಲಕ ಸಿಎಂಗೆ ಆಗ್ರಹ
ಬೆಂಗಳೂರು(ಫೆ. 17) ದೆಹಲಿ(Newdelhi) ಆಂಧ್ರಪ್ರದೇಶ ಮತ್ತು ತೆಲಂಗಾಣ (Telangana) ಮಾದರಿಯಲ್ಲಿ ಕರ್ನಾಟಕದಲ್ಲೂ(Karnataka) ಸರ್ಕಾರಿ (Govt Schools) ಶಾಲೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ದಿಟ್ಟಹೆಜ್ಜೆ ಇಡಬೇಕು. ಮುಂಬರುವ ಬಜೆಟ್‌ನಲ್ಲಿ(Karnataka Budget) ಇದಕ್ಕಾಗಿ 15 ಸಾವಿರ ಕೋಟಿ ರು. ಅನುದಾನ ಮೀಸಲಿಡಬೇಕು ಎಂದು ಸರ್ಕಾರದ ಶೈಕ್ಷಣಿಕ ಸುಧಾರಣೆಗಳ ಮಾಜಿ ಸಲಹೆಗಾರರಾದ ಡಾ.ಎಂ.ಆರ್.ದೊರೆಸ್ವಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸ್ವಾತಂತ್ರ್ಯ ದೊರೆತು ಏಳು ದಶಕಗಳು ಕಳೆದರೂ ಭೌತಿಕ ಮೂಲಸೌಕರ್ಯ, ಶಿಕ್ಷಕ-ವಿದ್ಯಾರ್ಥಿ ಅನುಪಾತ, ಶೈಕ್ಷಣಿಕ ಗುಣಮಟ್ಟಮತ್ತು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನ ಸೇರಿದಂತೆ ಅನೇಕ ದೃಷ್ಟಿಕೋನಗಳಲ್ಲಿ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗದೆ ಹಾಗೆಯೇ ಉಳಿದಿರುವುದು ದುರದೃಷ್ಟಕರ. ಸರ್ಕಾರಿ ಶಾಲೆಗಳನ್ನು ಆದ್ಯತೆ ಮೇರೆಗೆ ಸಮರ್ಪಕವಾಗಿ ಅಭಿವೃದ್ಧಿಪಡಿಸಲು ದಿಟ್ಟಹೆಜ್ಜೆ ಇಡಬೇಕಾಗಿದೆ.
ಈ ನಿಟ್ಟಿನಲ್ಲಿ ದೆಹಲಿ, ಆಂಧ್ರ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳು ಗಮನಾರ್ಹವಾಗಿದೆ. ಆಂಧ್ರಪ್ರದೇಶ ಸರ್ಕಾರವು ‘ಸಮಗ್ರ ಶಾಲಾ ಅಭಿವೃದ್ಧಿ ಯೋಜನೆಗಳನ್ನು’ ಈಗಾಗಲೇ ಅನುಷ್ಠಾನಗೊಳಿಸಿದೆ. ತೆಲಂಗಾಣ ಸರ್ಕಾರವು ಇದೇ ಫೆಬ್ರವರಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 7,289 ಕೋಟಿ ರು. ಅನುದಾನದಡಿ ‘ಮನ ಊರು ಮನ ಬಡಿ’ ಯೋಜನೆಯಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ತೀರ್ಮಾನಿಸಿದೆ.
ಸ್ವಕ್ಷೇತ್ರದ ಜನತೆಗೆ ಮಹತ್ವದ ಮನವಿ ಮಾಡುವುದರ ಜತೆಗೆ ಭಾವನಾತ್ಮಕ ಮಾತುಗಳನ್ನಾಡಿದ ಬೊಮ್ಮಾಯಿ
ಇದೇ ರೀತಿ ಕರ್ನಾಟಕ ಸರ್ಕಾರ ಕೂಡ ರಾಜ್ಯದ ಸರ್ಕಾರಿ ಶಾಲೆಗಳನ್ನು ಮರು ರೂಪಿಸಲು ಹಿಂದುಳಿಯುವುದಿಲ್ಲ ಎಂದು ನಾನು ಭಾವಿಸಿದ್ದೇನೆ. ದೆಹಲಿ ಶಾಲೆಗಳಂತೆ ರಾಜ್ಯದ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕೆಂದು ಆಶಿಸುತ್ತೇನೆ. ಇದಕ್ಕಾಗಿ ಮುಂದಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಅವರು 15 ಸಾವಿರ ಕೋಟಿ ರು. ಅನುದಾನವನ್ನು ಮೀಸಲಿಡಬೇಕೆಂದು ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ(NEP) 2020ರ ಅಡಿಯ ಶಿಫಾರಸುಗಳನ್ನು ರಾಜ್ಯದ 48 ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಅನುಷ್ಠಾನಗೊಳಿಸುವ ಮೂಲಕ ಅವುಗಳನ್ನು ಮರುರೂಪಿಸುವ ಅಗತ್ಯವಿದೆ. ಇದಕ್ಕಾಗಿ ಬಜೆಟ್‌ನಲ್ಲಿ ಸೂಕ್ತ ಅನುದಾನ ಮೀಸಲಿಡುವುದರೊಂದಿಗೆ ಮುಂದಿನ ಎರಡು ವರ್ಷಗಳಲ್ಲಿ ಡಿಜಿಟಲ್ ಶಿಕ್ಷಣ ಪದ್ಧತಿ ಅನುಷ್ಠಾನಕ್ಕೆ ಅಗತ್ಯ ಸೌಲಭ್ಯಗಳು, ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ನೀರಿನ ಸಂಪರ್ಕದೊಂದಿಗೆ ಶೌಚಾಲಯಗಳು, ವಿದ್ಯುತ್ ಸಂಪರ್ಕ, ಕಟ್ಟಡಗಳಿಗೆ ಪೇಂಟಿಂಗ್, ಪೀಠೋಪಕರಣ, ಕಟ್ಟಡ ಹಾಗೂ ಕೊಠಡಿ ದುರಸ್ತಿ, ಹಸಿರು ಮತ್ತು ಕಪ್ಪು ಹಲಗೆ ವ್ಯವಸ್ಥೆ, ಕಾಂಪೌಂಡ್ ನಿರ್ಮಾಣ, ಪ್ರತ್ಯೇಕ ಅಡುಗೆ ಕೋಣೆ, ಶಿಥಿಲಾವಸ್ತೆಯಲ್ಲಿರುವ ಕೊಠಡಿಗಳನ್ನು ಹೊಸದಾಗಿ ನಿರ್ಮಿಸುವುದು, ಪ್ರೌಢ ಶಾಲೆಗಳಲ್ಲಿ ಊಟದ ಹಾಲ್ ವ್ಯವಸ್ಥೆ ಮಾಡಲು ಕ್ರಮ ವಹಿಸಬೇಕೆಂದು ಪಿಇಎಸ್ ವಿವಿ ಕುಲಾಧಿಪತಿಯೂ ಆದ ಡಾ.ಎಂ.ಆರ್.ದೊರೆಸ್ವಾಮಿ ಅವರು ಕೋರಿದ್ದಾರೆ.
ಅಧಿವೇಶನ ಆರಂಭವಾಗಿದ್ದು ಅನೇಕ ವಿಚಾರಗಳ ಚರ್ಚೆ ಆಗುತ್ತಲಿದೆ. ಈಗಾಗಲೇ ಸಿಎಂ ಬೊಮ್ಮಾಯಿ ಎಲ್ಲ ಇಲಾಖೆಗಳ ಜತೆ ಬಜೆಟ್ ಮಪೂರ್ವಭಾವಿ ಸಭೆ ನಡೆಸಿದ್ದಾರೆ. ಯಾವ ಇಲಾಖೆಗಳಗೆ ಏನು ಬೇಕು ಎನ್ನುವುದನ್ನು ಮನಗಂಡಿರುವ ಸಿಎಂ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.