ಶಾಲಾ-ಕಾಲೇಜು ಪ್ರಾರಂಭ ಯಾವಾಗ? ಸ್ಪಷ್ಟನೆ ಕೊಟ್ಟ ಸಚಿವ ಸುರೇಶ್ ಕುಮಾರ್

By Suvarna News  |  First Published Sep 5, 2020, 4:36 PM IST

ಕೊರೋನಾದಿಂದಾಗಿ ಬಂದ್ ಆಗಿದ್ದ ಬಹುತೇಕ ಎಲ್ಲಾ ಕಾರ್ಯ ಚಟುವಟಿಕೆಗಳು ಎಂದಿನಂತೆ ಆರಂಭವಾಗಿವೆ. ಆದ್ರೆ, ಶಾಲಾ-ಕಾಲೇಜುಗಳು ಇನ್ನೂ ತೆರೆಯಲು ಅವಕಾಶ ಸಿಕ್ಕಿಲ್ಲ. ಇನ್ನು ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆಕೊಟ್ಟಿದ್ದಾರೆ.


ಮಾಗಡಿ, (ಸೆ.5): ಶಾಲಾ-ಕಾಲೇಜುಗಳು ಯಾವಾಗ ಪ್ರಾರಂಭವಾಗಲಿವೆ ಎನ್ನುವುದು ಇನ್ನೂ ಯಾರಿಗೂ ಗೊತ್ತಿಲ್ಲ. ಅಕ್ಟೋಬರ್‌ನಲ್ಲಿ ಪುನರಾರಂಭ ಮಾಡಲು ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನ ಸಿದ್ಧತಪಡಿಸುತ್ತಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್,  ಕೇಂದ್ರ ಸರ್ಕಾರದ ಹಸಿರು ನಿಶಾನೆ ಬಂದ ಕೂಡಲೆ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು. 

Latest Videos

undefined

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್....!

ಮಾಗಡಿ ತಾಲ್ಲೂಕಿನ ವಿವಿಧೆಡೆಗಳಲ್ಲಿ ನಡೆಯುತ್ತಿರುವ ವಿದ್ಯಾಗಮ ತರಗತಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾನಸ ವಿದ್ಯಾನಿಧಿ ಶಾಲೆಯಲ್ಲಿ ಅವರು ಮಾತನಾಡಿದ ಅವರು, ಸೆ.21ರಿಂದ ಶಾಲೆಗಳು ಆರಂಭವಾದರೂ ಸಹಿತ 160 ದಿನಗಳಲ್ಲಿ ಪಠ್ಯಕ್ರಮ ಪೂರ್ಣಗೊಳಿಸುವುದಾಗಿ ಶಿಕ್ಷಕರು ತಿಳಿಸಿದ್ದಾರೆ. ಶನಿವಾರ ಬ್ಯಾಗ್ ರಹಿತ ಪೂರ್ಣ ತರಗತಿ ದಿನ ನಡೆಸುವ ಉದ್ದೇಶವಿದೆ ಎಂದರು. 

ಪಠ್ಯದಲ್ಲಿ ಬದಲಾವಣೆ
ಕೊಲಂಬಸ್ ಮತ್ತು ವಾಸ್ಕೋಡಗಾಮನ ಬದಲು ಸ್ಥಳೀಯ ಜನಪದ ವೀರರನ್ನು ಮಕ್ಕಳಿಗೆ ಪರಿಚಯಿಸಲಾಗುವುದು. ನಗರದ ಮಕ್ಕಳಿಗೆ ಕೃಷಿ ಪಾಠದ ಪರಿಚಯ ಮಾಡಿಸುವ ಉದ್ದೇಶದಿಂದ ಕೃಷಿ ವಿಶ್ವವಿದ್ಯಾಲಯಕ್ಕೆ ಮಕ್ಕಳನ್ನು ಕರೆದೊಯ್ದು, ರಾಗಿ, ಭತ್ತ ಎಲ್ಲಿ, ಹೇಗೆ ಬೆಳೆಯುತ್ತದೆ ಎಂಬುದನ್ನು ಪರಿಚಯ ಮಾಡಿಕೊಡಲಾಗುವುದು ಎಂದು ಹೇಳಿದರು.

ನಿರಂತರ ಕಲಿಕೆಯಿಂದ ಮಕ್ಕಳು ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಈ ಜಾರಿಗೆ ತರಲಾಗಿದೆ. ಗುಡಿ, ಅರಳಿಕಟ್ಟೆ, ಮರದ ಕೆಳಗೆ ಅಂತರ ಕಾಯ್ದುಕೊಂಡು ಮಕ್ಕಳನ್ನು ಕೂಡಿಸಿ ಶಿಕ್ಷಕರು ಪಾಠ ಪ್ರವಚನ ನೀಡುತ್ತಿದ್ದಾರೆ. ಈ ಮೂಲಕ ವಿದ್ಯಾಗಮ ಯೋಜನೆಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದು ಅಭಿಪ್ರಾಯಪಟ್ಟರು.

ತಜ್ಞರ ವರದಿ: ಶಾಲಾ-ಕಾಲೇಜುಗಳನ್ನ ಪ್ರಾರಂಭಿಸುತ್ತಾ ಕೇಂದ್ರ ಸರ್ಕಾರ...?

ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ನಂಟು ಕೊರೋನಾದಿಂದ ಬೇರ್ಪಟ್ಟರೆ, ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಅಧಿಕವಾಗಲಿದೆ ಎಂದು ಶಿಕ್ಷಣ ತಜ್ಞ ಶ್ರೀಧರ್ ನೀಡಿದ ವರದಿ ಅನ್ವಯ ಖಾಸಗಿ ಶಾಲೆಗಳಲ್ಲಿ ಆನ್‍ಲೈನ್ ಶಿಕ್ಷಣ ನೀಡುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಆನ್‍ಲೈನ್ ಶಿಕ್ಷಣ ಕಷ್ಟ ಎಂದರು.

ಕೊರೋನಾದಿಂದ ನಿರಂತರವಾಗಿ ಶಾಲೆಗಳನ್ನು ಮುಚ್ಚಿದರೆ ಸರ್ಕಾರಿ ಶಾಲೆಗಳ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು ಕಷ್ಟ. ಇದರಿಂದ ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಲಿದೆ. ಬಾಲ್ಯ ವಿವಾಹಗಳು ಅಧಿಕವಾಗಲಿವೆ ಎಂಬುದನ್ನು ಮನಗಂಡು ವಿದ್ಯಾಗಮ ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

click me!