School Text Book ಅವರು ಏನನ್ನೂ ಓದಿಲ್ಲ ಅನ್ನೋದು ಸಾಬೀತಾಗಿದೆ, ಡಿಕೆ ಸುರೇಶ್‌ಗೆ ಶಿಕ್ಷಣ ಸಚಿವ ಟಾಂಗ್

By Suvarna News  |  First Published Feb 1, 2022, 7:55 PM IST

* ಕರ್ನಾಟಕದಲ್ಲಿ ಶಾಲಾ ಪಠ್ಯ ವಿವಾದ
* ಕಾಂಗ್ರೆಸ್ ಸಂಸದ ಡಿಕೆ ಸುರೇಶ್‌ಗೆ ಸಚಿವ ನಾಗೇಶ್ ತಿರುಗೇಟು
* ಸತ್ಯಾಸತ್ಯತೆ ಪರೀಕ್ಷೆ ಮಾಡಿ ತಾವೇ ಸ್ವತಃ ಓದಿ ಟ್ವೀಟ್ ಮಾಡಲಿ ಎಂದ ಶಿಕ್ಷಣ ಸಚಿವ


ಬೆಂಗಳೂರು, (ಫೆ.01): ಕರ್ನಾಟಕದ ಶಾಲಾ ಪಠ್ಯ ಪುಸ್ತಕದಲ್ಲಿ (Karnataka School Text Book) . ಪ್ರಸಿದ್ಧ ಮಲಯಾಳಂ ನಟನ ಫೋಟೊವನ್ನು ಪಠ್ಯಪುಸ್ತಕದಲ್ಲಿ ಪೋಸ್ಟ್‌ಮ್ಯಾನ್ ರೀತಿ ಬಿಂಬಿಸಲಾಗಿದೆ ಎನ್ನುವ ಸಂಸದ ಡಿಕೆ ಸುರೇಶ್ ಆರೋಪಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ (BC Nagesh) ಸ್ಪಷ್ಟನೆ ಕೊಟ್ಟಿದ್ದಾರೆ.

ಈ ಬಗ್ಗೆ ಇಂದು(ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಡಿ.ಕೆ. ಸುರೇಶ್ ಬೇಜವಾಬ್ದಾರಿಯಾಗಿ ಟ್ವೀಟ್ ಮಾಡಿದ್ದಾರೆ. ಯಾವ ಪುಸ್ತಕವೇ ಇಲ್ಲ, ಪಾಠವೇ ಇಲ್ಲ, ಅಂಥ ಇಲ್ಲದಿರುವ ಪುಸ್ತಕದ ಬಗ್ಗೆ ಸುರೇಶ್ ಟ್ವೀಟ್ ಮಾಡಿದಾರೆ. ಅವರು ಏನನ್ನೂ ಓದಿಲ್ಲ ಅನ್ನೋದು ಇದರಿಂದ ಸಾಬೀತಾಗಿದೆ ಎಂದು ಕಿಡಿಕಾರಿದರು.

Tap to resize

Latest Videos

ಕರ್ನಾಟಕದ ಶಾಲಾ ಪಠ್ಯ ಪುಸ್ತಕದಲ್ಲಿ ಮತ್ತೊಂದು ಎಡವಟ್ಟು

 ಮುಂದಿನ ದಿನಗಳಲ್ಲಾದರೂ ಸಂಸದ ಸುರೇಶ್ ಪುಸ್ತಕಗಳನ್ನು ತೆರೆದು ಓದಲಿ. ಬೇಜವಾಬ್ದಾರಿಯುತ ಹೇಳಿಕೆಗಳನ್ನು ಕೊಡುವುದರಿಂದ ಸರ್ಕಾರಿ ಶಾಲೆಗಳ ಬಗ್ಗೆಯೂ ಮಾನಸಿಕತೆ ಬದಲಾಗತ್ತೆ. ಸತ್ಯಾಸತ್ಯತೆ ಪರೀಕ್ಷೆ ಮಾಡಿ ತಾವೇ ಸ್ವತಃ ಓದಿ ಟ್ವೀಟ್ ಮಾಡಲಿ. ಅನಗತ್ಯವಾಗಿ ಶ್ರೇಷ್ಠ ಸಂಸ್ಥೆ, ಕೋಟ್ಯಾಂತರ ಜನರ ಮೇಲೆ ದೇಶಪ್ರೇಮದ ಪ್ರಭಾವ ಬೀರುವ ಸಂಸ್ಥೆ ಆರ್​ಎಸ್​ಎಸ್ ಬಗ್ಗೆ ಮಾತಾನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಕೆ ಸುರೇಶ್ ಅವರ ಆರೋಪ ಏನಿತ್ತು?
ಬಿಜೆಪಿ ಆಡಳಿತದಲ್ಲಿ ಶಾಲಾ ಪಠ್ಯಕ್ರಮದ ಗುಣಮಟ್ಟ ಕುಸಿಯುತ್ತಿದೆ. ವಿದ್ಯಾರ್ಥಿಗಳು ಈಗಾಗಲೇ ಕಡಿಮೆ ಪಠ್ಯಕ್ರಮ ಹೊಂದಿದ್ದಾರೆ. ಇದರ ಜೊತೆಗೆ ಭೋದನೆಗೆ ಸಂಬಂಧಪಟ್ಟ ಸರ್ಕಾರದ ಮೇಲ್ವಿಚಾರಣೆ ಕೂಡ ಇಲ್ಲ. ಸದ್ಯದ ಪಠ್ಯಪುಸ್ತಕಗಳಲ್ಲಿ ಚಿತ್ರಗಳನ್ನು ಶಿಕ್ಷಣ ಸಮಿತಿಯು ಯಾವುದೇ ಸಂಶೋಧನೆ ಮಾಡದೆ ಅಂತರ್ಜಾಲದಿಂದ ತೆಗೆದು ಪ್ರಕಟಿಸುತ್ತಿದೆ. ಅಂದ ಹಾಗೆ ಶಾಲಾ ಪಠ್ಯಕ್ರಮದಲ್ಲಿರುವ ಚಿತ್ರಗಳು ಮತ್ತು ಪಠ್ಯಗಳನ್ನು ಶಿಕ್ಷಣ ಇಲಾಖೆಯಲ್ಲಿ ಸಿದ್ದಪಡಿಸಲಾಗುತ್ತಿದೆಯೋ ಅಥವಾ ಕೇಶವಕೃಪದಲ್ಲೋ ಎಂಬುದನ್ನು ಬಿ.ಸಿ. ನಾಗೇಶ್ ಮತ್ತು ಸುರೇಶ್ ಕುಮಾರ್ ಅವರು ಸ್ಪಷ್ಟಪಡಿಸಬೇಕು. ಬಿಜೆಪಿ ಸರಕಾರದ ತೀವ್ರ ಅಸಡ್ಡೆ ಹಾಗೂ ಅವ್ಯವಸ್ಥೆಯಿಂದ ಕರ್ನಾಟಕವು ಇಡೀ ದೇಶದ ಮುಂದೆ ತಲೆತಗ್ಗಿಸುವಂತಾಗಿದೆ ಎಂದು ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದರು

ಉಡುಪಿಯಲ್ಲಿ ಉಂಟಾಗಿರುವ ಯೂನಿಫಾರಂ, ಹಿಜಾಬ್ ವಿವಾದದ ಬಗ್ಗೆಯೂ ಬಿ.ಸಿ. ನಾಗೇಶ್ ಇದೇ ವೇಳೆ ಪ್ರತಿಕ್ರಿಯೆ ನೀಡಿದ್ದು, ಎಲ್ಲಾ ರಾಜ್ಯದಲ್ಲಿ ಯೂನಿಫಾರಂ ಹೇಗಿದೆ, ಸುಪ್ರೀಂ ಕೋರ್ಟ್, ಇತರ ಕೋರ್ಟ್​ಗಳು ಏನು ಹೇಳಿದೆ ಎಂದು ನೋಡುತ್ತೇವೆ. ಏಕರೂಪದ ನೀತಿ ಅಂತ ಅಲ್ಲದೇ ಇದ್ದರೂ ಈ ಬಗ್ಗೆ ಸ್ಪಷ್ಟನೆ ಕೊಡುವ ಕೆಲಸ ಮಾಡುತ್ತೇವೆ. ಸರ್ಕಾರವೇ ಯೂನಿಫಾರಂ ಕೊಡುತ್ತೋ ಅಥವಾ ಎಸ್​ಡಿಎಂಸಿಗೇ ಆ ಅಧಿಕಾರ ಕೊಟ್ಟರೂ ಯಾವ ಆಧಾರದಲ್ಲಿ ಅದನ್ನು ಮಾಡಬೇಕು ಎಂದು ಹೇಳುತ್ತೇವೆ. ಸಮಿತಿಯ ವರದಿಯಂತೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ಆ ಕಾರ್ಯ ಮಾಡಲಾಗುತ್ತೆ ಎಂದರು.

ಈ ಪುಟ್ಟ ವಿಷಯ ಅನೇಕ ಸಮಸ್ಯೆಗಳನ್ನು ಸೃಷ್ಟಿಮಾಡಬಹುದು. ಕೇಸರಿ ಶಾಲು, ಹಸುರು ಶಾಲು, ಬನಿಯನ್, ಅರ್ಧ ಪ್ಯಾಂಟ್ ಹೀಗೆ ಬೇಕಾದ್ದನ್ನು ಹಾಕಿಕೊಂಡು ಬರುತ್ತೇವೆ ಅಂತ ಆಗಬಾರದು. ಡ್ರೆಸ್ ಕೋಡ್​​ನಲ್ಲಿ ಏನು ಮಾಡಬಾರದು ಅಂತ ಇತ್ತು. ಏನು ಮಾಡಬೇಕು ಅಂತಲೂ ಹೇಳುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

click me!