ಗುಲಬರ್ಗಾ ವಿವಿ ಪಠ್ಯಕ್ಕೆ ಮಂಜಮ್ಮ ಜೋಗತಿ ಆತ್ಮಕಥನ

By Kannadaprabha NewsFirst Published Mar 6, 2021, 2:20 PM IST
Highlights

ಮಂಗಳಮುಖಿಯ ಆತ್ಮಕಥನ ‘ನಡುವೆ ಸುಳಿವ ಹೆಣ್ಣು’ ಬಿಎಸ್‌ಸಿ ಪಠ್ಯಕ್ಕೆ ಆಯ್ಕೆ| ಮಂಜಮ್ಮ ಜೋಗತಿ ಅನುಭವಿಸಿದ ಕಹಿ ಘಟನೆಗಳಿಗೆ ಅಕ್ಷರ ರೂಪ ನೀಡಿದ ಡಾ. ಅರುಣ ಜೋಳದ ಕೂಡ್ಲಿಗಿ| ಈ ಪುಸ್ತಕ ಪ್ರಕಟಿಸಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ|  

ಸಿ.ಕೆ.ನಾಗರಾಜ್‌

ಮರಿಯಮ್ಮನಹಳ್ಳಿ(ಮಾ.06): ಮಂಗಳಮುಖಿಯರು ಅಂದರೆ ಮೂಗು ಮುರಿಯುವ ಇಂದಿನ ಸಂದರ್ಭದಲ್ಲಿ ಮಾತಾ ಮಂಜಮ್ಮ ಜೋಗತಿ ಅವರ ಆತ್ಮಕಥನ ‘ನಡುವೆ ಸುಳಿವ ಹೆಣ್ಣು’ ಕೃತಿ ಗುಲಬರ್ಗಾ ವಿಶ್ವವಿದ್ಯಾಲಯದ ಬಿಎಸ್ಸಿ ಬೇಸಿಕ್‌ ಪಠ್ಯಕ್ಕೆ ಆಯ್ಕೆಯಾಗಿದೆ.

ಮಂಜಮ್ಮ ಜೋಗತಿ ಅನುಭವಿಸಿದ ಕಹಿ ಘಟನೆಗಳಿಗೆ ಡಾ. ಅರುಣ ಜೋಳದ ಕೂಡ್ಲಿಗಿ ಅಕ್ಷರ ರೂಪ ನೀಡಿದ್ದಾರೆ. 31 ಅಧ್ಯಾಯಗಳ 214 ಪುಟಗಳ ಆತ್ಮಕಥನ ಇದು. ಡಾ.ಬರಗೂರು ರಾಮಚಂದ್ರಪ್ಪ ಮುನ್ನುಡಿ, ಬೆನ್ನುಡಿಯನ್ನು ಸಬಿಹಾ ಭೂಮಿಗೌಡ ಬರೆದಿದ್ದಾರೆ. ಹೊಸಪೇಟೆಯ ಪಲ್ಲವ ಪ್ರಕಾಶನ ಮುದ್ರಣ ಮಾಡಿದೆ. ಕೆಲ ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಹಿರಿಯ ಸಾಹಿತಿ ಸಿದ್ದಲಿಂಗಯ್ಯ ಇದನ್ನು ಲೋಕಾರ್ಪಣೆ ಮಾಡಿದ್ದಾರೆ. ಈಗ ಗುಲಬರ್ಗಾ ವಿಶ್ವವಿದ್ಯಾಲಯದ ಪಠ್ಯಕ್ಕೆ ಇದು ಆಯ್ಕೆಯಾಗಿದೆ.

ನಾನು ಗಂಡಾಗದಿದ್ರೂ ಚಿಂತೆಯಿಲ್ಲ, ಹೆಣ್ಣಾಗದಿದ್ರೂ ಪರವಾಗಿಲ್ಲ : ಜನರ ಪ್ರೀತಿ ಇದೆ

ಈ ಹಿಂದೆ ವಿಜಯಪುರದ ಅಕ್ಕಮಹಾದೇವಿ ಕಾಲೇಜಿನ 5ನೇ ಸೆಮಿಸ್ಟರ್‌ ಅರಿವು ಪಠ್ಯದಲ್ಲಿ ಮಂಜಮ್ಮ ಜೋಗತಿ ಜೀವನ ಚರಿತ್ರೆ ಇತ್ತು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಈ ಪುಸ್ತಕ ಪ್ರಕಟಿಸಿದೆ. ಡಾ.ಚಂದ್ರಪ್ಪ ಸೊಗಟಿ ನಿರೂಪಿಸಿದ್ದರು. ತೆಲುಗಿನ ಮಾಸಪತ್ರಿಕೆಯೊಂದು ಈ ಜೀವನ ಕಥೆಯನ್ನು ಧಾರಾವಾಹಿಯಾಗಿ ಪ್ರಕಟಿಸಿದೆ.

ನನ್ನ ಆತ್ಮಕಥನ ‘ನಡುವೆ ಸುಳಿವ ಹೆಣ್ಣು’ ಪುಸ್ತಕವು ಗುಲಬರ್ಗಾ ವಿಶ್ವವಿದ್ಯಾಲಯದ ಬಿಎಸ್ಸಿ ಬೇಸಿಕ್‌ ಪಠ್ಯಕ್ಕೆ ಆಯ್ಕೆಯಾಗಿರುವುದು ಮಂಗಳಮುಖಿಯರಿಗೆ ಸಂದ ಗೌರವವಾಗಿದೆ ಎಂದು ಮರಿಯಮ್ಮನಹಳ್ಳಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದೆ ಮಾತಾ ಮಂಜಮ್ಮ ಜೋಗತಿ ಹೇಳಿದ್ದಾರೆ. 
 

click me!