MAHE & CIPLA ಒಪ್ಪಂದ : ಉದ್ಯೋಗಿಗಳಿಗೆ ಶಿಕ್ಷಣ ಸಬಲೀಕರಣ

By Suvarna News  |  First Published Aug 11, 2023, 2:26 PM IST

ಮಣಿಪಾಲದ MAHE ವಿವಿ ಯು, ತನ್ನ  UNNATI (ವರ್ಕ್ ಇಂಟಿಗ್ರೇಟೆಡ್ ಲರ್ನಿಂಗ್ ಪ್ರೋಗ್ರಾಂ) ನ ಮೊದಲ ಬ್ಯಾಚ್ ಗಾಗಿ ಗೋವಾದ ವೆರ್ನಾದಲ್ಲಿರುವ CIPLA ಅಕಾಡೆಮಿಯಲ್ಲಿ ಓರಿಯಂಟೇಶನ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿತು.


ಉಡುಪಿ: ಮಣಿಪಾಲದ MAHE ವಿವಿ ಯು, ತನ್ನ  UNNATI (ವರ್ಕ್ ಇಂಟಿಗ್ರೇಟೆಡ್ ಲರ್ನಿಂಗ್ ಪ್ರೋಗ್ರಾಂ) ನ ಮೊದಲ ಬ್ಯಾಚ್ ಗಾಗಿ ಗೋವಾದ ವೆರ್ನಾದಲ್ಲಿರುವ CIPLA ಅಕಾಡೆಮಿಯಲ್ಲಿ ಓರಿಯಂಟೇಶನ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿತು. ಮಾಹೆ ವಿಶ್ವವಿದ್ಯಾಲಯದ ಅಡಿಯಲ್ಲಿ CIPLA ದ ಉದ್ಯೋಗಿಗಳು ತಮ್ಮ 'ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್' ಅನ್ನು ಮುಂದುವರಿಸಲು ಮಾರ್ಚ್ ತಿಂಗಳಲ್ಲೇ ಕಾರ್ಯಕ್ರಮ ಪ್ರಾರಂಭಿಸಲಾಗಿತ್ತು.  ಇದೇ ವೇಳೆ MAHE ಮತ್ತು CIPLA ನಡುವೆ ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಲಾಗಿದೆ. ಈ ಮೂಲಕ ಎಐಸಿಟಿಇಯು 60 ವಿದ್ಯಾರ್ಥಿಗಳ ಪ್ರವೇಶದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲು MAHE ಗೆ ಅನುಮೋದನೆ ನೀಡಿದೆ.
 
ಮಾಹೆ ಮಣಿಪಾಲದ ಎಂಐಟಿಯ ಜಂಟಿ ನಿರ್ದೇಶಕ ಡಾ.ಸೋಮಶೇಖರ್ ಭಟ್ ಮುಖ್ಯ ಅತಿಥಿಯಾಗಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಶೈಕ್ಷಣಿಕ ಕೇಂದ್ರವಾಗಿ ಮಣಿಪಾಲದ ಗಮನಾರ್ಹ ಪ್ರಯಾಣ ಮತ್ತು ಡಾ.ಟಿ.ಎಂ.ಎ ಪೈ, ಅವರ ದೂರದರ್ಶಿತ್ವದ ಪ್ರಯತ್ನಗಳ ಕುರಿತು ಮಾತನಾಡಿದರು.  CIPLA ಸಂಸ್ಥೆಯ ಹಿರಿಯ VP (HR) ವಿನಯ್ ಬಸ್ಸಿ,  ದೇಶದ ಎರಡು ಪ್ರತಿಷ್ಠಿತ ಸಂಸ್ಥೆ MAHE ಮತ್ತು CIPLA ಒಟ್ಟಾಗಿ ಈ  ಕಾರ್ಯಕ್ರಮವನ್ನು ನೀಡುತ್ತಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿ, ಈ ಅವಕಾಶವನ್ನು ಬಳಸಿಕೊಳ್ಳಲು CIPLA ಉದ್ಯೋಗಿಗಳನ್ನು ಪ್ರೋತ್ಸಾಹಿಸಿ ಮಾತನಾಡಿದರು.

ಆ.14ರೊಳಗೆ ಕರ್ನಾಟಕದಲ್ಲಿ 1300 ಅನಧಿಕೃತ ಶಾಲೆ ಬಂದ್‌
 
ಮಣಿಪಾಲದ ಎಂಐಟಿ ನಿರ್ದೇಶಕ  ಡಾ. ಅನಿಲ್ ರಾಣಾ (Anil Rana) ಆನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪಠ್ಯಕ್ರಮವನ್ನು ವಿನ್ಯಾಸಗೊಳಿಸುವಲ್ಲಿ MIT ಮಣಿಪಾಲದ ವಿವಿಧ ವಿಭಾಗಗಳ ಸಮರ್ಪಿತ ಪ್ರಯತ್ನಗಳನ್ನು ಉಲ್ಲೇಖಿಸಿದರು. ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ವಿಶೇಷವಾಗಿ ಡಿಜಿಟಲ್ ತಂತ್ರಜ್ಞಾನದ ಯುಗದಲ್ಲಿ ಕೌಶಲ್ಯಗಳ ನಿರಂತರ ನವೀಕರಣದ ಅಗತ್ಯವನ್ನು ಒತ್ತಿ ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶಗಳಲ್ಲಿ ಒಂದಾಗಿರುವ ವಿದ್ಯಾರ್ಥಿಗಳ ಕೌಶಲ್ಯ ಮತ್ತು ಮರುಕೌಶಲೀಕರಣದ ಬದ್ಧತೆಯ ಬಗ್ಗೆ ಗಮನಸೆಳೆದರು.

Tap to resize

Latest Videos

undefined

ಆನ್‌ಸೈಟ್/ಆನ್‌ಲೈನ್/ವಿದ್ಯಾರ್ಥಿ-ನಿರ್ದೇಶಿತ ಕಲಿಕೆಯ ಆರು ಸೆಮಿಸ್ಟರ್‌ಗಳನ್ನು ಪೂರ್ಣಗೊಳಿಸಿದ ನಂತರ ಉದ್ಯೋಗಿಗಳಿಗೆ ಡಿಪ್ಲೊಮಾವನ್ನು ನೀಡಲಾಗುತ್ತದೆ. ವಾರಾಂತ್ಯದಲ್ಲಿ ನಡೆಯುವ ತರಗತಿಗಳು ಮತ್ತು ಸಂಪೂರ್ಣ ಕಾರ್ಯಕ್ರಮವನ್ನು ಮೂರೂವರೆ ವರ್ಷಗಳಲ್ಲಿ ಪೂರ್ಣಗೊಳಿಸುವ ರೀತಿಯಲ್ಲಿ ಕೋರ್ಸ್ ಅನ್ನು ರಚಿಸಲಾಗಿದೆ. ಮೂವತ್ತೆಂಟು ವಿದ್ಯಾರ್ಥಿಗಳ ಆರಂಭಿಕ ಬ್ಯಾಚ್ ಅನ್ನು ಆರಂಭಿಸಲಾಗಿದೆ. MIT ಯ ವಿವಿಧ ವಿಭಾಗಗಳ ಅಧ್ಯಾಪಕರು ಪ್ರಯೋಗಾಲಯ ಕೋರ್ಸ್‌ಗಳನ್ನು ಒಳಗೊಂಡಂತೆ ಕೋರ್ಸ್ ಮಾಡ್ಯೂಲ್‌ಗಳನ್ನು ಕಲಿಸುತ್ತಾರೆ

Education: 6ನೇ ವಯಸ್ಸಿಗೆ 1ನೇ ಕ್ಲಾಸ್‌ ಪ್ರವೇಶ: ಹೈಕೋರ್ಟ್‌ ಅಸ್ತು

click me!