Kuvempu University: 2019-20ನೇ ಸಾಲಿನಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಕುವೆಂಪು ವಿವಿ ನಿರ್ಧಾರ!

By Suvarna News  |  First Published Mar 10, 2022, 3:03 PM IST

2019-20ನೇ ಸಾಲಿನ ಪರೀಕ್ಷೆ ಬರೆಯದೆ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಕುವೆಂಪು ವಿಶ್ವವಿದ್ಯಾಲಯದ ಶಾಕಿಂಗ್ ಸುದ್ದಿ ಕೊಟ್ಟಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು  ಕುಲಪತಿ ಪ್ರೋ.ವೀರಭದ್ರಯ್ಯ ಮಾಹಿತಿ ನೀಡಿದ್ದಾರೆ.


ಶಿವಮೊಗ್ಗ(ಮಾ.10): ಕೋವಿಡ್ 19 (Covid 19) ಸಾಂಕ್ರಾಮಿಕದ ಕಾರಣದಿಂದ 2019-20 ನೇ ಸಾಲಿನ ಪರೀಕ್ಷೆಯನ್ನು (Exam) ಕುವೆಂಪು ವಿಶ್ವವಿದ್ಯಾನಿಲಯ (Kuvempu University) ನಡೆಸದೇ  ಎಲ್ಲರನ್ನೂ ಪಾಸ್ ಮಾಡಿತ್ತು. ಇದಕ್ಕೆ ಸಿಂಡಿಕೇಟ್ ಸಭೆಯಲ್ಲಿ (syndicate  meeting) ತೀವ್ರ ವಿರೋಧ ವ್ಯಕ್ತವಾಗಿತ್ತು.  ಪರೀಕ್ಷೆ ನಡೆಸದೇ ಪಾಸ್ ಮಾಡಿದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 2019-20 ನೇ ಸಾಲಿನ ಎಲ್ಲ ಪರೀಕ್ಷೆಗಳನ್ನು ನಡೆಸಲು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕುಲಪತಿ ಪ್ರೋ.ವೀರಭದ್ರಪ್ಪ (B. P. Veerabhadrappa) ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಕುಲಪತಿಗಳು 2019-20 ನೇ ಸಾಲಿನಲ್ಲಿ ಕೋವಿಡ್​ನಿಂದಾಗಿ ಪರೀಕ್ಷೆ ನಡೆಸದೆ ಪಾಸ್ ಮಾಡಲಾಗಿತ್ತು. ಆದರೆ,  ಇದಕ್ಕೆ ಸಿಂಡಿಕೇಟ್ ಸಭೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಮತ್ತೆ ಸಭೆ ನಡೆಸಿ ಪರೀಕ್ಷೆ ನಡೆಸಲು ಮುಂದಾಗಿದ್ದೇವೆ. ಇದಕ್ಕೆ ಎದುರಾಗಬಹುದಾದ ಕಾನೂನು ತೂಡಗಿನ ಕುರಿತು ಸಲಹೆ ಪಡೆಯಲು ಕುಲಸಚಿವರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.

Tap to resize

Latest Videos

undefined

 2019-20 ನೇ ಸಾಲಿನಲ್ಲಿ  ಕುವೆಂಪು ವಿಶ್ವವಿದ್ಯಾನಿಲಯದ ಸುಮಾರು 24 ಸಾವಿರ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೇ ಪಾಸ್ ಮಾಡಲಾಗಿತ್ತು. ಸಿಂಡಿಕೇಟ್ ಸದಸ್ಯರೇ ರಾಜ್ಯಪಾಲರಿಗೆ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಈ ಬಗ್ಗೆ ದೂರು ಕೂಡ ಕೊಟ್ಟಿದ್ದರು. 

KOLAR ANGANWADI RECRUITMENT 2022: ಕೋಲಾರ ಜಿಲ್ಲೆಯ ಅಂಗನವಾಡಿ ಹುದ್ದೆಗಳ ನೇಮಕಾತಿ

 ಅತಿಥಿ ಉಪನ್ಯಾಸಕರ ವೇತನ  ಹೆಚ್ಚಳ: ಕುವೆಂಪು ವಿಶ್ವವಿದ್ಯಾಲಯದ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಮಾಸಿಕ ವೇತನ ಏರಿಕೆ ಮಾಡಲಾಗಿದೆ. ವೇತನ ಹೆಚ್ಚಿಸುವ ಬಗ್ಗೆ ಕುಲಸಚಿವರ ಅಧ್ಯಕ್ಷತೆಯಲ್ಲಿ ಕುಲಸಚಿವ (ಪರೀಕ್ಷಾಂಗ), ಸಿಂಡಿಕೇಟ್ ಸದಸ್ಯರಾದ ಶ್ರೀ ಜಿ. ಧರ್ಮಪ್ರಸಾದ್, ಶ್ರೀ ಮಂಜುನಾಥ ಎನ್.ಆರ್ ಮತ್ತು ಹಣಕಾಸು ಅಧಿಕಾರಿಗಳನ್ನು ಒಳಗೊಂಡತೆ ಸಮಿತಿ ರಚನೆ ಮಾಡಲಾಗಿತ್ತು. 

ಸಮಿತಿಯು ತಯಾರಿಸಿದ  ವರದಿಯನ್ನು  ಮಾರ್ಚ್ 9 ರಂದು ನಡೆದ ಸಭೆಯಲ್ಲಿ ಮಂಡಿಸಲಾಗಿತ್ತು. ಬಳಿಕ ಸಭೆಯಲ್ಲಿ ಚರ್ಚಿಸಿ ಕೆಲವೊಂದು ತಿದ್ದುಪಡಿಗಳೊಂದಿಗೆ ಇದನ್ನು ಜಾರಿಗೆ ತರಲಾಗಿದೆ. ಅದರಂತೆ ಪರಿಷ್ಕರಿಸಲಾದ ವೇತನದ ಪಟ್ಟಿ ಈ ಕೆಳಗಿನಂತಿದೆ.

CBSE Term 1 Results 2022: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಇಂದು ಪ್ರಕಟ ಸಾಧ್ಯತೆ

15 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿರುವ  ಜೊತೆಗೆ ಯು.ಜಿ.ಸಿ ನಿಯಮಾನುಸಾರ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ – 45.000 ರೂ.
15 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿರುವ  ಜೊತೆಗೆ ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿಲ್ಲದೇ ಇರುವ ಅತಿಥಿ ಉಪನ್ಯಾಸಕರಿಗೆ – 40,000 ರೂ.
10 ರಿಂದ 14 ವರ್ಷ ಸೇವೆ ಸಲ್ಲಿಸಿರುವ ಜೊತೆಗೆ  ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ 38,000 ರೂ.
10 ರಿಂದ 14 ವರ್ಷ ಸೇವೆ ಸಲ್ಲಿಸಿರುವ ಜೊತೆಗೆ  ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿಲ್ಲದೇ ಇರುವ ಅತಿಥಿ ಉಪನ್ಯಾಸಕರಿಗೆ 36,000ರೂ.
5 ರಿಂದ 9 ವರ್ಷ ಸೇವೆ ಸಲ್ಲಿಸಿರುವ ಜೊತೆಗೆ  ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ – ರೂ. 31,000.
5 ರಿಂದ 9 ವರ್ಷ ಸೇವೆ ಸಲ್ಲಿಸಿರುವ ಜೊತೆಗೆ  ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿಲ್ಲದೇ  ಅತಿಥಿ ಉಪನ್ಯಾಸಕರಿಗೆ – ರೂ.  30,000.
ಇದರ ಜೊತೆಗೆ ಮಹಿಳಾ ಅತಿಥಿ ಉಪನ್ಯಾಸಕರಿಗೆ ಹೆರಿಗೆ ಭತ್ಯೆ ಸಹಿತ ವೇತನ  ನೀಡಲು ತೀರ್ಮಾನ ಮಾಡಲಾಗಿದೆ ಎಂದು ಕುಲಪತಿ ಪ್ರೋ. ವೀರಭದ್ರಪ್ಪ ತಿಳಿಸಿದ್ದಾರೆ.

click me!