ಪಿಜಿ ವೈದ್ಯಕೀಯ ಪ್ರವೇಶ: ಕೆಇಎಯಿಂದ ಅನಿರೀಕ್ಷಿತ ಕೆಲವೇ ಗಂಟೆಗಳ ಕೊನೆಯ ಅವಕಾಶ!

Published : Nov 20, 2025, 09:02 PM IST
KEA medical

ಸಾರಾಂಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ರಾಜ್ಯದ ಪಿಜಿ ವೈದ್ಯಕೀಯ ಪ್ರವೇಶದ ಮೊದಲ ಸುತ್ತಿನ ಆಪ್ಷನ್ ಎಂಟ್ರಿ ಅವಧಿಯನ್ನು ವಿಸ್ತರಿಸಿದೆ. ಅಭ್ಯರ್ಥಿಗಳ ಮನವಿಯ ಮೇರೆಗೆ, ನವೆಂಬರ್ 21ರ ಬೆಳಿಗ್ಗೆ 9 ಗಂಟೆಯವರೆಗೆ ಆಯ್ಕೆಗಳನ್ನು ದಾಖಲಿಸಲು ಹೆಚ್ಚುವರಿ ಸಮಯ ನೀಡಲಾಗಿದೆ. 

ಬೆಂಗಳೂರು: ರಾಜ್ಯದ ಪಿಜಿ ವೈದ್ಯಕೀಯ ಪ್ರವೇಶಕ್ಕಾಗಿ ನಡೆಯುತ್ತಿರುವ ಮೊದಲ ಸುತ್ತಿನ ಆಪ್ಷನ್ ಎಂಟ್ರಿ ಪ್ರಕ್ರಿಯೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮತ್ತೊಂದು ಅವಕಾಶ ನೀಡಿದೆ. ಅಭ್ಯರ್ಥಿಗಳ ಬೇಡಿಕೆಯ ಹಿನ್ನೆಲೆಯಲ್ಲಿ, ಆಪ್ಷನ್ ಎಂಟ್ರಿ ಸಲ್ಲಿಸುವ ಅವಧಿಯನ್ನು ಕೆಇಎ ವಿಸ್ತರಿಸಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ನಾಳೆವರೆಗೆ ಮಾತ್ರ ಅವಕಾಶ

ಹೆಚ್ಚುವರಿ ಸಮಯ ನೀಡಿರುವ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳು ಈಗ ನವಂಬರ್ 21ರ ಬೆಳಿಗ್ಗೆ 9 ಗಂಟೆಯವರೆಗೆ ತಮ್ಮ ಆಪ್ಷನ್‌ಗಳನ್ನು ದಾಖಲಿಸಬಹುದು. ಮೊದಲೇ ನಿಗದಿಪಡಿಸಿದ್ದ ಗಡುವು ಮುಗಿಯಲು ಬಂದ ಸಂದರ್ಭದಲ್ಲಿ, ಹೆಚ್ಚಿನ ವಿದ್ಯಾರ್ಥಿಗಳು ತಾಂತ್ರಿಕ ಹಾಗೂ ದಾಖಲೆ ಸಂಬಂಧಿತ ಕಾರಣಗಳಿಗೆ ಹೆಚ್ಚುವರಿ ಸಮಯ ಕೋರಿ ಮನವಿ ಸಲ್ಲಿಸಿದ್ದರು.

ಅರ್ಹ ಅಭ್ಯರ್ಥಿಗಳಿಗೆ ಸಮಾನ ಅವಕಾಶ

ಪ್ರವೇಶ ಪ್ರಕ್ರಿಯೆಗೆ ಯಾವುದೇ ಅಡಚಣೆ ಉಂಟಾಗದಂತೆ ಮತ್ತು ಎಲ್ಲ ಅರ್ಹ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದಲೇ ಅವಧಿ ವಿಸ್ತರಿಸಲಾಗಿದೆ ಎಂದು ಕೆಇಎ ತಿಳಿಸಿದೆ. ಆಪ್ಷನ್ ಎಂಟ್ರಿ ಸಲ್ಲಿಸಿದ ನಂತರ, ಅಭ್ಯರ್ಥಿಗಳು ಆಯ್ಕೆ ಪಟ್ಟಿ ಹಾಗೂ ಮುಂದಿನ ಹಂತಗಳ ವೇಳಾಪಟ್ಟಿಗೆ ಕೆಇಎ ಅಧಿಕೃತ ಜಾಲತಾಣವನ್ನು ನಿಯಮಿತವಾಗಿ ಪರಿಶೀಲಿಸುವಂತೆ ಸಲಹೆ ನೀಡಲಾಗಿದೆ.

 

 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ