Latest Videos

ಗಮನಿಸಿ, ಪಿಜಿಸಿಇಟಿ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ, ಜೂನ್ 20ರವರೆಗೂ ಅವಕಾಶ

By Gowthami KFirst Published Jun 17, 2024, 3:35 PM IST
Highlights

ಸ್ನಾತಕೋತ್ತರ ಕೋರ್ಸ್‌ಗಳಾದ ಎಂಬಿಎ, ಎಂಸಿಎ., ಎಂ.ಟೆಕ್, ಎಂಇ., ಎಂ.ಆರ್ಕಿಟೆಕ್ಚರ್  ಪ್ರವೇಶಕ್ಕೆ  ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಲಾಗಿದೆ.

ಬೆಂಗಳೂರು (ಜೂ.17): 2024-25ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳಾದ ಎಂಬಿಎ, ಎಂಸಿಎ., ಎಂ.ಟೆಕ್, ಎಂಇ., ಎಂ.ಆರ್ಕಿಟೆಕ್ಚರ್  ಪ್ರವೇಶಕ್ಕೆ  ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಲಾಗಿದೆ. ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸುವ ಪಿಜಿಸಿಇಟಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕವನ್ನು ಜೂನ್ 20ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಮಾಹಿತಿ ನೀಡಿದ್ದಾರೆ. ಶುಲ್ಕ ಪಾವತಿಸಲು ಜೂನ್ 21ವರೆಗೆ ಅವಕಾಶ ನೀಡಲಾಗಿದೆ.

1419 ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಬೋಧನೆ: ಷರತ್ತುಬದ್ಧ ಅನುಮತಿ ನೀಡಿದ ರಾಜ್ಯ ಸರ್ಕಾರ

ಈ ಹಿಂದೆ ಪಿಜಿಸಿಇಟಿ ಪರೀಕ್ಷೆಗೆ ಮೇ 27ರಿಂದ ಜೂನ್ 17ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಈಗ ಮತ್ತೆ ಮೂರು ದಿನ ವಿಸ್ತರಣೆ ಮಾಡಲಾಗಿದೆ.

ಗೇಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಪಿಜಿಸಿಇಟಿ-24 ಗೆ ಹಾಜರಾಗುವ ಅಗತ್ಯ ಇಲ್ಲ. ಆದರೆ, ಅಂತಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ, ಪ್ರವೇಶಕ್ಕೆ ಅರ್ಹರಾಗಬೇಕಾಗುತ್ತದೆ. ಗೇಟ್ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆಯೇ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ನೀಡಲಾಗುತ್ತದೆ.

ಮಕ್ಕಳಿಗೆ ಓದುವ ಅಭ್ಯಾಸ ಬೆಳೆಸೋಕೆ ಇಲ್ಲಿವೆ 5 ಟಿಪ್ಸ್

2024-25ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ (ಎಂಬಿಎ, ಎಂಸಿಎ., ಎಂ.ಟೆಕ್, ಎಂಇ., ಎಂ.ಆರ್ಕಿಟೆಕ್ಚರ್) ಪ್ರವೇಶಕ್ಕೆ ಜುಲೈ 13 ಮತ್ತು 14ರಂದು ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (ಪಿಜಿ ಸಿಇಟಿ-24) ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಿರ್ಧರಿಸಿದೆ. ಎಂಇ, ಎಂ.ಟೆಕ್, ಎಂ.ಆರ್ಕಿಟೆಕ್ಚರ್ ಕೋರ್ಸ್ ಪ್ರವೇಶ ಪರೀಕ್ಷೆ ಜುಲೈ 13ರಂದು ಹಾಗೂ ಎಂಸಿಎ ಮತ್ತು ಎಂಬಿಎ ಕೋರ್ಸ್ ಗಳ ಪ್ರವೇಶ ಪರೀಕ್ಷೆ ಜುಲೈ 14ರಂದು ನಡೆಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಈಗಾಗಲೇ ತಿಳಿಸಿದ್ದಾರೆ.

click me!