ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್: ಸಿಲೆಬಸ್​ ಕಟ್..!

Published : Dec 28, 2020, 07:23 PM IST
ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್: ಸಿಲೆಬಸ್​ ಕಟ್..!

ಸಾರಾಂಶ

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಇನ್ನೂ ಶಾಲೆಗಳು ಪ್ರಾರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ  ಪಠ್ಯವನ್ನು ಕಡಿತಗೊಳಿಸಿದೆ.

ಬೆಂಗಳೂರು, (ಡಿ.28): ಕೊರೊನಾ ವೈರಸ್​ ಹಿನ್ನೆಲೆಯಲ್ಲಿ ಈ ವರ್ಷ ಪ್ರತಿ ಬಾರಿಯಂತೆ ಶಾಲೆ ನಡೆದಿಲ್ಲ. ಹೀಗಾಗಿ, 1ರಿಂದ 10ನೇ ತರಗತಿವರೆಗಿನ ಪಠ್ಯ ಕಡಿತಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಕರ್ನಾಟಕ ಪಠ್ಯ ಪುಸ್ತಕ ಸಂಘದಿಂದ ಸಿಲೆಬಸ್​ ಕಡಿತ ಮಾಡಿರುವ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ. ಸೆ. 1ರಿಂದ ಮಾರ್ಚ್ 31ಕ್ಕೆ ಅನ್ವಯವಾಗುವಂತೆ ಬೋಧನಾ ಅವಧಿಯನ್ನು 220 ಗಂಟೆಯ ಅವಧಿಯಿಂದ 120 ಗಂಟೆಗೆ ಇಳಿಕೆ ಮಾಡಲಾಗಿದೆ.

ರಾಜ್ಯದಲ್ಲಿ ಶಾಲಾ-ಕಾಲೇಜು ಪ್ರಾರಂಭ ಬಗ್ಗೆ ಸ್ಪಷ್ಟನೆ ಕೊಟ್ಟ ಸಿಎಂ ಯಡಿಯೂರಪ್ಪ

ಕೊರೋನಾ ವೈರಸ್​ ಹಿನ್ನೆಲೆಯಲ್ಲಿ ಈವರೆಗೆ ಶಾಲೆಗಳು ಪ್ರಾರಂಭವಾಗಿಲ್ಲ. ಎಲ್ಲ ಕಡೆಗಳಲ್ಲೂ ಆನ್​ಲೈನ್​ ಮೂಲಕವೇ ಶಿಕ್ಷಣ ನೀಡಲಾಗುತ್ತಿದೆ. ಇದನ್ನು ಅರಿತ ಶಿಕ್ಷಣ ಇಲಾಖೆ ಪ್ರತಿ ವಿಷಯಗಳಲ್ಲೂ ಕೆಲ ಪಠ್ಯ ಕಡಿತಗೊಳಿಸಿದೆ. ಕೆಲ ಪ್ರಮುಖ ಪಠ್ಯವನ್ನು ಮಾತ್ರ ಬೋಧಿಸಲು ಸೂಚನೆ ನೀಡಲಾಗಿದೆ.

ಕೊರೋನಾ ಇರುವ ಕಾರಣ ಮಕ್ಕಳು ಶಾಲೆಗೆ ತೆರಳದೇ ಆನ್​​ಲೈನ್​ ಮೂಲಕವೇ ಶಿಕ್ಷಣ ಪಡೆಯತ್ತಿದ್ದಾರೆ. ಆನ್​ಲೈನ್​ನಲ್ಲಿ ಅಂದುಕೊಂಡ ಮಟ್ಟಿಗೆ ಮಾರ್ಗದರ್ಶನ ಪಡೆಯಲಾಗುತ್ತಿಲ್ಲ ಎನ್ನುವುದು ಕೆಲ ವಿದ್ಯಾರ್ಥಿಗಳ ಆರೋಪವಾಗಿತ್ತು. ಅಲ್ಲದೆ, ಎಲ್ಲ ಸಿಲೆಬಸ್​ ಪೂರ್ಣಗೊಳಿಸೋದು ಅಸಾಧ್ಯ ಎನ್ನುವ ಮಾತನ್ನು ಶಿಕ್ಷಕರು ಹೇಳಿದ್ದರು. ಹೀಗಾಗಿ ಪಠ್ಯ ಕಡಿತಗೊಳಿಸಿರುವುದು ವಿದ್ಯಾರ್ಥಿಗಳಿಗೆ ಭಾರೀ ಅನುಕೂಲವಾಗಿದೆ.

ಗಣಿತ - 180 ರಿಂದ 120 ಅವಧಿಗೆ ಇಳಿಕೆ.

ಪರಿಸರ ಅಧ್ಯಯನ - 120 ಅವಧಿ.

ವಿಜ್ಞಾನ - 120 ಅವಧಿ.

ಸಮಾಜ ವಿಜ್ಞಾನ- 120 ಅವಧಿ.

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ