ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ

By Suvarna NewsFirst Published Sep 7, 2020, 5:59 PM IST
Highlights

ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

ಬೆಂಗಳೂರು, (ಸೆ.07): ಪ್ರಸಕ್ತ(2020-21) ಸಾಲಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಅರಿವು ಸಾಲ ಯೋಜನೆಯಡಿ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯವನ್ನು ಕಲ್ಪಿಸಲು ಅರ್ಜಿ ಆಹ್ವಾನಿಸಲಾಗಿದೆ. 

ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಹಾಗೂ ಆಂಗ್ಲೋ ಇಂಡಿಯನ್ ಜನಾಂಗದ ಸಿಇಟಿ, ಎನ್‍ಇಇಟಿ (CET/NEET) ಮುಖೇನ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ 'ಅರಿವು' ವಿದ್ಯಾಭ್ಯಾಸ ಯೋಜನೆಯಡಿಯಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ.

ಬಿ.ಎ, ಬಿ.ಕಾಂ, ಬಿಎಸ್ಸಿ, ಬಿ.ಸಿ.ಎ ವಿದ್ಯಾರ್ಥಿಗಳಿಗೆ ಫ್ರೀ ಟ್ರೈನಿಂಗ್

ಅರಿವು ಯೋಜನೆ (ವಿದ್ಯಾಭ್ಯಾಸ ಸಾಲ)ಯಡಿ ಕರ್ನಾಟಕ ಪ್ರಾಧಿಕಾರದಿಂದ 2020-21ನೇ ಸಾಲಿಗೆ ಸಿಇಟಿ, ಎನ್‍ಇಇಟಿ ಮುಖೇನ ಆಯ್ಕೆಯಾಗಿ ಇಂಜಿನಿಯರಿಂಗ್, ಡೆಂಟಲ್, ಮೆಡಿಕಲ್, ಇನ್ನಿತರೆ ಕೋರ್ಸ್‍ಗಳಿಗೆ ಪ್ರವೇಶ ಪಡೆಯ ಬಯಸುವ ವಿದ್ಯಾರ್ಥಿಗಳು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 'ಅರಿವು ಯೋಜನೆಯಡಿ' ವಿದ್ಯಾಭ್ಯಾಸ ಸಾಲವನ್ನು ಪಡೆಯಲು ವೆಬ್‍ಸೈಟ್ www.kmdc.kar.nic.in/arivu2 ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ, ಹಾರ್ಡ್ ಕಾಪಿ ಮತ್ತು ದಾಖಲಾತಿಗಳನ್ನು ದ್ವಿಪ್ರತಿಯಲ್ಲಿ ಜಿಲ್ಲಾ ಕಚೇರಿಗೆ ನೇರವಾಗಿ ಸಲ್ಲಿಸುವುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್, 18 ಕೊನೆಯ ದಿನವಾಗಿದೆ.

ಸಲ್ಲಿಸಬೇಕಾದ ದಾಖಲಾತಿಗಳು
ಆನ್‍ಲೈನ್‍ನಲ್ಲಿ ಸಲ್ಲಿಸಿದ ಅರ್ಜಿ, ವಿದ್ಯಾರ್ಥಿ ಹಾಗೂ ಪೋಷಕರ ಭಾವ ಚಿತ್ರ-2, ಆಧಾರ್ ಕಾರ್ಡ್, ಪಡಿತರ ಚೀಟಿಯ ಜೆರಾಕ್ಸ್ ಪ್ರತಿ, ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಅಂಕ ಪಟ್ಟಿ ಜೆರಾಕ್ಸ್ ಪ್ರತಿ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ವಾರ್ಷಿಕ ಆದಾಯ ರೂ. 6 ಲಕ್ಷಗಳ ಒಳಗಿರಬೇಕು). ಸಿಇಟಿ/ಎನ್‍ಇಇಟಿ ಪರೀಕ್ಷೆ ಪ್ರವೇಶ ಪತ್ರ. ರೂ. 50 ಗಳ ಇ-ಸ್ಟ್ಯಾಂಪ್‍ನಲ್ಲಿ (INDEMNITY BOND) ಸಲ್ಲಿಸಬೇಕು. ಅರ್ಜಿ ಆನ್‍ಲೈನ್‍ನಲ್ಲಿ ಸಲ್ಲಿಸಿ, ಜಿಲ್ಲಾ ಕಚೇರಿಗೆ ಸಲ್ಲಿಸಲು ಸೆಪ್ಟೆಂಬರ್, 18 ಕೊನೆಯ ದಿನವಾಗಿದೆ. 

ಹೆಚ್ಚಿನ ಮಾಹಿತಿಗೆ ಆಯಾ ಜಿಲ್ಲೆಯವರು ಜಿಲ್ಲಾ ವ್ಯವಸ್ಥಾಪಕರು, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ಸಂಪರ್ಕಿಸಬಹುದಾಗಿದೆ.

click me!