ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಆರಂಭಿಸುವ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಒಂದರಿಂದ 5ನೇ ತರಗತಿ ಆರಂಭದ ವಿಚಾರದ ಬಗ್ಗೆ ಶಿಕ್ಷಣ ಸಚಿವರು ಮಾತನಾಡಿದ್ದಾರೆ.
ತುಮಕೂರು (ಮಾ.17): ಜುಲೈ 15ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸುವ ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ರಾಜ್ಯದಲ್ಲಿ ಕೊರೋನಾ ಮಹಾಮಾರಿ ಎರಡನೇ ಅಲೆ ಈಗಾಗಲೇ ಶುರುವಾಗಿದೆ. ಈ ನಿಟ್ಟಿನಲ್ಲಿ ಗಮನಹರಿಸಬೇಕಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಜುಲೈ 15 ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸುವ ಚಿಂತನೆ ನಡೆದಿದೆ ಎಂದು ಹೇಳಿದರು.
1ರಿಂದ 5ನೇ ತರಗತಿ ಓಪನ್ ಮಾಡಿದ ಶಾಲೆಗಳಿಗೆ ಶಾಕ್ ಕೊಟ್ಟ ಸುರೇಶ್ ಕುಮಾರ್
ಪಠ್ಯಗಳಲ್ಲಿ ಭಗವದ್ಗಿತೆ ಅಳವಡಿಕೆ ಕುರಿತು ಮಾತನಾಡಿದ ಶಿಕ್ಷಣ ಸಚಿವರು ಇದರ ಕುರಿತು ಕುಳಿತು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು. 1-5 ನೇ ತರತಿಗಳು ನಡೆಯಬಾರದು. ಖಾಸಗಿ ಶಾಲೆಗಳು ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಮಾರ್ಚ 1 ರಿಂದ 1-5 ನೇ ತರಗತಿ ಆರಂಭಿಸುವ ಇಚ್ಛೆ ನನಗೂ ಇತ್ತು. ಆದರೆ ಚರ್ಚೆ ಮಾಡಿ ಬೇಡ ಎಂಬ ಅಭಿಪ್ರಾಯಕ್ಕೆ ಬಂದಿದ್ದೆವೆ. ಅಜೀಂ ಪ್ರೇಮ್ ಜಿ ವಿವಿ ಆಘಾತಕಾರಿ ವರದಿ ನೀಡಿದೆ. ಶಾಲೆ ಆರಂಭವಾಗದ ಹಿನ್ನೆಲೆಯಲ್ಲಿ ಮಕ್ಕಳು ಗಣಿತ ಮರೆತಿದ್ದಾರೆ, ಭಾಷೆ ಮರೆತಿದ್ದಾರೆ ಎಂಬುದು ವರದಿಯಲ್ಲಿ ಇದೆ. ಹಾಗಾಗಿ ರಾಜ್ಯ ಸರ್ಕಾರ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ಕಡೆಗೂ ಗಮನ ಕೊಡುತ್ತದೆ ಎಂದು ಸುರೇಶ್ ಕುಮಾರ್ ಹೇಳಿದರು.