ಬೋಧಕ-ಬೋಧಕೇತರ ಸಿಬ್ಬಂದಿಗೆ ಸೂಚನೆ ಶಿಕ್ಷ ಇಲಾಖೆ ಮಹತ್ವದ ಸೂಚನೆ

By Suvarna News  |  First Published Jul 6, 2021, 10:32 PM IST

* ಬೋಧಕ-ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರ್
 * ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸೂಚನೆ
* ಬೋಧಕ, ಬೋಧಕೇತರ ಸಿಬ್ಬಂದಿ ಕೊರೋನಾ ನಿಯಮ ಪಾಲಿಸಿಕೊಂಡು, ಕಡ್ಡಾಯವಾಗಿ ಕಾಲೇಜಿಗೆ ಹಾಜರಾಗಲು ಸೂಚಿಸಿದೆ.


ಬೆಂಗಳೂರು, (ಜುಲೈ.06): ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣ ಕಡಿಮೆಯಾಗುತ್ತಿದ್ದು,  ಸರ್ಕಾರ ಈಗಾಗಲೇ ಅನ್‌ಲಾಕ್ 3.0 ಘೋಷಣೆ ಮಾಡಿದೆ. 

ಈ ಹಿನ್ನೆಲೆಯಲ್ಲಿ ಸರ್ಕಾರಿ, ಅನುದಾನಿತ ಪದವಿ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳ ಶೇ.100 ಬೋಧಕ-ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸೂಚಿಸಿದೆ.

Tap to resize

Latest Videos

ಸರ್ಕಾರದ ಎಲ್ಲ ಸಿಬ್ಬಂದಿ ಶೇ.100 ಕರ್ತವ್ಯಕ್ಕೆ ಹಾಜರಾಗಬೇಕು ಎಂದು ನಿರ್ದೇಶನ ನೀಡಿದೆ. ಇದರಿಂದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಕೊರೋನಾ ನಿಯಮ ಪಾಲಿಸಿಕೊಂಡು, ಕಡ್ಡಾಯವಾಗಿ ಕಾಲೇಜಿಗೆ ಹಾಜರಾಗಲು ಸೂಚಿಸಿದೆ.

ಎಲ್ಲ ವಿದ್ಯಾರ್ಥಿಗಳಿಗೆ ಡಿಡಿಯಲ್ಲಿ ವಿದ್ಯಾಗಮ, ಟೈಮ್ ಟೇಬಲ್ ಇಲ್ಲಿದೆ

ಈ ಮೊದಲು ಎರಡನೇ ಅಲೆಯ ಹಿನ್ನೆಲೆಯಲ್ಲಿ ಉಪನ್ಯಾಸಕರಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿತ್ತು. ಬಹುತೇಕ ಉಪನ್ಯಾಸಕರು ಕಲಿಕಾ ನಿರ್ವಹಣಾ ವ್ಯವಸ್ಥೆ(ಎಲ್‌ಎಂಎಸ್)ಗೆ ಕಲಿಕಾ ಸಾಮಗ್ರಿಯ ಸಿದ್ಧತೆ, ಆನ್‌ಲೈನ್ ಪಾಠ ಸೇರಿದಂತೆ ಕಾಲೇಜಿನ ಬಹುತೇಕ ಕಾರ್ಯವನ್ನು ಮನೆಯಿಂದಲೇ ಮಾಡುತ್ತಿದ್ದರು. 

ಕೆಲವೇ ಕೆಲವು ಉಪನ್ಯಾಸಕರು ಮಾತ್ರ ಪ್ರಾಂಶುಪಾಲರ ಸೂಚನೆಯಂತೆ ಕಾಲೇಜಿಗೆ ಬರುತ್ತಿದ್ದರು. ಈಗ ರಾಜ್ಯಾದ್ಯಂತ ಅನ್‌ಲಾಕ್ ಘೋಷಣೆಯಾಗಿರುವುದರಿಂದ ಎಲ್ಲರೂ ಕಾಲೇಜಿಗೆ ಬರಲು ಸೂಚನೆ ನೀಡಲಾಗಿದೆ.

click me!