ಸಿಇಟಿ ಪರೀಕ್ಷೆಯಲ್ಲಿ ಪಠ್ಯಕ್ರಮದಲ್ಲಿರದ ಪ್ರಶ್ನೆ ಕೇಳಿದ ಆರೋಪ; ಕೀ ಉತ್ತರ ಕೊಟ್ಟಾಗ ಆಕ್ಷೇಪಣೆ ಸಲ್ಲಿಸಿ ಎಂದ ಕೆಇಎ

By Sathish Kumar KHFirst Published Apr 18, 2024, 5:48 PM IST
Highlights

ರಾಜ್ಯಾದ್ಯಂತ ಗುರುವಾರ ನಡೆದ ಸಿಇಟಿ ಜೀವಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ ಪಠ್ಯಕ್ರಮದಲ್ಲಿರದ 10 ಪ್ರಶ್ನೆಗಳನ್ನು ಕೇಳಲಾಗಿದೆ ಎಂಬ ಆರೋಪ ನಿರಾಕರಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೀ ಉತ್ತರ ಪ್ರಕಟಿಸಿದ ನಂತರ ಆಕ್ಷೇಪಣೆ ಸಲ್ಲಿಸಿ ಎಂದು ತಿಳಿಸಿದೆ.

ಬೆಂಗಳೂರು (ಏ.18): ರಾಜ್ಯಾದ್ಯಂತ ಗುರುವಾರ ನಡೆದ ಸಿಇಟಿ ಜೀವಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ ಪಠ್ಯಕ್ರಮದಲ್ಲಿರದ 10 ಪ್ರಶ್ನೆಗಳನ್ನು ಕೇಳಲಾಗಿದೆ ಎಂಬ ಆರೋಪ ನಿರಾಕರಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೀ ಉತ್ತರ ಪ್ರಕಟಿಸಿದ ನಂತರ ಆಕ್ಷೇಪಣೆ ಸಲ್ಲಿಸಿ ಎಂದು ತಿಳಿಸಿದೆ.

ರಾಜ್ಯಾದ್ಯಂತ ಗುರುವಾರ ಆರಂಭವಾದ 2023-24 ನೇ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಮೊದಲನೇ ದಿನ ಜೀವಶಾಸ್ತ್ರ ವಿಷಯ ಪರೀಕ್ಷೆ ನಡೆದಿದೆ. ಆದರೆ, ವಿದ್ಯಾರ್ಥಿಗಳು ಹಾಗೂ ಪೋಷಕರು ಸಿಲೆಬಸ್‌ನಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಕೆಇಎ ಅಧಿಕಾರಿಗಳ ಎಡವಟ್ಟು ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ಜೀವಶಾಸ್ತ್ರದ 60 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ 10 ಪ್ರಶ್ನೆಗಳನ್ನು ಪಠ್ಯಕ್ರಮದಲ್ಲಿ ಇಲ್ಲದ ಪ್ರಶ್ನೆ ಕೇಳಲಾಗಿದೆ ಎಂದು ಹೇಳಿದ್ದರು. ಔಟ್ ಆಫ್ ಸಿಲಬಸ್  ಪ್ರಶ್ನೆಗಳಿಗೆ ಉತ್ತರಿಸಲಾಗಿದೆ ವಿದ್ಯಾರ್ಥಿಗಳ ಪರದಾಡಿದ್ದು,  ಕೆಇಎ ಈ ಪ್ರಶ್ನೆಗಳಿಗೆ ಗ್ರೇಸ್ ಮಾರ್ಕ್ ಕೊಡಬೇಕು ಎಂದು ಪೋಷಕರು ಮನವಿ ಮಾಡಿದ್ದರು. ಜೊತೆಗೆ, ಕೆಇಎ ಕಚೇರಿ ಬಳಿಗೆ ತೆರಳಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆಯನ್ನೂ ಮಾಡಿದ್ದರು.

KCET Exam 2024: ಇಂದು, ನಾಳೆ ಸಿಇಟಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಕಡ್ಡಾಯ ಮಾರ್ಗಸೂಚಿ

ಈ ಕುರಿತು ಪ್ರತಿಕ್ರಿಯೆ ನೀಡಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧಿಕಾರಿ ರಮ್ಯಾ ಅವರು, ನಾವು ಕೇಳಿದ ಎಲ್ಲ ಪ್ರಶ್ನೆಗಳು ಕೂಡ ಪಠ್ಯಕ್ರಮ ಪರಧಿಯಲ್ಲಿರುವ ಪ್ರಶ್ನೆಗಳೇ ಆಗಿವೆ. ಪ್ರಶ್ನೆ ಪತ್ರಿಕೆ ತಯಾರು ಮಾಡಿದ ಸಮಿತಿ ನೀಡಿದ ಪ್ರಶ್ನೆಗಳನ್ನೇ ನಾವು ಪರೀಕ್ಷೆಗೆ ನೀಡಿರೋದು. ಪ್ರಶ್ನೆ ಪತ್ರಿಕೆಯಲ್ಲಿನ ಪ್ರತಿ ಪ್ರಶ್ನೆಯನ್ನು ಕೂಡ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಶ್ನೆ ಮಾಡುವ ಅಧಿಕಾರ ಹೊಂದಿದ್ದಾರೆ. ಇದಕ್ಕಾಗಿಯೇ ಕಿ ಉತ್ತರ ಪ್ರಕಟಿಸಿದ ನಂತರ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುತ್ತೇವೆ ಎಂದರು.

ಇನ್ನು ಜೀವಶಾಸ್ತ್ರ ಪ್ರಶ್ನೆ ಪತ್ರಿಕೆಯಲ್ಲಿ ಸಿಲೆಬಸ್‌ನಲ್ಲಿ ಇಲ್ಲದ ಪ್ರಶ್ನೆ ಕೇಳಲಾಗಿದೆ ಎಂದು ಆರೋಪ ಮಾಡುವವರು ತಮ್ಮ ಬಳಿ ದಾಖಲೆಗಳು ಇದ್ದರೆ ಅವುಗನ್ನು ತಂದು ತೋರಿಸಿ. ಇಲ್ಲವೇ ದಾಖಲೆ ಸಹಿತ ಪರೀಕ್ಷಾ ಪ್ರಾಧಿಕಾರಕ್ಕೆ ದೂರು ನೀಡಿದರೆ ಅದನ್ನು ಪರಿಶೀಲನೆ ಮಾಡಲಾಗುವುದು ಎಂದು ಕೆಇಎ ಕಾರ್ಯ ನಿರ್ವಾಹಕ ಅಧಿಕಾರಿ ರಮ್ಯಾ ತಿಳಿಸಿದರು.

ಸಿಇಟಿಗೆ ಈ ಬಾರಿ ದಾಖಲೆಯ 3.75 ಲಕ್ಷ ಮಂದಿ ನೋಂದಣಿ

ವಿದ್ಯಾರ್ಥಿಗಳು ತಿಳಿಸಿದಂತೆ ಪಠ್ಯಕ್ರಮದಲ್ಲಿರದ ಸಂಭಾವ್ಯ ಪ್ರಶ್ನೆಗಳು : 

  • ಜೀವಶಾಸ್ತ್ರ ಪ್ರಶ್ನೆ ಪತ್ರಿಕೆ ವರ್ಷನ್ ಕೋಡ್ ಎ-2 (Biology Version code:A-2)
  • ಪ್ರಶ್ನೆ ಸಂಖ್ಯೆ- 3 ಹಾಗೂ ಪ್ರಶ್ನೆ ಸಂಖ್ಯೆ- 4: ಜೀವಿಗಳಲ್ಲಿ ಸಂತಾನೋತ್ಪತ್ತಿ- (ಸಂಪೂರ್ಣ ಪಾಠ ತೆಗೆದು ಹಾಕಲಾಗಿದೆ).
  • ಪ್ರಶ್ನೆ ಸಂಖ್ಯೆ 17 ಹಾಗೂ ಪ್ರಶ್ನೆ ಸಂಖ್ಯೆ 42: ಆಹಾರ ಉಪ ಉತ್ಪಾದನೆಯಲ್ಲಿ ವರ್ಧನೆಯ ತಂತ್ರಗಳು- (ಸಂಪೂರ್ಣ ಪಾಠ ತೆಗೆದು ಹಾಕಲಾಗಿದೆ).
  • ಪ್ರಶ್ನೆ ಸಂಖ್ಯೆ- 28:  ಜೀವಿಗಳು ಮತ್ತು ಜನಸಂಖ್ಯೆ (Organisms and populations) (ಭಾಗಶಃ ಪಾಠ ತೆಗೆದು ಹಾಕಲಾಗಿದೆ).
  • ಪ್ರಶ್ನೆ ಸಂಖ್ಯೆ-30 ಹಾಗೂ ಪ್ರಶ್ನೆ ಸಂಖ್ಯೆ-31: ಪರಿಸರ ವ್ಯವಸ್ಥೆ (Ecosystem) (ಭಾಗಶಃ ಅಳಿಸಲಾಗಿದೆ).
  • ಪ್ರಶ್ನೆ ಸಂಖ್ಯೆ-35 ಹಾಗೂ ಪ್ರಶ್ನೆ ಸಂಖ್ಯೆ-36: ಪರಿಸರ ಸಮಸ್ಯೆಗಳು (Environmental issues) (ಸಂಪೂರ್ಣ ಪಾಠ ತೆಗೆದು ಹಾಕಲಾಗಿದೆ).
click me!